ಬೆಳಗಾವಿ:ಜಿಲ್ಲೆಯ ನಿಪ್ಪಾಣಿಯಲ್ಲಿ 5 ಸಾವಿರ ಲಂಚದ ಹಣ ಪಡೆಯುವಾಗ ಉಪ ತಹಶಿಲ್ದಾರ ಹಾಗೂ ವಿಲೇಜ್ ಅಕೌಂಟೆಂಟ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಇಂದು (ಜು 19)ನಿಪ್ಪಾಣಿ ಉಪ ತಹಶಿಲ್ದಾರ ಅಭಿಜಿತ್ ಬೋಂಗಾಳ ಹಾಗೂ ಗ್ರಾಮ ಲೆಕ್ಕಾಧಿಕಾರಿ ಪಾರಿ, ಸತ್ತಿ ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನಿಪ್ಪಾಣಿಯ ರಾಜಕುಮಾರ ತುಕಾರಾಮ್ ಶಿಂಧೆ ಅವರಿಂದ ಆಸ್ತಿಯ ಹೆಸರು ಬದಲಾವಣೆ ಮಾಡಲು 5000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.ಈ ವಿಷಯಕ್ಕೆ ರಾಜಕುಮಾರ ತುಕಾರಾಮ್ ಶಿಂಧೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದರು.ದೂರು ನೀಡಿದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.