25 C
Bengaluru
Monday, December 23, 2024

ಸಬ್‌ರಿಜಿಸ್ಟ್ರಾರ್ ಕಚೇರಿಯ ಕಂಪ್ಯೂಟರ್‌ ಆಪರೇಟರ್ಸ್‌ ಆಯ್ಕೆ ನಿಯಮಗಳು..

ಬೆಂಗಳೂರು: ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಗಣಕಯಂತ್ರ ನಿರ್ವಾಹಕರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ನೋಂದಣಿ ಪರಿವೀಕ್ಷಕರು ಆದೇಶ ಹೊರಡಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂಎಸ್ ಕಂಪ್ಯೂಟರ್ಸ್ ಲಿ.ಸಂಸ್ಥೆಯವರು ಒದಗಿಸುವ ಗಣಕಯಂತ್ರ ನಿರ್ವಾಹಕರನ್ನು ಜಿಲ್ಲಾ ನೋಂದಣಾಧಿಕಾರಿಗಳ ಹಂತದಲ್ಲಿ ಆಯ್ಕೆ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಲಾಗಿದೆ. ಗಣಕಯಂತ್ರ ನಿರ್ವಾಹಕರು ಹೊಂದಿರಬೇಕಾದ ವಿದ್ಯಾರ್ಹತೆ, ಅನುಭವ ಇತರೆ ಮಾಹಿತಿಯ ಕೈಪಿಡಿ ನೀಡಲಾಗಿದೆ. ಅದಾಗಿಯೂ ಗಣಕಯಂತ್ರ ನಿರ್ವಾಹಕರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಪರಿಗಣಿಸಬೇಕು ಎಂದು ಸೂಚಿಸಲಾಗಿದೆ.

* ಅಭ್ಯರ್ಥಿಯ ಬಯೋಡೇಟಾವನ್ನು ಸಿಎಂಎಸ್ ಕಂಪ್ಯೂಟರ್ಸ್ ಲಿ. ಸಂಸ್ಥೆಯು ಆರ್‌ಎಫ್‌ಪಿಯಲ್ಲಿ ನೀಡಲಾಗಿರುವ ನಮೂನೆಯಲ್ಲಿ ಸಲ್ಲಿಸಬೇಕು

* ಅಭ್ಯರ್ಥಿಯು ಆರ್‌ಎಫ್‌ಪಿಯಲ್ಲಿ/ ಕೈಪಿಡಿಯಲ್ಲಿ ತಿಳಿಸಿರುವ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು

* ಅಭ್ಯರ್ಥಿಯು ಅವಶ್ಯಕವಿರುವ ಟೈಪಿಂಗ್ ಸ್ಪೀಡ್ ಹೊಂದಿರುವ ಬಗ್ಗೆ ಟೈಪಿಂಗ್ ಪರೀಕ್ಷೆಯ ಫಲಿತಾಂಶದಿಂದ ಖಚಿತಪಡಿಸಿಕೊಡು ದಾಖಲೆಗಳನ್ನು ಪಡೆಯುವುದು

* ಅಭ್ಯರ್ಥಿಯ ಬ್ಯಾಕ್‌ಗ್ರೌಂಡ್ ವೆರಿಫಿಕೇಷನ್‌ಗೆ ಸಂಬಂಧಿಸಿದಂತೆ ಸೇವಾ ಸಿಂಧು ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು ಹಾಗೂ ಆಯ್ಕೆಯಾದ ಅಭ್ಯರ್ಥಿಯನ್ನು ನಿಯೋಜಿಸುವ ಮುನ್ನ ಸಿಎಂಎಸ್ ಕಂಪ್ಯೂಟರ್ಸ್ ಸಂಸ್ಥೆಯಿಂದ ಬ್ಯಾಕ್‌ಗ್ರೌಂಡ್ ವೆರಿಫಿಕೇಷನ್ ಪ್ರಮಾಣ ಪತ್ರ ಪಡೆಯಬೇಕು

* ಅಭ್ಯರ್ಥಿಯ ಗುರುತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ನೀಡಲಾಗಿರುವ ಗುರುತಿನ ಚೀಟಿಗಳಾದ ಆಧಾರ್ ಕಾರ್ಡ್/ ಚುನಾವಣಾ ಗುರುತಿನ ಚೀಟಿ/ ಪಾಸ್‌ಪೋರ್ಟ್ ಪ್ರತಿಯನ್ನು ಸೇವೆ ಪೂರೈಕೆದಾರರಿಂದ ಪಡೆಯಬೇಕು.

* ಸೇವಾ ಪೂರೈಕೆದಾರರು ಆಯ್ಕೆಯಾದ ಅಭ್ಯರ್ಥಿಯನ್ನು ಕರ್ತವ್ಯಕ್ಕೆ ನಿಯೋಜಿಸುವ ಮುನ್ನ ಅಭ್ಯರ್ಥಿಯ ನೇಮಕಾತಿ ಆದೇಶದೊಂದಿಗೆ ಆರ್‌ಎಫ್‌ಪಿಯಲ್ಲಿ ತಿಳಿಸಿರುವ ನಮೂನೆಯಲ್ಲಿ Non Disclosure Agreement ಹಾಗೂ Undertaking ಅಭ್ಯರ್ಥಿಯಿಂದ ಪಡೆಯಬೇಕು.

* ಆಯ್ಕೆಯಾದ ಅಭ್ಯರ್ಥಿಯನ್ನು ಕರ್ತವ್ಯಕ್ಕೆ ನಿಯೋಜಿಸುವ ಮುನ್ನ ಸೇವಾ ಪೂರೈಕೆದಾರ ಸಂಸ್ಥೆಯಿಂದ ಗುರುತಿನ ಚೀಟಿ ನೀಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಹಾಗೂ ಕಚೇರಿಯ ವೇಲೆ ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಬೇಕು ಎಂದು ಸೂಚಿಸಬೇಕು.

* ಪ್ರತಿ ಗಣಕಯಂತ್ರ ನಿರ್ವಾಹಕರಿಗೆ ಪ್ರತ್ಯೇಕ ಕಡತವನ್ನು ನಿರ್ವಹಿಸಿ ಅದರಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಇರಿಸುವುದು.

* ಗಣಕಯಂತ್ರ ನಿರ್ವಾಹಕರು ಮಾಡುವ ಪ್ರತಿ ಡೇಟಾ ಎಂಟ್ರಿ ತಪ್ಪುಗಳ ವಿವರವನ್ನು ಅವರಿಗೆ ಸಂಬಂಧಿಸಿದಂತೆ ನಿರ್ವಹಿಸಿರುವ ಕಡತದಲ್ಲಿ ದಾಖಲಿಸಬೇಕು.

* ಗಣಕಯಂತ್ರ ನಿರ್ವಾಹಕರ ವಿರುದ್ಧ ಕೈಗೊಳ್ಳವ ಶಿಸ್ತು ಕ್ರಮದ ವಿವರವನ್ನು ಅವರಿಗೆ ಸಂಬಂಧಿಸಿದಂತೆ ನಿರ್ವಹಿಸಿರುವ ಕಡತದಲ್ಲಿ ದಾಖಲಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

Related News

spot_img

Revenue Alerts

spot_img

News

spot_img