27.4 C
Bengaluru
Monday, July 8, 2024

ಮೂರು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಸಬ್ ರಿಜಿಸ್ಟ್ರಾರ್ ಲೋಕಾಯುಕ್ತ ಬಲೆಗೆ

ಕಾರವಾರ;ಮೂರು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಶಿರಸಿ ಸಬ್ ರಿಜಿಸ್ಟ್ರಾರ್ ರಾಧಮ್ಮ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ದಾನ ನೀಡಿದ ಮೂರು ಗುಂಟೆ ಜಮೀನು ನೋಂದಣಿ ಮಾಡಿಕೊಡಲು ಸಬ್ ರಿಜಿಸ್ಟ್ರಾರ್ ರಾಧಮ್ಮ ಮೂರು ಸಾವಿರ ಲಂಚ ಕೇಳಿದ್ದರಂತೆ. ಶಿರಸಿಯ (Sirsi) ಸಬ್ ರಿಜಿಸ್ಟ್ರಾರ್ ಆಫೀಸರ್ ರಾಧಮ್ಮ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಲಂಚ ಪಡೆಯುವಾಗ ರೆಡ್​​ ಹ್ಯಾಂಡ್​​​ ಆಗಿ ಸಬ್ ರಿಜಿಸ್ಟ್ರಾರ್ ಆಫೀಸರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ದಾಸನಕೊಪ್ಪದ ಬಸವರಾಜ ನಂದಿಕೇಶ್ವರ ಮಠದವರ ದೂರಿನ ಹಿನ್ನಲೆ ಈ ಸಂಬಂಧ ಕಾರವಾರ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅದೇ ಪ್ರಕಾರವಾಗಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು,

ಲೋಕಯುಕ್ತ ಬಲೆಗೆ ಗ್ರಾಮ ಪಂಚಾಯ್ತಿ ಪಿಡಿಓ, ಡಾಟಾ ಎಂಟ್ರಿ ಆಪರೇಟರ್

 

ದಾವಣಗೆರೆ;ಮನೆಯ ಖಾತೆ ಇ-ಸ್ವತ್ತು ಮಾಡಿಕೊಡಲು 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ(PDO) ಹಾಗೂ ಡಾಟಾ ಎಂಟ್ರಿ ಆಪರೇಟರ್ ಇಬ್ಬರನ್ನು ಶುಕ್ರವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕೆಚ್ಚೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ (PDO) ನಂದಿಲಿಂಗೇಶ್ ಸಾರಂಗಿಮಠ, ಡಾಟಾ ಆಪರೇಟರ್ ಅಜ್ಜಯ್ಯ ಆರ್ ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ದಾವಣಗೆರೆ ನಿಟುವಳ್ಳಿಯಲ್ಲಿ ವಾಸವಿರುವ ಮೂಲತಃ ಜಗಳೂರು ತಾಲೂಕು ಕೆಳಗೋಟೆ ಗ್ರಾಮದ ಬಸವನಗೌಡ ಎಂಬುವರು ತಮ್ಮ ಗ್ರಾಮದಲ್ಲಿನ ಮನೆಯ ಖಾತೆಗೆ ಇ-ಸ್ವತ್ತು ಮಾಡಿಸಲು ಕೆಚ್ಚೇನಹಳ್ಳಿ ಗ್ರಾಮ ಪಂಚಾಯತ್‌ ಗೆ ಅರ್ಜಿ ಸಲ್ಲಿಸಿದ್ದರು. ಇ-ಖಾತೆ ಮಾಡಿಕೊಡಲು ಪಿಡಿಒ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಅ.21ರಂದು ಬಸವನ ಗೌಡ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಹಿನ್ನಲೆಯಲ್ಲಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಕಚೇರಿಯಲ್ಲೇ ಬಸವನಗೌಡ ಅವರಿಂದ 10 ಸಾವಿರ ರೂಪಾಯಿ ಪಡೆಯುತ್ತಿದ್ದ ಎಸ್.ಎಂ. ನಂದಿಲಿಂಗೇಶ ಸಾರಂಗಮಠ ಮತ್ತು ಅಜ್ಜಯ್ಯನನ್ನು ಲೋಕಾಯುಕ್ತ ಪೊಲೀಸರು ರೆಡ್​ ಹ್ಯಾಂಡ್​ ಆಗಿ ಬಂಧಿಸಿದ್ದಾರೆ.ಇನ್ಸ್ ಪೆಕ್ಟರ್​ಗಳಾದ ಮಧುಸೂದನ್ ಹಾಗೂ ಎಚ್ ಎಸ್ ರಾಷ್ಟ್ರಪತಿ ದಾಳಿಯಲ್ಲಿ ಭಾಗಿಯಾಗಿದ್ದರು.

 

Related News

spot_img

Revenue Alerts

spot_img

News

spot_img