22.4 C
Bengaluru
Friday, November 22, 2024

ಜಮೀನು ಖರೀದಿಯ ನೋಂದಣಿ ಮಾಡಿಕೊಡಲು ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದ ಉಪನೋಂದಣಾಧಿಕಾರಿ

ಬೆಳಗಾವಿ: ಚಿಕ್ಕೋಡಿ ಸಬ್ ರಜಿಸ್ಟರ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, 30 ಸಾವಿರ ಲಂಚ ಸ್ವೀಕರಿಸುವಾಗ ಚಿಕ್ಕೋಡಿ ಸಬ್ ರಜಿಸ್ಟಾರ ಬಲೆಗೆ ಬಿದಿದ್ದಾರೆ.‌ಜಿ‌.ಪಿ. ಶಿವರಾಜು ಲೋಕಾಯುಕ್ತ ಬಲೆಗೆ ಬಿದ್ದ ಸಬ್ ರಜಿಸ್ಟಾರ ಆಗಿದ್ದು, ಲೋಕಾಯುಕ್ತ ಎಸ್.ಪಿ ಯಶೋದಾ ವಂಟಗೂಡಿ ನೇತೃತ್ವದಲ್ಲಿ ನಡೆದ ದಾಳಿ ನಡೆದಿದ್ದು, ಜಮೀನು ಖಾತೆ ಬದಲಾವಣೆ ವಿಚಾರವಾಗಿ 30 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ಸಬ್ ರಜಿಸ್ಟಾರ ಶಿವರಾಜು ಸದ್ಯ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ರಾಜು ಎಂಬುವವರ ಬಳಿ ಹಣಕ್ಕೆ ಬೇಡಿಕೆ ದೂರು ದಾಖಲಿಸಿದ ಹಿನ್ನಲೆ ಇಂದು ಲೋಕಾಯುಕ್ತರ ದಾಳಿ ನಡೆಸಿದ್ದಾರೆ.

ಜಮೀನು ಖರೀದಿಯ ನೋಂದಣಿ ಮಾಡಿಕೊಡಲು ₹30 ಸಾವಿರ ಲಂಚ ತೆಗೆದುಕೊಳ್ಳುತ್ತಿದ್ದ ಚಿಕ್ಕೋಡಿ ಉಪನೋಂದಣಾಧಿಕಾರಿ ಜಿ.ಪಿ. ಶಿವರಾಜು, ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಮಹಾರಾಷ್ಟ್ರದ ಇಚಲಕರಂಜಿಯ ರಾಜು ಲಕ್ಷ್ಮಣ ಪಾಚ್ಚಾಪುರೆ ಎನ್ನುವವರು ಚಿಕ್ಕೋಡಿ ತಾಲ್ಲೂಕಿನ ಡೊಣೆವಾಡ ಗ್ರಾಮದಲ್ಲಿ ಜಮೀನು ಖರೀದಿಸಿದ್ದರು. ನೋಂದಣಿ ಶುಲ್ಕ, ಮುದ್ರಾಂಕ ಶುಲ್ಕವೂ ಸೇರಿದಂತೆ ಎಲ್ಲವನ್ನು ತುಂಬಿದ್ದರು. ಆದರೆ, ಜಮೀನನ್ನು ಅವರ ಹೆಸರಿಗೆ ಮಾಡಿಕೊಡಲು ಉಪನೋಂದಣಾಧಿಕಾರಿ ₹ 30 ಸಾವಿರ ಲಂಚ ಕೇಳಿದ್ದರು. ಈ ಬಗ್ಗೆ ರೈತ ರಾಜು ಅವರು ದೂರು ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಯಶೋದಾ ವಂಟಗೂಡಿ ತಿಳಿಸಿದ್ದಾರೆ.

ಶಿವರಾಜು ಅವರು ಮಂಗಳವಾರ ಲಂಚದ ಹಣ ತೆಗೆದುಕೊಳ್ಳುವ ವೇಳೆ ಅವರನ್ನು ಹಣದ ಸಮೇತ ಹಿಡಿಯಲಾಗಿದೆ. ಈ ಕೃತ್ಯಕ್ಕೆ ಸಹಕರಿಸಿದಯ ಸಹಾಯಕ ಹುಸೇನ್‌ ಇಮಾಮ್‌ಸಾಬ್‌ ರೆಹಮಾನ್‌ಬಾಯಿ. ಹಾಗೂ ಮಧ್ಯವರ್ತಿ, ಕಂಪ್ಯೂಟರ್‌ ಆಪರೇಟರ್‌ ಸಂದೀಪ ಶಂಕರ ಪಾಟೀಲ ಅವರನ್ನೂ ದಸ್ತಗಿರಿ ಮಾಡಿ ಕಾನೂನು ಕ್ರಮ ಜರುಗಿಸಿ ದ್ದಾರೆ.ಪೊಲೀಸ್ರು ಆರೋಪಿಗಳನ್ನು ಬಂದಿಸಿ 30ಸಾವಿರ ರೂ ನಗದು ವಶಪಡಿಸಿಕೊಂಡಿದ್ದಾರೆ

Related News

spot_img

Revenue Alerts

spot_img

News

spot_img