22 C
Bengaluru
Monday, December 23, 2024

ಕಾವೇರಿ 2.0 ತಂತ್ರಾಂಶದ ಅನುಷ್ಠಾನಕ್ಕೆ ಸಿಬ್ಬಂದಿ ನೇಮಕ

ಬೆಂಗಳೂರು, ಮಾ. 09 : ಇನ್ಮುಂದೆ ಸರತಿ ಸಾಲಿನಲ್ಲಿ ಸಬ್‌ ರಿಜಿಸ್ಟಾರ್‌ ಕಚೇರಿಯಲ್ಲಿ ನಿಂತು ಆಸ್ತಿ ನೋಂದಣಿಯನ್ನು ಮಾಡಿಸಬೇಕಿಲ್ಲ.ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಿಗುವ ಎಲ್ಲಾ ಸೇವೆಗಳನ್ನು ಪಾಸ್ಪೋರ್ಟ್ ಮಾದರಿಯಲ್ಲಿ ಒದಗಿಸಲು ಕಂದಾಯ ಇಲಾಖೆ ಕಾವೇರಿ 2 ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ ಮೈಸೂರು, ಬೆಂಗಳೂರು, ಬೆಳಗಾವಿ ದಕ್ಷಿಣ ಹಾಗೂ ಗುಲಬರ್ಗಾ ಜಿಲ್ಲೆಯ ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ಇದು ರಾಜ್ಯಾದ್ಯಂತ ಮುಂದಿನ ವರ್ಷ ಎಲ್ಲೆಡೆ ಸೆವೆಗೆ ಸಿಗಲಿದೆ. ಇದೀಗ “ಕಾವೇರಿ-2” ತಂತ್ರಾಂಶದ ಅನುಷ್ಠಾನಕ್ಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

 

ಕಾವೇರಿ-2 ತಂತ್ರಾಂಶವನ್ನು ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಗಳಿಗೆ ವಿಸ್ತರಿಸುವ ಸಂಬಂಧ ಕಛೇರಿಯ ಉಲ್ಲೇಖಿತ ಚಿತ್ರದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿರುವುದು ಸರಿಯಷ್ಟೇ. ಸದರಿ ನೋಡಲ್ ಅಧಿಕಾರಿಗಳಿಗೆ ಅಗತ್ಯ ಸಹಕಾರ ನೀಡುವ ಸಂಬಂಧ ಸಹಾಯಕ ನೋಡಲ್ ಅಧಿಕಾರಿಗಳನ್ನು ಈ ಕೆಳಕಂಡಂತೆ ನೇಮಿಸಿದೆ. ಸದ್ಯ, ಮೈಸೂರು, ಬೆಳಗಾವಿ, ಬೆಂಗಳೂರು, ಕಲಬುರಗಿ ವಿಭಾಗದಲ್ಲಿ ಒಟ್ಟು 35 ಉಪನೋಂದಣಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರ ಹೆಸರನ್ನು ಈ ಕೆಳಗೆ ನೀಡಲಾಗಿದೆ.

ಮೈಸೂರು ವಿಭಾಗದಲ್ಲಿ 8 ಉಪನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ. ರಾಜೇಂದ್ರಪ್ರಸಾದ ಹೆಚ್.ಎಂ. ಉಪನೋಂದಣಾಧಿಕಾರಿ, ಗುಂಡ್ಲುಪೇಟೆ ಕಛೇರಿ, ಜಿಲ್ಲಾ ನೋಂದಣಿ ಕಛೇರಿ, ಮೈಸೂರು. ಎಂ.ವಿವೇಕ್‌, ಹಿರಿಯ ಉಪನೋಂದಣಾಧಿಕಾರಿ, ಟಿ.ನರಸೀಪುರ. ಜೆ.ಎಸ್.ಕುಮಾರಸ್ವಾಮಿ, ಉಪನೋಂದಣಾಧಿಕಾರಿ, ಕೆ.ಆರ್.ಪೇಟೆ, ಸೌಮ್ಯ ಲತಾ, ಉಪನೋಂದಣಾಧಿಕಾರಿ, ಮಡಿಕೇರಿ. ಹನುಮನಗೌಡ, ಉಪನೋಂದಣಾಧಿಕಾರಿ, ಹಾಸನ. ಮಂಜು, ಹಿರಿಯ ಉಪನೋಂದಣಾಧಿಕಾರಿ, ಚಿಕ್ಕಮಗಳೂರು. ಶಶಿಧರ್, ಉಪನೋಂದಣಾಧಿಕಾರಿ, ಮಂಗಳೂರು. ಫಣೀಂದ್ರ, ಉಪನೋಂದಣಾಧಿಕಾರಿ, ಉಡುಪಿ.

ಕಲಬುರಗಿ ವಿಭಾಗದಲ್ಲಿ 7 ಮಂದಿಯನ್ನು ನೇಮಿಸಿದ್ದು, ವಿಟಲ್ ಕಂಬಾರ್, ಉಪನೋಂದಣಾಧಿಕಾರಿ, ಚಿಂಚೋಳಿ. ಸುಭಾಸ ಹೊಸಳ್ಳಿ, ಉಪನೋಂದಣಾಧಿಕಾರಿ, ಬೀದರ್. ಸಲೀಂ ಮೊಹಿಯುದ್ದೀನ್, ಉಪನೋಂದಣಾಧಿಕಾರಿ, ರಾಯಚೂರು. ಪ್ರದೀಪ್ ಕುಮಾರ್ ಕೆ, ಉಪನೋಂದಕಾಧಿಕಾರಿ, ಕೊಪ್ಪಳ. ಗುರುರಾಜ್ ಸಜ್ಜನ್ ಉಪನೋಂದನಾಧಿಕಾರಿ, ಶುರಾಪುರ. ಚಂದ್ರಕಾಂತ್‌ ಎಂ, ಉಪನೋಂದಣಾಧಿಕಾರಿ, ಕಂಪ್ಲಿ. ಪ್ರೇಮಾನಂದ ಡಿ.ಜಿ, ಉಪನೋಂದಣಾಧಿಕಾರಿ, ಹೂವಿನಹಡಗಲಿ.

ಬೆಂಗಳೂರು ವಿಭಾಗದಲ್ಲಿ ರವೀಂದ್ರಗೌಡ, ಉಪನೋಂದಣಾಧಿಕಾರಿ, ದೇವನಹಳ್ಳಿ, ಪ್ರಸಾದ್‌ ಕುಮಾರ್‌ ಎನ್, ಉಪನೋಂದಣಾಧಿಕಾರಿ ಕೋಲಾರ. ನಾರಾಣಪ್ಪ, ಉಪನೋಂದಣಾಧಿಕಾರಿ, ಚಿಂತಾಮಣಿ. ತಿಪ್ಪೇರುದ್ರಪ್ಪ, ಉಪನೋಂದಣಾಧಿಕಾರಿ, ಹೊಳಲ್ಕೆರೆ. ರವಿ ಟಿ.ಎಸ್, ಉಪನೋಂದಣಾಧಿಕಾರಿ, ಹೊಸನಗರ. ರಾಮಕೃಷ್ಣಪ್ಪ, ಉಪನೋಂದಣಾಧಿಕಾರಿ, ಹರಿಹರ. ಸತೀಶ್, ಉಪನೋಂದಣಾಧಿಕಾರಿ, ಮಧುಗಿರಿ. ಸುಮ, ಉಪನೋಂದಣಾಧಿಕಾರಿ, ರಾಮನಗರ. ಗಿರೀಶ್‌ ಚಂದ್ರ, ಉಪನೋಂದಣಾಧಿಕಾರಿ, ಬಿದಿರಹಳ್ಳಿ. ಎಂ.ವಿ.ಸತೀಶ್, ಉಪನೋಂದಣಾಧಿಕಾರಿ, ಮಾದನಾಯಕನಹಳ್ಳಿ. ಜಯಪ್ರಕಾಶ್, ಉಪನೋಂದಣಾಧಿಕಾರಿ, ಯಲಹಂಕ. ರಾಘವೇಂದ್ರ, ಉಪನೋಂದಣಾಧಿಕಾರಿ, ಬಸವನಗುಡಿ. ಲೋಕೇಶ್, ಉಪನೋಂದಣಾಧಿಕಾರಿ, ರಾಜರಾಜೇಶ್ವರಿನಗರ.

 

ಬೆಳಗಾವಿ ವಿಭಾದಲ್ಲಿ 7 ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ. ರಿಜ್ವಾನ್‌ ಮಹತ್, ಉಪನೋಂದಣಾಧಿಕಾರಿ, ಹುಬ್ಬಳ್ಳಿ ದಕ್ಷಿಣ. ದೇವಪ್ಪ ದಂಬಾಳ್, ಉಪನೋಂದಣಾಧಿಕಾರಿ, ಬಸವನಬಾಗೇವಾಡಿ. ಪ್ರದೀಪ್‌ ಚೌಹಾನ್, ಉಪನೋಂದಣಾಧಿಕಾರಿ, ಬಾದಾಮಿ. ಶ್ರೀನಿವಾಸ್, ಉಪನೋಂದಣಾಧಿಕಾರಿ, ಯಲ್ಲಾಪುರ. ವಿನಯ್‌ ಕೀರ್ತಿ, ಉಪನೋಂದಣಾಧಿಕಾರಿ, ಶಿಗ್ಗಾಂವ್.‌ ವಿರುಪಾಕ್ಷಯ್ಯ, ಉಪನೋಂದಣಾಧಿಕಾರಿ, ಗಜೇಂದ್ರಘಡ.

Related News

spot_img

Revenue Alerts

spot_img

News

spot_img