ಬೆಂಗಳೂರು, ಜು. 01 : ವಿದ್ಯಾರ್ಥಿಗಳು ಕೂಡ ಈಗ ಕ್ರೆಡಿಟ್ ಕಾರ್ಡ್ ಅನ್ನು ಸುಲಭವಾಗಿ ಪಡೆಯಬಹುದು. ಕ್ರೆಡಿಟ್ ಕಾರ್ಡ್ ಪಡೆಯಲು ಕೆಲಸಕ್ಕೆ ಹೋಗಲೇ ಬೇಕು ಎಂದೇನಿಲ್ಲ. ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವುದು ಹೇಗೆ..? ಕ್ರಡಿಟ್ ಕಾರ್ಡ್ ಅನ್ನು ಹೇಗೆ ಬಳಸಬೇಕು..? ಕ್ರೆಡಿಟ್ ಕಾರ್ಡ್ ನಲ್ಲಿ ಬಡ್ಡಿ ಎಷ್ಟು ಎಂಬ ಬಗ್ಗೆ ಮಾಹಿತಿಯನ್ನು ಕೂಡ ನೀಡಲಾಗಿದೆ. ಇನ್ನು ಇಷ್ಟು ದಿನ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬೇಕು ಎಂದರೆ, ಅವರಿಗೆ ಸಂಬಳ ಬರಬೇಕು. ಯಾವುದಾದರೂ ನೌಕರಿಯನ್ನು ಹೊಂದಿರಬೇಕು ಎಂದು ತಿಳಿದುಕೊಂಡಿದ್ದರು.
ಆದರೆ, ಕೆಲಸವಿಲ್ಲದವರೂ ಅಥವಾ ಬಿಸಿನೆಸ್ ಮಾಡುತ್ತಿರುವವರು ಕೂಡ ಕ್ರೆಡಿಟ್ ಕಾರ್ಡ್ ಅನ್ನು ಅರಾಮವಾಗಿ ಪಡೆಯಬಹುದು. ಇದರ ಬಗ್ಗೆ ಹೆಚ್ಚಿನವರಲ್ಲಿ ಮಾಹಿತಿ ಇರುವುದಿಲ್ಲ. ಈಗ ನೌಕರಿಯಲ್ಲಿರುವವರಿಗೆ ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಸಂಬಳ ಜಮೆ ಆಗುತ್ತದೆ. ಅವರ ವಹಿವಾಟನ್ನು ತಿಳಿದ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ನೀಡಲು ಮುಂದೆ ಬರುತ್ತದೆ. ತಾವಾಗಿಯೇ ಕರೆದು ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತದೆ. ಆದರೆ ಉದ್ಯಮಿಗಳು, ವಿದ್ಯಾರ್ಥಿಗಳು ಹಾಗೂ ಗೃಹಿಣಿಯರು ತಾವೇ ಬ್ಯಾಂಕ್ ಗೆ ಹೋಗಿ ಕ್ರೆಡಿಟ್ ಕಾರ್ಡ್ ಗಾಗಿ ಅಪ್ಲೈ ಮಾಡಬೇಕಾಗುತ್ತದೆ.
ಉದ್ಯಮಿಗಳು, ತಾವು ತೆರಿಗೆ ಕಟ್ಟುವ ಬಿಲ್, ತಮ್ಮ ಬ್ಯಾಂಕ್ ಖಾತೆಯ ವಿವರ, ಅವರ ಹಣದ ವಹಿವಾಟು, ವ್ಯಾಪಾರಗಳ ಬಗ್ಗೆ ದಾಖಲೆಗಳ ಸಮೇತ ಬ್ಯಾಂಕ್ ಗೆ ತೆರಳಬೇಕು. ಉದ್ಯಮಿಗಳು ಅಲ್ಲಿ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ಅನ್ನು ಭರ್ತಿ ಮಾಡಿ ಕೊಟ್ಟರೆ, ಬ್ಯಾಂಕ್ ದಾಖಲೆಗಳನ್ನು ಪರಿಶೀಲಿಸಿ ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತದೆ. ಇನ್ನು ಗೃಹಿಣಿಯರಿಗೆ ಹಣದ ಮೂಲವೇ ಪತಿಯಾದರೆ, ವಿದ್ಯಾರ್ಥಿಗಳಿಗೆ ಪೋಷಕರು. ಅದೂ ಕೂಡ ಗೃಹಿಣಿಯರಿಗೆ ಸಂಸಾರವನ್ನು ತೂಗಲು ಬಳಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಪಾಕೆಟ್ ಮನಿಯೇ ಎಲ್ಲವೂ.
ಇನ್ನು ಹೇಗೆ ಕ್ರೆಡಿಟ್ ಕಾರ್ಡ್ ಅನ್ನು ಪಡೆಯುವುದು ಅಲ್ವಾ.. ಗೃಹಿಣಿಯರು ಹಾಗೂ ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಯಲ್ಲಿ ಒಂದಿಷ್ಟು ಹಣವನ್ನು ಎಫ್ ಡಿ ಮಾಡಿದರೆ ಸಾಕು ಬ್ಯಾಂಕ್ ನವರು ಕ್ರೆಡಿಟ್ ಕಾರ್ಡ್ ಅನ್ನು ನೀಡುತ್ತಾರೆ. ಯಾಕೆಂದರೆ, ಬ್ಯಾಂಕ್ ನವರಿಗೆ ನಿಮ್ಮ ಎಫ್ ಡಿ ಹಣವೇ ಗ್ಯಾರೆಂಟಿ ಆಗಿರುತ್ತದೆ. ಆದರೆ, ವಿದ್ಯಾರ್ಥಿಗಳಿಗೆ 18 ವರ್ಷ ತುಂಬಿದ್ದರೆ ಮಾತ್ರವೇ ಕ್ರೆಡಿಟ್ ಸೌಲಭ್ಯಗಳು ಸಿಗುತ್ತದೆ.