ಫೆ-22;ಭದ್ರತೆಯ ಲೋಪದಿಂದಾದಿ ಫೆ.21 ರಂದು ಚಿಂಚೋಳಿ ಬಸ್ ನಿಲ್ದಾಣದಿಂದ ಕಳ್ಳತನವಾಗಿದ್ದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC)ಗೆ ಸೇರಿದ ಬಸ್ಸನ್ನು ಚಿಂಚೋಳ್ಳಿ ಪೊಲೀಸರು ನೇರೆಯ ರಾಜ್ಯ ತೆಲಂಗಾಣದಲ್ಲಿ ಪತ್ತೆ ಹಚ್ಚಿದ್ದು ಬಸ್ ಕದ್ದಿದ ಕಳ್ಳರಿಗೆ ಹುಡುಕಾಟ ನಡೆಸಿದ್ದಾರೆ.
ಬೀದರ್ ಜಿಲ್ಲಿಯೇ ಡಿಫೋ-02 ಗೆ ಸೇರಿದ ಚಿಂಚೋಳ್ಳಿ-ಬೀದರ್ ಮಾರ್ಗವಾಗಿ ಸಂಚರಿಸುವ ಬಸ್ಸಿನ ನೊಂದಣಿ ಸಂಖ್ಯೆ: ಕೆಎ 38 ಎಫ್ 971 ಬಸ್ ಅನ್ನು ಚಿಂಚೋಳ್ಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕರು ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು ಕಳ್ಳರು ಮಂಗಳವಾರ ಮುಂಜಾನೆ 03.30 ರ ವೇಳೆಗೆ ಬಸ್ ಚಾಲನೆ ಮಾಡಿಕೊಂಡು ಒಯ್ಯುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಸ್ ಅನ್ನು ಕಳ್ಳರು ತಾಲ್ಲೂಕಿನ ಪೋಲಕಪಳ್ಳಿ ಮಿರಿಯಾಣ, ತೆಲಂಗಾಣದ ತಾಂಡೂರು ಮಾರ್ಗವಾಗಿ ಕೊಡಂಗಲವರೆಗೆ 55 ಕಿ.ಮೀ ಒಯ್ದಿದ್ದಾರೆ. ನಂತರ ಕೊಡಂಗಲನಿಂದ ಹಿಂದಕ್ಕೆ ಬಂದು ಚಿಂಚೋಳಿಯಿಂದ 30 ಕಿ.ಮೀ ದೂರದ ಭೂ ಕೈಲಾಸದ ರಸ್ತೆ ಬದಿ ತಗ್ಗಿನಲ್ಲಿ ನಿಲ್ಲಿಸಿ ಪರಾರಿ ಆಗಿದ್ದಾರೆ. ಎಂದು ಪೊಲೀಸರು ಹೆಳಿದ್ದಾರೆ.
ಬಸ್ ಪತ್ತೆಗಾಗಿ ರಚ್ಚಿಸಿದ ಪೊಲೀಸ್ ತಂಡಗಳು ಹೈದರಾಬಾದ್ ಮತ್ತು ಮಹಿಬೂಬ ನಗರಕ್ಕೆ ತೆರಳಿದ್ದವು. ಕಳುವಾದ 13 ಗಂಟೆಯಲ್ಲಿ ಅಂದರೆ ಮಂಗಳವಾರ ಮಧ್ಯಾಹ್ನ 04 ಗಂಟೆಯ ವೇಳೆಗೆ ಬಸ್ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಸಿಪಿಐ ಅಮರಪ್ಪ ಶಿವಬಲ್ ತಿಳಿಸಿದ್ದಾರೆ.