ಬೆಂಗಳೂರು, 30 : ಈಗ ಎಲ್ಲರೂ ಮನೆಯನ್ನು ಕಟ್ಟಿಕೊಳ್ಳುವಾಗ ಸ್ಟಿಲ್ಟ್ ಫ್ಲೋರ್ ಅನ್ನು ಕಟ್ಟಿಕೊಳ್ಳುತ್ತಾರೆ. ಎರಡು ಮೂರು ಫ್ಲೋರ್ ನಲ್ಲಿ ಮನೆಯನ್ನು ಕಟ್ಟುವುದರಿಂದ ಈ ಸ್ಟಿಲ್ಟ್ ಫ್ಲೋರ್ ನಲ್ಲಿ ಕಾರು, ವಾಹನಗಳ ಪಾರ್ಕಿಂಗ್ ಗೆ ಸ್ಥಳವನ್ನು ಮಾಡಿಕೊಳ್ಳುತ್ತಾರೆ. ರಸ್ತೆಗಿಂತಲೂ ನಿವೇಶನ ಕೊಂಚ ಕೆಳಗಿದ್ದರೆ, ಮಣ್ಣು ತುಂಬಿಸಿ ಎತ್ತರ ಮಾಡಿ ಮನೆಯನ್ನು ಕಟ್ಟಿಕೊಳ್ಳುವುದಕ್ಕಿಂತಲೂ, ಇನ್ನು ಸ್ವಲ್ಪ ಮಣ್ಣನ್ನು ತೆಗೆದು, ಅಲ್ಲಿ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಿ, ಫಸ್ಟ್ ಫ್ಲೋರ್ ನಿಂದ ಮನೆಯ ನಿರ್ಮಾಣವನ್ನು ಮಾಡಿಕೊಳ್ಳುತ್ತಾರೆ.
ಹೀಗೆ ಸುಮಾರು ಜನ ಪಾರ್ಕಿಂಗ್ ಸ್ಥಳವನ್ನು ನಿರ್ಮಾಣ ಮಾಡಿಕೊಳ್ಳುತ್ತಾರೆ. ಅಪಾರ್ಟ್ ಮೆಂಟ್ ಗಳಲ್ಲಿ, ಆಫೀಸ್ ಕಟ್ಟಡಗಳಲ್ಲಂತೂ ಇಂತಹ ಪಾರ್ಕಿಂಗ್ ಸ್ಥಳಗಳು ಸಾಮಾನ್ಯವಾಗಿದೆ. ಹೀಗೆ ಸ್ಟಿಲ್ಟ್ ಫ್ಲೋರ್ ಅನ್ನು ಕಟ್ಟುವಾಗ ಸಾಕಷ್ಟು ತಪ್ಪುಗಳನ್ನು ಮಾಡಲಾಗುತ್ತದೆ. ಅದರಲ್ಲಿ ಬಹಳ ಮುಖ್ಯವಾಗಿ ಯುಟಿಲಿಟಿ ನಿರ್ಮಾಣ. ಸಂಪ್, ಲಿಫ್ಟ್, ಟ್ರಾನ್ಸ್ ಫಾರ್ಮ್, ಜನರೇಟರ್, ಯುಪಿಎಸ್, ಸ್ಟೇರ್ ಕೇಸ್ ಹೀಗೆ ಯೂಟಿಲಿಟಿ ಗಳನ್ನು ಸರಿಯಾದ ಸ್ಥಳದಲ್ಲಿ ಹಾಕಬೇಕಾಗುತ್ತದೆ.
ಇದೆಲ್ಲವನ್ನು ವಾಸ್ತು ಪ್ರಕಾರವೇ ಹಾಕಬೇಕು. ಎಲೆಕ್ಟ್ರಿಕ್ ಎಂದು ಬಂದಾಗ, ಜನರೇಟರ್ – ಯುಪಿಎಸ್ ಗಳನ್ನು ವಾಯುವ್ಯದಲ್ಲಿಯೇ ಹಾಕಬೇಕು. ಸಂಪ್ ಅನ್ನು ಹಾಕುವಾಗ ಈಶಾನ್ಯ, ಸ್ಟೇರ್ ಕೇಸ್ ಅನ್ನು ಆಗ್ನೇಯದಿಂದ ವಾಯುವ್ಯಕ್ಕೆ ಅಥವಾ ದಕ್ಷಿಣದಿಂದ ಪಶ್ಚಿಮಕ್ಕೆ ಹಾಕಬೇಕಾಗುತ್ತದೆ. ಇಷ್ಟಾ ಬಂದಂತೆ ಪೂರ್ವದಲ್ಲೋ, ಪಶ್ಚಿಮದಲ್ಲೋ ಅಥವಾ ಎಲ್ಲೆಂದರಲ್ಲಿ ಯುಟಿಲಿಟಿಗಳನ್ನು ನಿರ್ಮಾಣ ಮಾಡಲು ಆಗುವುದಿಲ್ಲ. ಸುಮಾರು ಜನ ಸ್ಟೇರ್ ಕೇಸ್ ಅನ್ನು ತಪ್ಪಾಗಿ ಹಾಕುತ್ತಾರೆ.
ಪಾರ್ಕಿಂಗ್ ಸ್ಥಳ ಆದಷ್ಟು ಖಾಲಿ ಇರುತ್ತದೆ. ಹಾಗಾಗಿ ಯುಟಿಲಿಟಿಗಳನ್ನು ಸ್ವಲ್ಪ ಗಮನ ಹರಿಸಿ ಹಾಕಬೇಕಾಗುತ್ತದೆ. ಇನ್ನು ಸರ್ವೆಂಟ್ ಮನೆಯನ್ನು ಪಾರ್ಕಿಂಗ್ ಬಳಿ ಹಾಕುತ್ತಾರೆ. ಇದನ್ನು ಎಲ್ಲೆಂದರಲ್ಲಿ ಹಾಕಲು ಸಾಧ್ಯವಾಗುವುದಿಲ್ಲ. ಸರ್ವೆಂಟ್ ಮನೆಯನ್ನು ವಾಯುವ್ಯ ದಿಕ್ಕಿನಲ್ಲೇ ಹಾಕಬೇಕು. ಅದೇ ಸರಿಯಾದ ದಿಕ್ಕಿನಲ್ಲಿ ಹಾಕಿದರೆ, ಯಾವುದೇ ಸಮಸ್ಯೆಗಳು ಕಾಣಿಸುವುದಿಲ್ಲ. ಅದರ ಬದಲು ಎಲ್ಲೆಂದರಲ್ಲಿ ಯುಟಿಲಿಟಿಗಳನ್ನು ನಿರ್ಮಾಣ ಮಾಡಿದರೆ, ಮೇಲೆ ನಿರ್ಮಾಣ ಮಾಡುವ ಮನೆಗಳಿಗೂ ಇದರಿಂದ ಸಮಸ್ಯೆ ಆಗುತ್ತದೆ.
ಯುಟಿಲಿಟಿ ನಿರ್ಮಾಣದಲ್ಲಿ ತಪ್ಪಾದರೆ, ಮನೆಗೆ ನೀರಿನ ಪೈಪ್ ಕನೆಕ್ಷನ್ ಗಳು, ಮನೆಯಿಂದ ಹೊರ ಹೋಗುವ ನೀರಿನ ಪೈಪ್ ಗಳು ವಿರುದ್ಧ ದಿಕ್ಕಿನಲ್ಲಿ ಹಾಕಿದರೆ, ಆಗ ಮತ್ತೆ ಸಮಸ್ಯೆ ಆಗುತ್ತದೆ. ಇದರಿಂದ ಕುಟುಂಬದಲ್ಲೂ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಹಾಗಾಗಿ ಸ್ಟಿಲ್ಟ್ ಫ್ಲೋರ್ ಗಳನ್ನು ಕಟ್ಟುವಾಗ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ಕಾರ್ ಪಾರ್ಕಿಂಗ್ ಯುಟಿಲಿಟಿ ಕೂಡ ಮನೆ ಕಟ್ಟುವಾಗಲೇ ನಿರ್ಮಾಣ ಮಾಡಬೇಕಾಗುತ್ತದೆ. ಮನೆಗೆ ವಾಸ್ತುವನ್ನು ನೋಡಿದಂತೆಯೇ ಪಾರ್ಕಿಂಗ್ ಸ್ಥಳಕ್ಕೂ ವಾಸ್ತು ನೋಡಬೇಕಾಗುತ್ತದೆ.
ಮನೆ ಕಟ್ಟುವ ಮುನ್ನವೇ ವಾಸ್ತು ತಜ್ಞರನ್ನು ನೋಡಿ ಪಾರ್ಕಿಂಗ್ ಸ್ಥಳವನ್ನು ಎಲ್ಲಿ ಕಟ್ಟಬೇಕು ಎಂದು ತಿಳಿಯಬೇಕಾಗುತ್ತದೆ. ವಾಯುವ್ಯದಲ್ಲಿ ಹಾಗೂ ಆಗ್ನೇಯದಲ್ಲಿ ಕಟ್ಟುತ್ತಾರೆ. ಆದರೆ, ಪಾರ್ಕಿಂಗ್ ಜಾಗವನ್ನು ಕಟ್ಟುವಾಗ ಕಾಂಪೌಂಡ್ ಗೋಡೆಗೆ ಅಟ್ಯಾಚ್ಡ್ ಆಗಿ ಕಟ್ಟಿರುತ್ತಾರೆ. ಇದರಿಂದ ಸಮಸ್ಯೆಗಳು ಉದ್ಭವವಾಗುತ್ತವೆ. ಸರಿಯಾದ ಸ್ಥಳದಲ್ಲೇ ಇದ್ದರೂ ಕೂಡ ನಿರ್ಮಾಣ ಮಾಡುವಾಗ ಆಗುವ ತಪ್ಪಿನಿಂದ ಹೀಗಾಗುತ್ತದೆ. ವಾಯುವ್ಯ ಹಾಗೂ ಆಗ್ನೇಯ ದಿಕ್ಕಿನಲ್ಲಿ ಕಾರು ಪಾರ್ಕಿಂಗ್ ಅನ್ನು ಕಟ್ಟುವುದು ಸರಿ.
ಆದರೆ, ಮೂಲೆ ಮುಚ್ಚುವಂತೆ ಕಟ್ಟುವುದು ಸಮಸ್ಯೆ ಆಗುತ್ತದೆ. ಈ ಎರಡು ದಿಕ್ಕಿನಲ್ಲಿ ನಮಗೆ ಎಲ್ಲಿ ಸೂಕ್ತವಾಗುತ್ತದೆಯೋ ಅಲ್ಲಿ ನಿರ್ಮಾಣ ಮಾಡಿಕೊಳ್ಳಬಹುದು. ಈ ಹಿಂದೆ ಮನೆಯನ್ನು ಕಟ್ಟುವಾಗ ಪಾರ್ಕಿಂಗ್ ಗೆ ಎಂದು ಒಂದು ಕಾರನ್ನು ನಿಲ್ಲಿಸಿಕೊಳ್ಳಲು ಈ ಎಡರು ದಿಕ್ಕಿನಲ್ಲಿ ಪಾರ್ಕಿಂಗ್ ಸ್ಥಳವನ್ನು ನಿರ್ಮಾಣ ಮಾಡುತ್ತಿದ್ದರು. ಆದರೆ, ಈಗ ಮನೆಯಲ್ಲಿ ಎರಡು ಮೂರು ಕಾರುಗಳನ್ನು ಇರುವುದರಿಂದ ಪಾರ್ಕಿಂಗ್ ಗೆ ದೊಡ್ಡ ಸ್ಥಳ ಬೇಕಾಗುತ್ತದೆ.