21.1 C
Bengaluru
Monday, December 23, 2024

ಇನ್ನೂ ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿದ್ದರೆ ಹೀಗೆ ಮಾಡಿ

ಬೆಂಗಳೂರು, ಜು. 01 : ಬ್ಯಾಂಕ್ ನಲ್ಲಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವಂತೆ ಬಹಳ ಹಿಂದೆಯೇ ಹೇಳಲಾಗಿದೆ. ಹಾಗೊಂದು ವೇಳೆ, ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದೇ ಇದ್ದಲ್ಲಿ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಣ ವರ್ಗಾವಣೆಗೆ ಕಷ್ಟವಾಗುತ್ತದೆ. ಬ್ಯಾಂಕ್ ಖಾತೆಗೆ ಪ್ಯಾನ್ ಕಾRFWF ಹಾಗೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಬಹಳ ಮುಖ್ಯವಾಗಿದೆ. ಈಗಂತೂ ಮೊಬೈಲ್ ನಲ್ಲಿ ಸುಲಭವಾಗಿ ಲಿಂಕ್ ಮಾಡಬಹುದು. ಅದು ಹೇಗೆ ಎಂದು ತಿಳಿಯಿರಿ..

 

ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿರುವವರು ನಿಮ್ಮ ಬ್ಯಾಂಕ್ ಮೊಬೈಲ್ ಅಪ್ಲಿಕೇಷನ್ ಗೆ ಸೈನ್ ಇನ್ ಆಗಬೇಕು. ಅದರಲ್ಲಿ My Account ಸೆಕ್ಷನ್ ಗೆ ತೆರಳಿ Services ಎಂಬ ಪೇಜ್ ಗೆ ಹೋಗಿ, ಅಲ್ಲಿ View/Update Aadhaar card details ಅನ್ನು ಆಯ್ಕೆ ಮಾಡಿ. ನಂತರ ಆಧಾರ್ ಕಾರ್ಡ್ ಮೇಲಿರುವ ಸಂಖ್ಯೆಯನ್ನು ಎರಡು ಬಾರಿ ನಮೂದಿಸಿ. ಬಳಿಕ Submit ಬಟನ್ ಅನ್ನು ಒತ್ತಿ. ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆದ ಕೂಡಲೇ ನಿಮಗೊಂದು ನೋಟೀಫಿಕೇಷನ್ ಬರುತ್ತದೆ.

ಇನ್ನು ಮೊಬೈಲ್ ಬಿಟ್ಟು ಆಫ್ ಲೈನ್ ಮೂಲಕವೂ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ಅದಕ್ಕಾಗಿ ನೀವು ಬ್ಯಾಂಕ್ ಗೆ ತೆರಳಬೇಕಾಗುತ್ತದೆ. ಬ್ಯಾಂಕ್ ನಲ್ಲಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಅಪ್ಲಿಕೇಶನ್ ಪಡೆಯಿರಿ. ಅದರಲ್ಲಿ ನೀಡಿರುವ ಎಲ್ಲಾ ವಿವರಗಳನ್ನು ತುಂಬಿಸಿ. ಆಧಾರ್ ಕಾರ್ಡ್ ಜೆರಾಕ್ಸ್ ಕಾಪಿಯನ್ನು ಕೂಡ ಅದರ ಜೊತೆಗೆ ಸೇರಿಸಿ. ಬ್ಯಾಂಕ್ ಅಧಿಕಾರಿಗಳಿಗೆ ಕೊಟ್ಟು ಬನ್ನಿ. ಆಗ ಬ್ಯಾಂಕ್ ಅಧಿಕಾರಿಗಳು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡುತ್ತಾರೆ. ಇದರ ಬಗ್ಗೆ ನಿಮಗೆ ಸಂದೇಶವನ್ನೂ ಕಳಿಸುತ್ತಾರೆ.

Related News

spot_img

Revenue Alerts

spot_img

News

spot_img