staying#rented# farbetter#revenufacts#apartment
ಬೆಂಗಳೂರು, ಏ. 10 : ಬಾಡಿಗೆ ಮನೆಯಲ್ಲಿ ಇದ್ದು ಸಾಕಾಗಿ ಎಲ್ಲರೂ ಈಗ ಸ್ವಂತ ಮನೆಗಳನ್ನು ಖರೀದಿಸಲು ಮುಂದಾಗಿದ್ದಾರೆ. ಹೀಗಿರುವಾಗ ಇಲ್ಲೊಬ್ಬರು ಹಣಕಾಸು ತಜ್ಞರು ಬಾಡಿಗೆ ಮನೆಯೇ ಬೆಸ್ಟ್ ಎಂದು ಟ್ವೀಟ್ ಮಾಡಿದ್ದು, ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದಕ್ಕೆ ಕೆಲವರು ತದ್ವಿರುದ್ಧವಾಗಿ ಕಮೆಂಟ್ ಮಾಡುತ್ತಿದ್ದರೆ, ಕೆಲವರು ತಲೆ ಆಡಿಸಿ ಸುಮ್ಮನಾಗಿದ್ದಾರೆ.
ಹಣಕಾಸು ತಜ್ಷರಾದ ಶರಣ್ ಹೆಗಡೆ ಅವರು ಟ್ವೀಟ್ ಮಾಡಿದ್ದಾರೆ. ನಾನು ಈಗ 7 ಕೋಟಿ ಬೆಲೆಬಾಳುವ ಫ್ಲಾಟ್ ನಲ್ಲಿ 1.5ಲಕ್ಷ ಬಾಡಿಗೆಯನ್ನು ನೀಡುತ್ತಿದ್ದೇನೆ. ಫ್ಲಾಟ್ ಅನ್ನು 7 ಕೋಟಿ ಕೊಟ್ಟು ಖರೀದಿಸಬೇಕು ಎಂದರೆ, ತಿಂಗಳಿಗೆ 5 ಲಕ್ಷದಂತೆ 20 ವರ್ಷಗಳಕಾಲ ಲೋನ್ ಕಟ್ಟಬೇಕು. ಇದರ ಜೊತೆಗೆ ರಿಜಿಸ್ಟೇಷನ್ ಚಾರ್ಜ್, ತೆರಿಗೆ ಸೇರಿದಂತೆ ಹಲವು ಖರ್ಚುಗಳು ಬರುತ್ತವೆ. ಅಲ್ಲದೇ, 20 ವರ್ಷಗಳ ಕಾಲ ನಮ್ಮ ಆದಾಯವನ್ನು ಸಂಪೂರ್ಣವಅಗಿ ಈ ಸ್ವಂತ ಫ್ಲಾಟ್ ಗೆಂದೇ ಮೀಸಲಿಡಬೇಕು.
ಅದೇ 20 ವರ್ಷದ ಬಳಿಕ ಈ ಫ್ಲಾಟ್ ಅನ್ನು ಮಾರಾಟ ಮಾಡಿದರೆ, ಸಿಗುವುದು ಕೇವಲ 27 ಕೋಟಿ ರೂಪಾಯಿ. ಅದೇ, ಬಾಡಿಗೆ ಕಟ್ಟುತ್ತಾ, ಮಿಕ್ಕ ಹಣವನ್ನು 12% ಬಡ್ಡಿ ಸಿಗುವ ನಿಫ್ಟಿ 50 ಇಂಡೆಕ್ಸ್ ಫಂಡ್ನಲ್ಲಿ ಹೂಡಿಕೆ ಮಾಡಿದರೆ, 40 ಕೋಟಿ ಹಣವನ್ನು ಗಳಿಸಬಹುದು ಎಂದು ಶರಣ್ ಹೆಗಡೆ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಇದನ್ನು ನೋಡಿದ ಹಲವರು ತಲೆಯಾಡಿಸಿದ್ದಾರೆ.
ಇನ್ನು ಮುಂದುವರಿದು ಶರಣ್ ಹೆಗಡೆ ಅವರು ಕೆಲಸ ಒಂದು ಕಡೆ ಎಂದು ಇರುವುದಿಲ್ಲ. ಒಂದು ನಗರದಿಂದ ಮತ್ತೊಂದು ನಗರಕ್ಕೆ ತೆರಳಬೇಕಾಗುತ್ತದೆ. ಬೆಂಗಳೂರು, ಮುಂಬೈ, ದೆಹಲಿ ಅಂತ ಅಲೆದಾಡಬೇಕಾಗುತ್ತದೆ. ಆಗ ಬಾಡಿಗೆ ಮನೆಯಿದ್ದರೆ, ಖಾಲಿ ಮಾಡಿಕೊಂಡು ಮತ್ತೊಂದು ಮನೆಗೆ ತೆರಳುವುದು ಬಹಳ ಸುಲಭ. ಅದೇ ಸ್ವಂತ ಮನೆಯಿದ್ದರೆ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಇದಕ್ಕೆ ಕೆಲವರು ಕಮೆಂಟ್ ಮಾಡಿದ್ದು, ಬಾಡಿಗೆ ಮನೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ. 10 ರಷ್ಟು ಅಧಿಕ ಹಣವನ್ನು ನೀಡಬೇಕಾಗುತ್ತದೆ. ಸ್ವಂತ ಮನೆಯನ್ನು ಖರೀದಿಸಿದರೆ, ಕೊನೆ ಗಾಲದಲ್ಲಾದರೂ ಸುಖವಾಗಿರಬಹುದು. ಬಾಡಿಗೆ ಕಟ್ಟುವುದು ಹೂಡಿಕೆ ಆಗುವುದಿಲ್ಲ. ಸ್ವಂತ ಮನೆಗೆಂದು ಲೋನ್ ಕಟ್ಟಿದರೆ ಅದು ಹೂಡಿಕೆಯಂತೆ ಎಂದು ಹೇಳಿದ್ದಾರೆ.