14.8 C
Bengaluru
Wednesday, January 22, 2025

ಪ್ರತಿ ಶನಿವಾರ ರಜೆ ನೀಡುವಂತೆ ಮನವಿ ಮಾಡಿದ ರಾಜ್ಯ ಸರ್ಕಾರಿ ನೌಕರರು

ಬೆಂಗಳೂರು, ಮಾ. 07: ರಾಜ್ಯ ಸರ್ಕಾರಿ ನೌಕರರಿಗೆ ಯುಗಾದಿಯ ಬಂಪರ್ ಆಫರ್ ಸಿಕ್ಕ ಬೆನ್ನಲ್ಲೇ, ಇದೀಗ ನೌಕರರ ಸಂಘ ಮತ್ತೊಂದು ಬೇಡಿಕೆಯನ್ನು ಇಟ್ಟಿದೆ. 7ನೇ ವೇತನ ಆಯೋಗ ಮುಂದೆ ಸರ್ಕಾರಿ ನೌಕರರರ ಸಂಘ ಪ್ರತಿ ಶನಿವಾರ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಮನವಿ ಮಾಡಿದೆ. ಇನ್ನು ಶಿಕ್ಷಣ ಸಂಸ್ಥೆಯನ್ನು ಹರತು ಪಡಿಸಿ ವಾರದಲ್ಲಿ ಐದು ದಿನ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರಿ ನೌಕರರು ಮನವಿ ಮಾಡಿದ್ದಾರೆ.

ಈಗಾಗಲೇ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳ 2 ಮತ್ತು 4ನೇ ಶನಿವಾರದಂದು ರಜೆ ನೀಡಲಾಗಿದೆ. ಆದರೆ ಇದೀಗ ಸರ್ಕಾರಿ ನೌಕರರ ಸಂಘ ಉಳಿದ ಎರಡು ಶನಿವಾರವೂ ರಜೆ ನೀಡಬೇಕು. ಈ ಮೂಲಕ ವಾರದಲ್ಲಿ 5 ದಿನ ಮಾತ್ರವೇ ಕೆಲಸ ಇರಬೇಕು ಎಂದು ಕೇಳಿದ್ದಾರೆ. ಜೊತೆಗೆ ನಿತ್ಯ ಬೆಳಗ್ಗೆ 10 ಗಂಟೆಗೆ ಕಚೇರಿ ಆರಂಭಿಸುವ ಬದಲು 9.30ಕ್ಕೆ ಶುರು ಮಾಡಬೇಕು. ಸಂಜೆ 5.30ಗೆ ಕಚೇರಿ ಮುಗಿಯುವ ಬದಲು 6ಗಂಟೆಯವರೆಗೂ ತೆರೆದಿರಬೇಕು ಎಂದು ಕೇಳಿದೆ.

ಇನ್ನು 7ನೇ ವೇತನ ಆಯೋಗ ಪ್ರತಿ ಶನಿವಾರ ರಜೆ ನೀಡಬೇಕು ಎಂಬ ಅಂಶವನ್ನು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸುವ ಮೊದಲೇ ನೀಡುತ್ತದೆಯೋ ಎಂದು ತಿಳಿಯಬೇಕಿದೆ. ಇಲ್ಲವೇ ಸರ್ಕಾರ ಮಧ್ಯಂತರ ವರದಿ ಅನುಷ್ಠಾನ ಮಾಡುವ ಸಂದರ್ಭದಲ್ಲಿ ಪ್ರತಿ ಶನಿವಾರ ರಜೆಯನ್ನು ನೀಡುತ್ತದೆಯೋ ತಿಳಿದಿಲ್ಲ. ಇನ್ನು ಸರ್ಕಾರ 7ನೇ ವೇತನ ಆಯೋಗ ತನ್ನ ವರದಿಯನ್ನು ಮಂಡಿಸದೆ ಮಧ್ಯಂತರ ವರದಿ ಅನುಷ್ಠಾನವನ್ನು ಮಾಡುತ್ತದೆಯೋ ಕಾದು ನೋಡಬೇಕಿದೆ.

ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸಿದ ಸರ್ಕಾರ, ಏ.1ರಿಂದ ಜಾರಿಯಾಗುವಂತೆ ಶೇ.17ರಷ್ಟು ವೇತನವನ್ನು ಹೆಚ್ಚಳ ಮಾಡಲಾಗಿದೆ. ಇದು ಹಾಲಿ ನೌಕರರು ಹಾಗೂ ನಿವೃತ್ತರು ಸೇರಿದಂತೆ ಒಟ್ಟು 15 ಲಕ್ಷ ನೌಕರರಿಗೆ ಅನ್ವಯವಾಗಲಿದೆ. 2023ರಿಂದ ಅನ್ವಯವಾಗುವಂತೆ ಸರ್ಕಾರಿ ನೌಕರರು, ಸ್ಥಳೀಯ ಸಂಸ್ಥೆ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆ, ವಿಶ್ವವಿದ್ಯಾನಿಲಯ ಬೋಧಕೇತರ ಸಿಬ್ಬಂದಿಗೆ ಮೂಲ ವೇತನ ಶೇ.17ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲಾಗಿದೆ.

Related News

spot_img

Revenue Alerts

spot_img

News

spot_img