26.7 C
Bengaluru
Sunday, December 22, 2024

ಸಮಂತಾ ಖರೀದಿಸಿದ ಹೊಸ ಐಷಾರಾಮಿ ಡ್ಯುಪ್ಲೆಕ್ಸ್ ಅಪಾರ್ಟ್ ಮೆಂಟ್ ಹೇಗಿದೆ ನೋಡಿ..

ಬೆಂಗಳೂರು, ಮೇ. 11 : ಸ್ಟಾರ್ ಗಳ ಮನೆಗಳು ಐಷಾರಾಮಿಯಿಂದ ಕೂಡಿರುತ್ತದೆ. ಸ್ಟಾರ್ ಗಳು ದೊಡ್ಡ ದೊಡ್ಡ ಬಂಗಲೆಗಳ ಜೊತೆ, ಅಪಾರ್ಟ್ ಮೆಂಟ್ ಗಳಲ್ಲಿ ಫ್ಲ್ಯಾಟ್ ಗಳನ್ನು ಕೂಡ ಖರೀದಿ ಮಾಡುತ್ತಾರೆ. ಮನೆಯಲ್ಲಿ ಒಬ್ಬರು ಇಬ್ಬರು ವಾಸ ಮಾಡಿದರೂ ಕೂಡ ದೊಡ್ಡ ದೊಡ್ಡ ಐಷಾರಾಮಿ ಮನೆಗಳಲ್ಲಿ ಇರಲು ಬಯಸುತ್ತಾರೆ. ಇನ್ನು ಸ್ಟಾರ ನಟರ ಮನೆಗಳು ಹೇಗಿದೆ ಎಂದು ನೋಡುವುದು ಕೂಡ ಹಲವರಿಗೆ ಕತೂಹಲಕಾರಿಯಾಗಿರುತ್ತದೆ. ಇದೀಗ ನಟಿ ಸಮಂತಾ ರುತ್ ಪ್ರಭು ಖರೀದಿಸಿರುವ ಹೊಸ ಅಪಾರ್ಟ್ ಮೆಂಟ್ ಹೇಗಿದೆ ಎಂದು ನೋಡೋಣ ಬನ್ನಿ..

ಸಿನಿಮಾಗಳ ಜೊತೆಗೆ ಕೆಲ ಬಿಸಿನೆಸ್‌ ಗಳನ್ನೂ ಹೊಂದಿರುವ ಸಮಂತಾ ಅವರ ಬಳಿ ಈಗಾಗಲೇ ಎರಡು ಮೂರು ಮನೆಗಳಿವೆ. ಹೀಗಿದ್ದರೂ ಮತ್ತೊಂದು ಐಷಾರಾಮಿ ಫ್ಲಾಟ್ ಅನ್ನು ಖರೀದಿ ಮಾಡಿದ್ದಾರೆ. ಇದು ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ ಆಗಿದೆ. ಹೈದರಾಬಾದ್ ನ ಜಯಭೇರಿ ಆರೆಂಜ್ ಕೌಂಟಿಯಲ್ಲಿ ಫ್ಲಾಟ್‌ ಇದೆ. ಇದರ ಬೆಲೆ ಬರೋಬ್ಬರಿ 7.8 ಕೋಟಿ ರೂಪಾಯಿ ಆಗಿದೆ. ಈ ಅಪಾರ್ಟ್‌ ಮೆಂಟ್ ನ 13ನೇ ಹಾಗೂ 14ನೇ ಮಹಡಿಯ ಡ್ಯುಪ್ಲೆಕ್ಸ್‌ ಮನೆ ಇದಾಗಿದೆ.

13ನೇ ಮಹಡಿಯು 3,920 ಚದರ ಅಡಿ ಇದ್ದು, 14ನೇ ಮಹಡಿ 4,024 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್ ಒಟ್ಟು 7,944 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಎಂದು ಹೇಳಲಾಗಿದೆ. ಈ ಆಸ್ತಿಯು ಹೈದರಾಬಾದ್ ನ ನಾನಕ್‌ರಾಮ್ ಎಂಬ ಐಷಾರಾಮಿ ಸೊಸೈಟಿಯ ಅಡಿಯಲ್ಲಿ ಬರುತ್ತದೆ. ಇನ್ನು ಸಮಂತಾ ಅವರು ಈಗಾಗಲೇ ಜೂಬ್ಲಿ ಹಿಲ್ಸ್ ನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇದರೊಂದಿಗೆ ಮುಂಬೈನಲ್ಲಿ ಸಹ 15 ಕೋಟಿ ರೂಪಾಯಿ ಮೌಲ್ಯದ ಮನೆಯೂ ಇದೆ.

ಹಾಗಿದ್ದರೂ ಈಗ ಸಮಂತಾ ಅವರು ಮತ್ತೊಂದು ಅಪಾರ್ಟ್ ಮೆಂಟ್‌ ಅನ್ನು ಖರೀದಿ ಮಾಡಿದ್ದಾರೆ. ಸದಾ ಸ್ಟೈಲಿಶ್‌ ಲುಕ್‌ ಗಳಲ್ಲಿ ಕಾಣಿಸಿಕೊಳ್ಳುವ ಸಮಂತಾ ಅವರು ತಮ್ಮ ಬ್ಯೂಟಿಗಅಗಿಯೇ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಇನ್ನು ಇವರ ಬಳಿ ಇರುವ ಹ್ಯಾಂಡ್‌ ಬ್ಯಾಗ್‌, ಹೈ ಹೀಲ್ಡ್ಸ್‌ ಗಳು ಕೂಡ ಬ್ರ್ಯಾಂಡೆಡ್‌ ಗಳೇ ಆಗಿವೆ.

Related News

spot_img

Revenue Alerts

spot_img

News

spot_img