21.1 C
Bengaluru
Monday, December 23, 2024

5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯಕ್ತರ ಬಲೆಗೆ ಬಿದ್ದ ವಿಶೇಷ ತಹಶೀಲ್ದಾರ್

ಬೆಂಗಳೂರು: ಲೋಕಾಯುಕ್ತದಿಂದ ಭ್ರಷ್ಟರ ಭೇಟೆ ಮುಂದುವರಿದಿದ್ದಯು 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಉತ್ತರ ವಿಭಾಗದ ವಿಶೇಷ ತಹಶೀಲ್ದಾರ್ ವರ್ಷಾ ಒಡೆಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಮಂಗಳವಾರ ಸಂಜೆ ನಡೆದ ವಿಶೇಷ ಕಾರ್ಯಾಚಾರಣೆಯಲ್ಲಿ ಐದು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿರುವಾಗಲೇ ವರ್ಷಾ ಒಡೆಯರ್ ಮತ್ತು ರಮೇಶ್ ಎಂಬ ಖಾಸಗಿ ವ್ಯಕ್ತಿಗೆ ಲೋಕಾಯುಕ್ತ ಪೊಲೀಸರು ಬಲೆ ಬೀಸಿದ್ದಾರೆ.

ಖಾತಾ ಬದಲಾವಣೆ ಮಾಡುವುದಕ್ಕಾಗಿ ವರ್ಷಾ ಒಡೆಯರ್ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕಾಂತರಾಜು ಎಂಬುವವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಬೆಂಗಳೂರು ನಗರ ಘಟಕದ ಎಸ್‌ಪಿ ಅಶೋಕ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

Related News

spot_img

Revenue Alerts

spot_img

News

spot_img