26.7 C
Bengaluru
Sunday, December 22, 2024

ಸಿದ್ದರಾಮಯ್ಯರ ಪರಿಪೂರ್ಣ ಸಂಪುಟ ರಚನೆ;ಪ್ರಮಾಣವಚನ ಸ್ವೀಕರಿಸಿದ 24 ಮಂದಿ ಶಾಸಕರು

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸಚಿವರಾಗಿ 24 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದರು.ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರು ಪ್ರಮಾಣವಚನ ಭೋದಿಸಿದರು.ಮೇ 20 ರಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿಯೂ, ಡಿ.ಕೆ ಶಿವಕುಮಾರ್‌ ಅವರು ಉಪಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಸ್ವೀಕರಿಸಿದ್ದರು. ಅವರ ಜತೆ ಜಿ. ಪರಮೇಶ್ವರ, ಕೆ.ಎಚ್ ಮುನಿಯಪ್ಪ, ಕೆ.ಜೆ.ಜಾರ್ಜ್, ಸತೀಶ ಜಾರಕಿಹೊಳಿ, ಎಚ್.ಕೆ ಪಾಟೀಲ, ರಾಮಲಿಂಗಾರೆಡ್ಡಿ, ಪ್ರಿಯಾಂಕ ಖರ್ಗೆ, ಜಮೀರ್ ಅಹ್ಮದ್ ಖಾನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಎಚ್.ಕೆ.ಪಾಟೀಲ, ಕೃಷ್ಣ ಬೈರೇಗೌಡ, ಎನ್.ಚಲುವರಾಯಸ್ವಾಮಿ, ಕೆ.ವೆಂಕಟೇಶ್‌, ಡಾ.ಎಚ್‌.ಸಿ.ಮಹದೇವಪ್ಪ, ಈಶ್ವರ ಖಂಡ್ರೆ, ಕೆ.ಎನ್‌.ರಾಜಣ್ಣ, ದಿನೇಶ್‌ ಗುಂಡೂರಾವ್‌, ಶರಣಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ, ಆರ್.ಬಿ.ತಿಮ್ಮಾಪುರ, ಎಸ್‌.ಎಸ್‌.ಮಲ್ಲಿಕಾರ್ಜುನ, ಶಿವರಾಜ ತಂಗಡಗಿ, ಶರಣ ಪ್ರಕಾಶ ಪಾಟೀಲ, ಮಂಕಾಳ ಸುಬ್ಬ ವೈದ್ಯ,ಲಕ್ಷ್ಮಿ ಹೆಬ್ಬಾಳಕರ, ರಹೀಂ ಖಾನ್‌, ಡಿ.ಸುಧಾಕರ್‌, ಸಂತೋಷ್‌ ಎಸ್‌.ಲಾಡ್‌, ಎನ್‌.ಎಸ್.ಬೋಸರಾಜು,ಬೈರತಿ ಸುರೇಶ್‌,ಮಧು ಬಂಗಾರಪ್ಪ, ಡಾ.ಎಂ.ಸಿ.ಸುಧಾಕರ್‌, ಬಿ.ನಾಗೇಂದ್ರ ಅವರು ಸಂ‍ಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

Related News

spot_img

Revenue Alerts

spot_img

News

spot_img