ಬಿಗ್ ಬಾಸ್ ಮನೆಯಲ್ಲಿ ಇಂದು ಸಂಜೆ ಪ್ರಸಾರವಾಗಬೇಕಿದ್ದ ವಾರದ ಕಥೆ ಕಿಚ್ಚನ ಜೊತೆ ಮತ್ತು ಕಿಚ್ಚನ ಪಂಚಾಯಿತಿ ಪ್ರಸಾರವಾಗೋದಿಲ್ಲ. ಕಾರಣ ಶನಿವಾರದ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಸುದೀಪ್ ನೇತೃತ್ವದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿ ಇಂದು ಮತ್ತು ನಾಳೆ ನಡೆಯುತ್ತಿದೆ. ಇಂದು ಅದ್ಧೂರಿಯಾಗಿ ಪಂದ್ಯಕ್ಕೆ ಚಾಲನೆ ಸಿಗಲಿದೆ. ಹೀಗಾಗಿ ಕಿಚ್ಚ ಸುದೀಪ್ ಚಿತ್ರೀಕರಣದಲ್ಲಿ ಭಾಗವಹಿಸಿಲ್ಲ. ಇಂದು ಸಂಜೆ ಪ್ರಸಾರವಾಗಬೇಕಿದ್ದ ವಾರದ ಕಥೆ ಕಿಚ್ಚನ ಜೊತೆ ಮತ್ತು ಕಿಚ್ಚನ ಪಂಚಾಯಿತಿ ಪ್ರಸಾರವಾಗುವುದಿಲ್ಲ. ಹೀಗಾಗಿ ಬಿಗ್ ಬಾಸ್ ಪ್ರೇಕ್ಷಕರು ಕಿಚ್ಚನ ಪಂಚಾಯ್ತಿ ನಡೆಯೋಲ್ಲ ಅಂತ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ, ಇದನ್ನ ನಡೆಸಿಕೊಡೋಕೆ ಕನ್ನಡದ ನಟಿ ಹಾಗೂ ಬಿಗ್ ಬಾಸ್ ವಿನ್ನರ್ ಶೃತಿಯವರನ್ನ ಈ ವಾರದ ಪಂಚಾಯ್ತಿ ನಡೆಸಿಕೊಡೋಕೆ ಬಂದಿದ್ದಾರೆ.
ಬಿಗ್ ಬಾಸ್ ಮನೆಯ ಸ್ಪರ್ಧಿಗಳೆಲ್ಲಾ ಇಗ ಕಟಕಟೆ ಪಾಲು..!
ಹೀಗಾಗಿ ಇಂದಿನ ಕಾರ್ಯಕ್ರಮವನ್ನು ನೆನಪಿಸುವಂತಹ ಮತ್ತೊಂದು ಏರ್ಪಾಟನ್ನು ಮಾಡಿಕೊಂಡಿದೆ ಬಿಗ್ ಬಾಸ್ ಟೀಮ್. ಇಂದು ಮನೆಯೊಳಗೆ ಹಿರಿಯ ನಟಿ, ಬಿಗ್ ಬಾಸ್ ವಿನ್ನರ್ ಶ್ರುತಿ ಅವರನ್ನು ಕಳುಹಿಸಿದೆ. ಬೆಳಗ್ಗೆ ಎಲ್ಲ ಸ್ಪರ್ಧಿಗಳೂ ನೋಡುತ್ತಿದ್ದ ಹಾಗೆಯೇ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಅದರಿಂದ ಶ್ರುತಿ ಅವರು ಮನೆಯೊಳಗೆ ಪ್ರವೇಶಿಸಿದ್ದಾರೆ. ಎಲ್ಲರೂ ಸಂತೋಷದ ಅಲೆಯಲ್ಲಿ ತೇಲುತ್ತಿರುವ ಹಾಗೆಯೇ ಕಟಕಟೆಯಲ್ಲಿ ನಿಲ್ಲುವ ಸಮಯ ಪ್ರತಿಯೊಬ್ಬರಿಗು ಸಹ ಎದುರಾಗಿದೆ. ಇನ್ನು ಶ್ರುತಿ ನ್ಯಾಯಾಧೀಶರ ಕುರ್ಚಿಯಲ್ಲಿ ಕೂತಿದ್ದಾರೆ.
ವಿಜಯ್ ರಾಘವೇಂದ್ರ ಪಂಚಾಯ್ತಿ ಕೂಡ ನಡೆಯಲಿದ್ಯಾ..?
ವಿಜಯ್ ಕೂಡ ಹತ್ತಾರು ರಿಯಾಲಿಟಿ ಶೋನಲ್ಲಿ ಭಾಗಿಯಾದವರು. ಈ ಹಿಂದೆ ಬಿಗ್ ಬಾಸ್ ಮನೆಯಲ್ಲೂ ಇದ್ದವರು. ಹಾಗಾಗಿ ವಿಜಯ್ ರಾಘವೇಂದ್ರ ಅವರನ್ನು ಎರಡನೇ ದಿನಕ್ಕೆ ಅತಿಥಿಯಾಗಿ ದೊಡ್ಮನೆ ಒಳಗೆ ಕಳುಹಿಸಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಈ ವಿಷಯವನ್ನು ವಾಹಿನಿಯೇ ಸ್ಪಷ್ಟಪಡಿಸಬೇಕಿದೆ.ಇನ್ನು ಬಿಗ್ ಬಾಸ್ ಮನೆಯ ಪ್ರೇಕ್ಷಕರಿಗೆ ಯಾರ ಪಂಚಾಯ್ತಿ ಇಷ್ಟವಾಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.