26.7 C
Bengaluru
Sunday, December 22, 2024

ಶಿವರಾತ್ರಿ ಆಚರಣೆ ಹಿಂದೆ ಹಲವು ಕಥೆಗಳಿದ್ದು, ಅವುಗಳ ಬಗ್ಗೆ ತಿಳಿಯಿರಿ..

ಬೆಂಗಳೂರು, ಫೆ. 18 : ಮಹಾ ಶಿವರಾತ್ರಿ ಹಬ್ಬವನ್ನು ಭಾರತ, ನೇಪಾಳ ಹಾಗೂ ಪಾಕಿಸ್ಥಾನಗಳಲ್ಲಿ ಆಚರಿಸಲಾಗುತ್ತದೆ. ಈಶ್ವರನ ಹಬ್ಬ ಎಂದೇ ಕರೆಯುವ ಶಿವರಾತ್ರಿ ಹಬ್ಬವನ್ನು ದಕ್ಷಿಣ ಭಾರತದಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ. ಶಿವ ಆರಾಧಕರಿಗೆ ಇದು ದೊಡ್ಡ ಹಬ್ಬ. ಉಪವಾಸ ಮಾಡಿ, ಜಾಗರಣ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಷ್ಟಕ್ಕೂ ಈ ಶಿವರಾತ್ರಿ ಹಬ್ಬವನ್ನು ಆಚರಿಸುವುದರ ಹಿಂದಿನ ಕಥೆ ಏನೆಂದು ಹಲವರಿಗೆ ತಿಳೀದಿರುವುದಿಲ್ಲ. ಅದರ ಬಗ್ಗೆ ತಿಳೀಯೋಣ ಬನ್ನಿ. ಇನ್ನು ಶಿವರಾತ್ರಿ ಹಬ್ಬ ಆಚರಣೆ ಬಗ್ಗೆ ಹಲವು ಕಥೆಗಳೀವೆ ಅದರಲ್ಲಿ ಬಹಳ ಮುಖ್ಯವಾಗಿ ಪ್ರಚಲಿತದಲ್ಲಿರುವ ಕಥೆಗಳನ್ನು ತಿಳೀಯೋಣ ಬನ್ನಿ.

ಪುರಾಣಗಳಲ್ಲಿ ಸಮುದ್ರ ಮಂಥನದ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಸಮುದ್ರ ಮಂಥನ ಮಾಡುವಾಗ ಮೊದಲು ವಿಷ ಬಂದಿದ್ದು, ಆ ವಿಷವನ್ನು ಶಿವ ಕುಡಿದಿದ್ದು ಗೊತ್ತಿದೆ.ಈಶ್ವರನು ವಿಷ ಕುಡಿದಾಗ ಪತಿಗೆ ಏನೂ ಆಗಮಾರದು ಎಂದು ಪಾರ್ವತಿಯೂ ಈಶ್ವರ ಗಂಟಲಿನಿಂದ ದೇಹಕ್ಕೆ ವಿಷ ಇಳಿಯಬಾರದು ಎಂದು ಕುತ್ತಿಗೆಯನ್ನು ಒತ್ತಿ ಹಿಡಿದಳು. ಈಶ್ವರನು ಜಗತ್ತನ್ನು ರಕ್ಷಿಸಲು ಹೀಗೆ ಮಾಡಬೇಕಾಯ್ತು. ವಿಷವೆಲ್ಲಾ ಗಂಟಲಲ್ಲೇ ಉಳಿದು ಕುತ್ತಿಗೆ ನೀಲಿ ಬಣ್ಣಕ್ಕೆ ತಿರುಗಿತು. ಹಾಗಾಗಿಯೇ ಶಿವನನ್ನು ನೀಲಕಂಠ ಎಂದೂ ಕೂಡ ಕರೆಯಲಾಗುತ್ತೆ. ವಿಷ ಕುಡಿದ ಶಿವ ಕಣ್ಣು ಮುಚ್ಚಿದರೆ ಪ್ರಾಣಕ್ಕೆ ಕುತ್ತು ಎಂದು ಇಡೀ ರಾತ್ರಿ ಜಾಗರಣೆ ಮಾಡಲಾಗುತ್ತೆ. ಆಗ ಅಲ್ಲಿ ನೆರೆದಿದ್ದ ದೇವತೆಗಳೆಲ್ಲರೂ ಶಿವನಿಗೆ ನಿದ್ದೆ ಬರದಂತೆ ಎಚ್ಚರವಹಿಸುತ್ತಾರೆ. ಹೀಗಾಗಿ ಶಿವರಾತ್ರಿ ಹಬ್ಬ ಆಚರಣೆಗೆ ಬಂತು ಎನ್ನಲಾಗಿದೆ

.ಇನ್ನೊಂದು ಕಥೆಯ ಪ್ರಕಾರ ವಿಷ್ಣು ಹಾಗೂ ಬ್ರಹ್ಮ ಇಬ್ಬರ ನಡುವೆಯೂ ಯಾರು ದೊಡ್ಡವರು ಎಂಬ ಜಗಳ ಶುರುವಾಗುತ್ತೆ. ಆದ ಶವನೂ ಕಂಬದ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ. ಇದರ ಕೊನೆ ಹಾಗೂ ತುದಿಯನ್ನು ಯಾರು ಮೊದಲು ಹುಡುಕುತ್ತಾರೋ ಅವರೇ ಹೆಚ್ಚು ಎಂದು ಹೇಳಲಾಗುತ್ತೆ. ಇಬ್ಬರೂ ಕೂಡ ಕೊನೆ ಮೊದಲು ಹುಡುಕಲು ಯತ್ನಿಸುತ್ತಾರೆ. ಆದರೆ ಕೊನೆ ಮೊದಲು ಸಿಗುವುದೇ ಇಲ್ಲ. ಆಗ ವಿಷ್ಣು ಬಂದು ಸಿಗಲಿಲ್ಲ ನಾನು ಸೋತೆ ಎನ್ನುತ್ತಾನೆ. ಆದರೆ ಬ್ರಹ್ಮ ನಾನು ತುದಿಯನ್ನು ನೋಡಿದೆ ಎಂದು ಸುಳ್ಳು ಹೇಳುತ್ತಾನೆ. ಆಗ ಶಿವ ಬ್ರಹ್ಮನಿಗೆ ನಿನ್ನನ್ನು ಭೂಮಿ ಮೇಲೆ ಯಾರೂ ಆರಾಧಿಸುವುದಿಲ್ಲ ಎಂದು ಶಾಪ ನೀಡುತ್ತಾನೆ. ಕಂಬದ ತುದಿ ಕೊನೆ ಸಿಗದ ಕಾರಣ ಈಶ್ವರನೇ ಹೆಚ್ಚು ಎಂದು ಹೇಳಲಾಗುತ್ತದೆ. ಈ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತೆ ಎಂಬ ಕಥೆ ಇದೆ.

ಶಿವ ಮತ್ತು ಶಕ್ತಿಯ ವಿವಾಹದ ದಂತಕಥೆಯು ಮಹಾಶಿವರಾತ್ರಿಯ ಹಬ್ಬಕ್ಕೆ ಸಂಬಂಧಿಸಿದ ಪ್ರಮುಖ ದಂತಕಥೆಗಳಲ್ಲಿ ಒಂದಾಗಿದೆ. ಶಿವನು ತನ್ನ ದೈವಿಕ ಸಂಗಾತಿಯಾದ ಶಕ್ತಿಯೊಂದಿಗೆ ಎರಡನೇ ಬಾರಿಗೆ ಹೇಗೆ ಮದುವೆಯಾದನು ಎಂಬುದನ್ನು ಈ ಕಥೆಯು ನಮಗೆ ಹೇಳುತ್ತದೆ. ಜೊತೆಗೆ, ಅವರಿಬ್ಬರ ವಿವಾಹ ವಾರ್ಷಿಕೋತ್ಸವದಂತೆ ಶಿವರಾತ್ರಿ ಆಚರಣೆ ನಡೆಯುತ್ತದೆ.

ಇನ್ನು ಬೇಟೆಗಾರನೊಬ್ಬ ಬೇಟೆಯಾಡಲು ಕಾಡಿಗೆ ಹೋಗುತ್ತಾನೆ. ಆಗ ಹುಲಿ ಬರುತ್ತದೆ. ಹುಲಿಯಿಂದ ತಪ್ಪಿಸಿಕೊಳ್ಳಲು ಮರವೇರಿ ಕೂರುತ್ತಾನೆ. ಹುಲಿ ಕತ್ತಲಾದರೂ ಕದಲದೇ ಮರದ ಕೆಳಗೆ ಕೂತಿರುತ್ತದೆ. ಹಾಗಾಗಿ ಆತ ಮರದ ಮೇಲೆ ಇರಬೇಕಾಗುತ್ತದೆ. ರಾತ್ರಿ ನಿದ್ರೆಗೆ ಜಾರಿದರೆ, ಮರದಿಂದ ಬೀಳಬಹುದು ಎಂಬ ಭಯದಿಂದ ಮರದ ಲೆಗಳನ್ನು ಕೀಳುತ್ತಾ ಓಂ ನಮಃ ಶಿವಾಯ ಎನ್ನುತ್ತಾ ಕೆಳಗೆ ಹಾಕುತ್ತಿರುತ್ತಾನೆ. ಮರದ ಕೆಳೆಗೆ ಲಿಂಗವಿರುತ್ತದೆ. ಇದು ಬೇಟೆಗಾರನಿಗೆ ತಿಳೀದಿರುವುದಿಲ್ಲ. ಅಲ್ಲದೇ, ಆತ ಹತ್ತಿದ್ದು ಬಿಲ್ಪತ್ರೆ ಮರ. ಹಾಗಾಗಿ ಋಆತ್ರಿ ಪೂರ ಜಾಗರಣೆ ಮಾಡಿ ಈಶ್ವರನಿಗೆ ಬಿಲ್ವಪತ್ರೆ ಅರ್ಪಿಸಿದ್ದಕ್ಕೆ ಬೇಟೆಗಾರಿನಿಗೆ ಶಿವನು ಪ್ರಸನ್ನನಾಗಿ ರಕ್ಷಿಸುತ್ತಾನೆ. ಹಾಗಾಗಿ ಶಿವರಾತ್ರಿಯನ್ನು ಆಚರಿಸಲಾಯ್ತು ಎನ್ನಲಾಗಿದೆ.

Related News

spot_img

Revenue Alerts

spot_img

News

spot_img