ಭೂಮಾಲಿಕರಿಗೆ ನಗದು ಪರಿಹಾರವನ್ನು ನೀಡಬೇಕು ಇಲ್ಲವೇ, 40:60 ಅನುಪಾತದಲ್ಲಿ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿದ ನಿವೇಶನವನ್ನು ನೀಡಬೇಕು. ಅದು ಕೂಡ ಎಕರೆ ಒಂದಕ್ಕೆ 9583 ಚದರ ಅಡಿಗಳಂತೆ ಭೂ ಪರಿಹಾರ ಲೆಕ್ಕಚಾರವನ್ನು ಮಾಡಿ ಭೂ ಮಾಲೀಕರಿಗೆ ಪರಿಹಾರವನ್ನು ನೀಡುವಂತೆ ಕೋರ್ಟ್ ಹೇಳಿದೆ.ಭೂ ಮಾಲೀಕರು ನಿವೇಶನ ಪಡೆಯಬೇಕೆಂದರೆ, ಅಂತಹವರು ಲಿಖಿತ ರೂಪದಲ್ಲಿ ಸಂಬಂಧಪಟ್ಟ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕು.
ಆಗ ಭೂ ಮಾಲೀಕರಿಗೆ ನೀಡಬೇಖಿರುವ ನಿವೇಶನದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಎಂದು ಬಿಡಿಎ ತಿಳಿಸಿದೆ. ಈಗಾಗಲೇ ಬಿಡಿಎ ಕಾಳತಮ್ಮನಹಳ್ಳಿ, ಗಾಣಿಗರಹಳ್ಳಿ, ರಾಮಗೊಂಡನಹಳ್ಳಿ, ಗುಣಿ ಅಗ್ರಹಾರ, ಮೇಡಿ ಅಗ್ರಹಾರ, ವೀರಸಾಗರ, ದೊಡ್ಡಬೆಟ್ಟಹಳ್ಳಿ ಮತ್ತು ಬ್ಯಾಲಕೆರೆ ಗ್ರಾಮಗಳಲ್ಲಿ ಭೂ ಮಾಲೀಕರಿಗೆ ನಿವೇಶನಗಳ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಿದೆ. ಇನ್ನು ಬಡಾವಣೆಯ ಮೊದಲ ಹಂತದ ಅವಧಿಯು ಜುಲೈ 2025ಕ್ಕೆ ಮುಕ್ತಾಯಗೊಳ್ಳಲ್ಲಿದೆ.
ಬೆಂಗಳೂರು ಯಲಹಂಕ ತಾಲ್ಲೂಕು, ಯಲಹಂಕ ಹೋಬಳಿ, ಹೆಸರಘಟ್ಟ ಹೋಬಳಿ, ಯಶವಂತಪುರ ಹೋಬಳಿಯ 17 ಗ್ರಾಮಗಳ 3546 ಎಕರೆ 12 ಗುಂಟೆ ಜಮೀನಿನಲ್ಲಿ ಬಡಾವಣೆ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಇದರಲ್ಲಿ 2,782 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದು, ಈ ಬಡಾವಣೆ ನಿರ್ಮಾಣಕ್ಕೆ ಸುಮಾರು 5,337 ಕೋಟಿ ರೂ. ಖರ್ಚಾಗಲಿದೆ. ಬಡಾವಣೆಯಲ್ಲಿ 28 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.