ಬೆಂಗಳೂರು, ಡಿ. 30 : ದೇಶದಲ್ಲಿ ಅತಿ ದೊಡ್ಡ ಹಾಸಿಗೆ ತಯಾರಿಸುವ ಕಂಪನಿ ಶೀಲಾ ಫೋಮ್ ಹೊಸ ಹೆಜ್ಜೆ ಇಡುತ್ತಿದೆ. ಶೀಳಾ ಫೋಮ್ ಮ್ಯಾಟ್ರೆಸ್ ಕಂಪನಿಗೆ ಪ್ರತಿ ಸ್ಫರ್ಧಿಯಾಗಿರುವ ಕರ್ನಾಟಕ ಮೂಲದ ಕರ್ಲಾನ್ ಲಿಮಿಟೆಡ್ ಅನ್ನು ಖರೀದಿಸಲು ಮುಂದಾಗಿದೆ. ಈ ಮೂಲಕ ತನ್ನ ಸಾಮ್ಯಾಜ್ಯವನ್ನು ವಿಸ್ತರಿಸಿಕೊಳ್ಳಲಿದೆ. ಅದೂ ಕೂಡ ಬರೋಬ್ಬರಿ 2000 ಕೋಟಿ ರೂಪಾಯಿಗಳಿಗೆ ಕರ್ಲಾನ್ ಲಿಮಿಟೆಡ್ ಅನ್ನು ಖರೀದಿಸುವ ಪ್ರಸ್ತಾವನೆ ಇಟ್ಟಿದೆ. ಭಾಗಶಃ ಮುಂದಿನ ವರ್ಷ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ 1962ರಲ್ಲಿ ಕರ್ಲಾನ್ ಲಿಮಿಟೆಡ್ ನ ಹಾಸಿಗೆ ಕಂಪನಿ ಶುರುವಾಯ್ತು. ಅಂದಿನಿಂದ ಉತ್ತಮ ವಹಿವಾಟು ನಡೆಸಿದ್ದ ಕರ್ಲಾನ್ ದೇಶದಲ್ಲಿ ಕರ್ನಾಟಕ, ಗುಜರಾತ್, ಯುಪಿ, ಒಡಿಶಾ, ಮಧ್ಯಪ್ರದೇಶ ಸೇರಿದಂತೆ ಒಟ್ಟು 9 ಉತ್ಪಾದನಾ ಘಟಕಗಳು ಇವೆ. 72 ಶಾಖೆಗಳನ್ನು ಕರ್ಲಾನ್ ಲಿಮಿಟೆಡ್ ಹೊಂದಿದೆ. ಜೊತೆಗೆ ದೇಶದಲ್ಲಿ 10 ಸಾವಿರ ಡೀಲರ್ ಗಳನ್ನು ಒಳಗೊಂಡಿದೆ. ಕರ್ಲಾನ್ ಲಿಮಿಟೆಡ್ 2020ನೇ ಹಣಕಾಸು ವರ್ಷದಲ್ಲಿ 760.9 ದಶಲಕ್ಷ ರೂಪಾಯಿ ಲಾಭವನ್ನು ಕಂಪನಿ ಗಳಿಸಿತ್ತು. ಆದರೆ ಈ ವರ್ಷ ಅಂದರೆ, 2022ರಲ್ಲಿ ಲಾಭದ ಪ್ರಮಾಣ ಕುಸಿದಿದೆ. 179.7 ದಶಲಕ್ಷ ರೂಪಾಯಿ ಲಾಭವನ್ನು ಕಂಪನಿ ಪಡೆದಿದೆ.
ಇದರ ಬೆನ್ನಲ್ಲೇ ಅಧಿಕಾರ ಹಸ್ತಾಂತರಿಸಲು ಕರ್ಲಾನ್ ಲಿಮಿಟೆಡ್ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸುಧಾಕರ್ ಪೈ ಪ್ರಯತ್ನಿಸಿದ್ದಾರೆ ಎಂಬ ಸುಳಿವು ದೊರಕ್ಕಿತ್ತು. ಹೀಗಿರುವಾಗಲೇ ಹಾಸಿಗೆ ಉದ್ಯಮದಲ್ಲಿ ಶೀಲಾ ಫೋಮ್ ಮೊದಲ ಸ್ಥಾನವನ್ನು ಪಡೆದಿದೆ. ಡ್ಯುರೋಫ್ಲೆಕ್ಸ್ ಎರಡನೇ ಸ್ಥಾನವನ್ನು ಪಡೆದಿದ್ದು, ಕರ್ಲಾನ್ ಮೂರಕ್ಕೆ ಕುಸಿತ ಕಂಡಿದೆ. ಡ್ಯುರೋಫ್ಲೆಕ್ಸ್, ಸ್ಪ್ರಿಂಗ್ ವೆಲ್,, ಸ್ಲೀಪಿಂಗ್ ಕೋ ಸೇರಿದಮತೆ ಹಲವು ಹಾಸಿಗೆ ತಯಾರಕ ಕಂಪನಿಗಳು ಇತ್ತೀಚೆಗೆ ಇಕ್ವಿಟಿ ಸಂಸ್ಥಗಳಿಂದ ಹಣ ಸಂಗ್ರಹಿಸಿದೆ. ಎದೆಲ್ಲದರ ಜೊತೆಗೆ ಕರ್ಲಾನ್ ತೀವ್ರ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಲಾಭ ಗಳಿಸಲು ಕಷ್ಟ ಪಡುತ್ತಿದೆ.
ಇನ್ನು ದೇಶದಲ್ಲಿ ಮ್ಯಾಟ್ರೆಸ್ ನ ಮಾರುಕಟ್ಟೆ ಸುಮಾರು 15 ರಿಂದ 17 ಸಾವಿರ ಕೋಟಿ ರೂಪಾಯಿಗಳ ಮೌಲ್ಯವನ್ನು ಹೊಂದಿದೆ. ಈ ಪೈಕಿ ಕರ್ಲಾನ್ ಮತ್ತು ಶೀಲಾ ಫೋಮ್ ಶೇ. 50 ರಷ್ಟು ಪಾಲನ್ನು ಒಳಗೊಂಡಿದೆ. ಗಜಿಯಾಬಾದ್ ಮೂಲದ ಶೀಲಾ ಹೋಮ್ ಕಂಪನಿ ಸ್ಲೀಪ್ ವೆಲ್ ಎಂಬ ಬ್ರ್ಯಾಂಡ್ ಹೆಸರಿನಲ್ಲಿ ಮ್ಯಾಟ್ರೆಸ್ ಗಳನ್ನು ಮಾರಾಟ ಮಾಡುತ್ತಿದೆ. ಇದು ಹಾಸಿಗೆ ಮಾರುಕಟ್ಟೆಯಲ್ಲಿ ಶೇ.25 ರಷ್ಟು ಪಾಲನ್ನು ಹೊಂದಿದೆ. ಇದೀಗ ಕರ್ಲಾನ್ ಲಿಮಿಟೆಡ್ ಕಂಪನಿಯ ಖರೀದಿ ಒಪ್ಪಂದದ ವರದಿ ಬಂದ ಬಳಿಕ ಶೀಲಾ ಹೋಮ್ ನ ಶೇ.5 ರಷ್ಟು ಷೇರು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.