22.3 C
Bengaluru
Sunday, December 22, 2024

ವಾಸ್ತುವಿನಲ್ಲಿ ಶಂಕುಗಳು ಯಾವೆಲ್ಲಾ ಪಾತ್ರ ವಹಿಸುತ್ತವೆ.? ಅವುಗಳ ಅಗತ್ಯವೇನು..?

ಬೆಂಗಳೂರು, ಆ. 30 : ಶಂಕು ಎಂಬ ಪದ ವಾಸ್ತುವಿನಲ್ಲಿ ಬಹಳ ಮುಖ್ಯವಾದದ್ದು. ಹಿಂದಿನ ಕಾಲದಲ್ಲಿ ಶಂಕು ಸ್ಥಾಪನೆ ಎಂಬ ಪದವನ್ನು ಬಳಸುತ್ತಿದ್ದರು. ಮೊದಲು ಮನೆಯ ಅಥವಾ ಕಟ್ಟಡ ನಿರ್ಮಾಣಕ್ಕಾಗಿ ಮೊದಲು ಭೂಮಿಯನ್ನು ಅಗೆದು ಶಂಕು ಸ್ಥಾಪನೆಯನ್ನು ಮಾಡಬೇಕು. ಈ ಶಂಕು ಸ್ಥಾಪನೆಯನ್ನೇ ಈಗ ಫೌಂಡೇಶನ್ ಎಂದು ಸಿಂಪಲ್ ಆಗಿ ಹೇಳುತ್ತಾರೆ. ಆ ಪದ್ಧತಿಯೇ ಬೇರೆ. ಶಂಕುಸ್ಥಾಪನೆ ಪದ್ಧತಿಯನ್ನು ಕಟ್ಟಡದ ಭದ್ರತೆ ಹಾಗೂ ಬ್ರಹ್ಮಸ್ಥಾನಕ್ಕಾಗಿ ಈ ಪದ್ಧತಿಯನ್ನು ಬಳಸುತ್ತಿದ್ದರು.

ಆದರೆ ಇಲ್ಲಿ ಅದರ ಬಗ್ಗೆ ಮಾತನಾಡುತ್ತಿಲ್ಲ. ಇಲ್ಲಿ ನಾವು ಬೇರೆ ಎರಡು ಶಂಕುಗಳ ಬಗ್ಗೆ ಮಾತನಾಡುತ್ತಿದ್ದೇವೆ. ವಾಸ್ತುವಿನಲ್ಲಿ ಮೊದಲೆಲ್ಲಾ ಶಂಕುಗಳನ್ನು ಬಳಸುತ್ತಿದ್ದರು. ಇದನ್ನು ದಿಕ್ಕು ನಿರ್ಣಯ ಶಂಕು ಎಂದು ಕರೆಯುತ್ತಾರೆ. ಇನ್ನು ಎರಡನೇಯದಾಗಿ ಭೂಮಿಯನ್ನು ಪುಷ್ಠಿಗೊಳಿಸುವ ಸಲುವಾಗಿ ಈ ಶಂಕುವನ್ನು ಬಳಸುತ್ತಿದ್ದರು. ಇದೆರಡೂ ಕೂಡ ಬೇರೆ ಬೇರೆಯಾದ ಗ್ರಂಥಗಳಿಂದ ತೆಗೆದುಕೊಳ್ಳಲಾಗಿದೆ. ಮೊದಲನೇಯದಾಗಿ ದಿಕ್ಕು ನಿರ್ಣಯ ಶಂಕು ಬಗ್ಗೆ ತಿಳಿಯೋಣ.

ಈ ದಿಕ್ಕು ನಿರ್ಣಯಕ್ಕೆ ಮೂರು ತರಹದ ಶಂಕುಗಳನ್ನು ಹೇಳಲಾಗಿದೆ. ಇದರಲ್ಲಿ ಮೊದಲನೇಯದು ದೊಡ್ಡದಾಗಿರುತ್ತದೆ. ಕೋನಿಕಲ್ ಶೇಪ್ ನಲ್ಲಿ ಈ ಶಂಕು ಇರುತ್ತದೆ. ಐಸ್ ಕ್ರೀಂ ಕೋನ್ ಇದ್ದಂತೆ ಇರುತ್ತದೆ. ಇನ್ನು ಇದರ ಸೈಜ್ ಕೂಡ ಬೇರೆ ಬೇರೆ ಇರುತ್ತದೆ. ಇನ್ನು ಮೀಡಿಯಂ ಶಂಕು ಹಾಗೂ ಸಣ್ಣ ಶಂಕು ಒಂದಕ್ಕೊಂದು ಅಳತೆಯಲ್ಲಿ ಕಡಿಮೆ ಇರುತ್ತದೆ. ಈ ಶಂಕುಗಳಲ್ಲಿ ಯಾವುದನ್ನೇ ಆದರೂ, ಬಳಸಿಕೊಂಡು ದಿಕ್ಕು ನಿರ್ಣಯ ಮಾಡಬೇಕು.

ಮೊದಲು ಭೂಮಿಯಲ್ಲಿ ಸರ್ಕಲ್ ಅನ್ನು ಬರೆಯಬೇಕು. ಸೂರ್ಯನ ನೆರಳಿನಂತೆ ದಿಕ್ಕುಗಳನ್ನು ಬರೆದು, ಈ ಶಂಕುವನ್ನು ಇಟ್ಟರೆ ದಿಕ್ಕನ್ನು ತೋರಿಸುತ್ತದೆ. ಈ ಶಂಕುಗಳನ್ನು ಕಟ್ಟಿಗೆಯಿಂದ ಮಾಡಲಾಗುತ್ತಿತ್ತು. ಈಗ ಯಾರೂ ಬಳಸುವುದಿಲ್ಲ. ಇನ್ನು ಎರಡನೇಯ ಶಂಕುವಾದ ಭೂಮಿಯನ್ನು ಪುಷ್ಠಿಗೊಳಿಸುವ ಶಂಕುವನ್ನು ಗಂಧದ ಮರ, ತೇಗ ಅಥವಾ ಆನೆಯ ದಂತದಿಂದಲೇ ತಯಾರಿಸಲಾಗುತ್ತದೆ. ಅದರ ಡಿಸೈನ್ ಬೇರೆಯಾಗಿರುತ್ತದೆ.

ಒಂದೇ ಸಿಂಗಲ್ ಪೀಸ್ ನಿಂದ ಮೂರು ಭಾಗದಲ್ಲಿ ತಯಾರಿ ಮಾಡಬೇಕು. ಇದನ್ನು ತಯಾರಿಸುವುದಕ್ಕೇ ವಿಧಾನವಿದೆ. ಇನ್ನು ಇದನ್ನು ಭೂಮಿಯಲ್ಲಿ ಹೂಳುವುದಕ್ಕೂ ಪೂಜೆ, ಮುಹೂರ್ತ ಎಲ್ಲವನ್ನೂ ನೋಡಬೇಕಾಗುತ್ತದೆ. ವಾಸ್ತು ಪುರುಷನ ಬೆನ್ನುಭಾಗದಲ್ಲಿ ಬ್ರಹ್ಮಸ್ಥಾನದಲ್ಲಿ ಈ ಶಂಕುವನ್ನು ಸ್ಥಾಪಿಸಬೇಕು. ಹೀಗೆ ಮಾಡಿದಾಗ ಭೂಮಿಯಲ್ಲಿ ಸಣ್ಣ-ಪುಟ್ಟ ದೋಷಗಳು ಇತ್ತು ಎಂದಾದರೆ, ಅದನ್ನು ಪರಿಹರಿಸಬಹುದು. ಆಗ ಭೂಮಿಯಲ್ಲಿ ಪಾಸಿಟಿವ್ ಎನರ್ಜಿ ಆಕ್ಟಿವೇಟ್ ಆಗುತ್ತದೆ.

Related News

spot_img

Revenue Alerts

spot_img

News

spot_img