ಬೆಂಗಳೂರು ಜೂನ್ 18: ರಾಜ್ಯ ಕಾಂಗ್ರೆಸ್ ಸರ್ಕಾರವು ಕೊಟ್ಟ ಮಾತಿನಂತೆ ಮೊದಲನೆಯ ಭರವಸೆಯಾಗಿ ಶಕ್ತಿ ಯೋಜನೆಯನ್ನು ಕಳೆದ ಭಾನುವಾರ ಚಾಲನೆ ನೀಡಿತು,ಇದೀಗ ಬಂದ ವಿಷಯವೇನೆಂದರೆ ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿಯನ್ನು ಸೋಮವಾರದಿಂದ ಆನ್ಲೈನ್ ನಲ್ಲಿ ಸಲ್ಲಿಸಬಹುದಾಗಿದೆ.
ಈಗಾಗಲೇ ರಾಜ್ಯಾದ್ಯಂತ ಮಹಿಳೆಯರು ಕೆ ಎಸ್ ಆರ್ ಟಿ ಸಿ ಹಾಗೂ ಬಿ ಎಂ ಟಿ ಸಿ (ಪ್ರತಿಯೊಂದು ಜಿಲ್ಲೆಗೂ ಪ್ರತ್ಯೇಕ) ಯಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಈಗ ಮಹಿಳೆಯರು ಕೇವಲ ಒಂದು ಐಡಿ ಕಾರ್ಡ್ ತೋರಿಸುವುದರ ಮೂಲಕ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಆದರೆ ಇದು ಶಾಶ್ವತವಲ್ಲ ಮುಂದಿನ 3 ತಿಂಗಳವರೆಗೆ ಮಾತ್ರ ಇದು ಚಾಲ್ತಿಯಲ್ಲಿರಲಿದೆ, ಅಷ್ಟರೊಳಗೆ ಪ್ರತಿಯೊಬ್ಬರೂ ಕೂಡ ಈ “ಶಕ್ತಿ ಸ್ಮಾರ್ಟ್ ಕಾರ್ಡ್ ” ಕಡ್ಡಾಯವಾಗಿ ಪಡೆದು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಆದ್ದರಿಂದ ಈ “ಶಕ್ತಿ ಸ್ಮಾರ್ಟ್ ಕಾರ್ಡ್ ” ಪಡೆಯಲು ನಾಳೆ ಅಂದರೆ ಸೋಮವಾರದಿಂದಲೇ ಆನ್ ಲೈನ್ ನಲ್ಲಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅದರಲ್ಲಿ ತಮ್ಮ ತಮ್ಮ ವಿಳಾಸದ ವಿವರ ನೀಡಿ ಕಾರ್ಡ್ ಅನ್ನು ಪಡೆಯಬಹುದಾಗಿದೆ.