21.5 C
Bengaluru
Monday, December 23, 2024

ಉಚಿತವಾಗಿ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಲು ಸೆಪ್ಟೆಂಬರ್‌ 14 ಕೊನೆದಿನ,

Aadhaar Card Update:ಸರ್ಕಾರದ ಹಲವು ಯೋಜನೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ,UIDAI ಪರವಾಗಿ, ಆಧಾರ್ ಕಾರ್ಡ್‌ನಲ್ಲಿರುವ ದಾಖಲೆಗಳನ್ನು ಉಚಿತವಾಗಿ ಅಪ್ಡೇಟ್ ಮಾಡಲು ಜನರಿಗೆ ಅವಕಾಶ ನೀಡಿದೆ. ಇದರೊಂದಿಗೆ, ಸೆಪ್ಟೆಂಬರ್ 14, 2023 ರೊಳಗೆ ಉಚಿತವಾಗಿ ಆಧಾರ್ ಅನ್ನು ಅಪ್ಡೇಟ್ ಮಾಡಬಹುದು ಎಂದು UIDAI ತಿಳಿಸಿದೆ. ಈ ಮೊದಲು ಉಚಿತ ಸೇವೆಯು ಜೂನ್ 14, 2023 ರವರೆಗೆ ಮಾತ್ರ ಲಭ್ಯವಿತ್ತು. ಆದರೆ ಈಗ ಅದನ್ನು ಸೆಪ್ಟೆಂಬರ್ 14 ರವರೆಗೆ ವಿಸ್ತರಿಸಲಾಗಿದೆ.ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಈ ಕೆಲಸವನ್ನು ಸೆಪ್ಟೆಂಬರ್ ತಿಂಗಳಿನಲ್ಲಿಯೇ ಮಾಡಿ ಮುಗಿಸಿದರೆ ಹಣ ಪಾವತಿಸಬೇಕಾಗಿಲ್ಲ. ಇಲ್ಲವಾದರೆ ಪ್ರತಿ ಕೆಲಸಕ್ಕೂ ಹಣ ಪಾವತಿಸಬೇಕಾಗುತ್ತದೆ. ಉಚಿತ ಸೇವೆಯು myAadhaar ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದೆ. ಆಧಾರ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಭೌತಿಕವಾಗಿ ಅಪ್ಡೇಟ್ ಮಾಡಿದರೆ, ಅಗತ್ಯ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆಧಾರ್ ಕಾರ್ಡ್ ನವೀಕರಣ ವಿಧಾನ
*ಮೊದಲು ನೀವು ಯುಐಡಿಎಐನ ಅಧಿಕೃತ ವೆಬ್ಸೈಟ್ https://myaadhaar.uidai.gov.in ನಲ್ಲಿ ಆಧಾರ್ ಸ್ವಯಂ ಸೇವಾ ಪೋರ್ಟಲ್ಗೆ ಭೇಟಿ ನೀಡಬೇಕು.- ‘ವಿಳಾಸವನ್ನು ನವೀಕರಿಸಲು continue ಆಯ್ಕೆಯನ್ನು ಆರಿಸಿ.
*ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
* ಡಾಕ್ಯುಮೆಂಟ್ ನವೀಕರಣ ವಿಭಾಗಕ್ಕೆ ಹೋಗಿ. ಅಲ್ಲಿ ಈಗಾಗಲೇ ನೋಂದಾಯಿಸಲಾದ ವಿವರಗಳನ್ನು ಪರಿಶೀಲಿಸಬೇಕು.-
*ಆಧಾರ್ ಹೊಂದಿರುವವರು ವಿವರಗಳನ್ನು ಪರಿಶೀಲಿಸಬೇಕು, ಸರಿಯಾಗಿ ಕಂಡುಬಂದರೆ, ಮುಂದಿನ ಹೈಪರ್ಲಿಂಕ್ ಅನ್ನು ಕ್ಲಿಕ್ ಮಾಡಿ.
* ಮುಂದಿನ ಹಂತದಲ್ಲಿ, ಡ್ರಾಪ್‌ಡೌನ್ ಪಟ್ಟಿಯಿಂದ ಗುರುತಿನ ಪುರಾವೆ ಮತ್ತು ವಿಳಾಸದ ದಾಖಲೆಗಳ ಪುರಾವೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ.
*ವಿಳಾಸ ಪುರಾವೆಯ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
* ಅಂತಿಮವಾಗಿ ಆಧಾರ್ ಅಪ್ಡೇಟ್ ರಿಕ್ವೆಸ್ಟ್ ಬರುತ್ತದೆ. 14 ಅಂಕೆಗಳ ಅಪ್ಡೇಟ್ ರಿಕ್ವೆಸ್ಟ್ ನಂಬರ್ (URN) ಜನರೇಟ್ ಆಗುತ್ತದೆ.

Related News

spot_img

Revenue Alerts

spot_img

News

spot_img