22 C
Bengaluru
Sunday, December 22, 2024

ಹಿರಿಯ ನಾಗರಿಕರಿಗೆ ನೋಡಿಕೊಳ್ಳುವರು ಇಲ್ಲದಿದ್ದರೆ ಸರ್ಕಾರದಿಂದ ಆಶ್ರಯ ಪಡೆಯುವುದೇಗೆ ?

ಬೆಂಗಳೂರು, ಅ.20:
ಅರವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಕ್ಕಳಿಲ್ಲ. ಅಣ್ಣ – ತಮ್ಮ ಸಂಬಂಧಿ ಮಕ್ಕಳೂ ಇಲ್ಲ. ಹೀಗಾಗಿ ಸಂಧ್ಯಾ ಕಾಲದಲ್ಲಿ ನೋಡಿಕೊಳ್ಳುವರು ಯಾರೂ ಇಲ್ಲ. ಇಂತಹ ಸಂದರ್ಭ ಒದಗಿ ಬಂದರೆ ಅಂಥವರನ್ನು ನೋಡಿಕೊಳ್ಳುವರು ಯಾರು ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹಿರಿಯ ನಾಗರಿಕರು ಗೌರವಯುತ ಜೀವನ ನಡೆಸುವ ಹಕ್ಕು ಅವರಿಗಿದೆ. ಇತ್ತೀಚಿನ ದಿನ ಮಾನಗಳಲ್ಲಿ ಹಿರಿಯ ನಾಗರಿಕರನ್ನು ನೋಡಿಕೊಳ್ಳಲಾಗದೇ ಮಕ್ಕಳೇ ಅನಾಥಾಶ್ರಮಗಳಿಗೆ ತಳ್ಳುತ್ತಿದ್ದಾರೆ. ಇನ್ನೂ ಧಿಕ್ಕೇ ಇಲ್ಲದ ಹಿರಿಯನಾಗರಿಕರ ಕಥೆ ಏನು ಅಲ್ಲವೇ ? ಹಿರಿಯ ನಾಗರಿಕರನ್ನು ನೋಡಿಕೊಳ್ಳುವರು ಇಲ್ಲದಿದ್ದರೂ ತಲೆ ಕೆಡಿಸಿಕೊಳ್ಲುವಂತಿಲ್ಲ. ಅಂತವರನ್ನು ಸರ್ಕಾರವೇ ನೋಡಿಕೊಳ್ಳಬೇಕು.

ಹಿರಿಯ ನಾಗರಿಕರ ರಕ್ಷಣಾ ಕಲಂ 19 ರ ಪ್ರಕಾರ ಆಯಾ ರಾಜ್ಯ ಸರ್ಕಾರಗಳು ಪ್ರತಿಯೊಂದು ಜಿಲ್ಲೆಯಲ್ಲಿ ವೃದ್ದಾಶ್ರಮ ತೆಗೆಯಬೇಕು. ಕನಿಷ್ಠ 150 ಮಂದಿಗೆ ಒಂದರಂತೆ ವೃದ್ಧಾಶ್ರಮ ತೆಗೆದು ಅಲ್ಲಿ ಯಾರೂ ಆಶ್ರಯ ಇಲ್ಲದ ಹಿರಿಯ ನಾಗರಿಕರಿಗೆ ಆಶ್ರಯ ಕಲ್ಪಿಸಬೇಕು. ಊಟ, ತಿಂಡಿ, ಬಟ್ಟೆ ಮತ್ತು ವಸತಿ ಸೌಲಭ್ಯ ಕೊಡಬೇಕು. ಅವರ ಆರೋಗ್ಯವನ್ನು ಸಹ ಸರ್ಕಾರವೇ ಕಾಪಾಡಲು ಕಾನೂನಿನಲ್ಲಿ ಅವಕಾಶವಿದೆ.

ಯಾರೂ ನೋಡಿಕೊಳ್ಳುವರು ಇಲ್ಲದೇ ಇರುವ ಹಿರಿಯ ನಾಗರಿಕರು ತನಗೆ ರಕ್ಷಣೆ ಕೊಡುವಂತೆ ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ನಿರ್ವಹಣಾ ಅಧಿಕಾರಿಗೆ ಅರ್ಜಿ ಕೊಡಬೇಕು. ಅರ್ಜಿ ಪರಿಶೀಲಿಸಿದ ಬಳಿಕ ಅಧಿಕಾರಿಗಳು ಹಿರಿಯ ನಾಗರಿಕರಿಗೆ ಸರ್ಕಾರದ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಿ ನೋಡಿಕೊಳ್ಳುತ್ತದೆ. ಹಿರಿಯ ನಾಗರಿಕರು ಸಂಧ್ಯಾಕಾಲದಲ್ಲಿ ಗೌರವಯುತ ಜೀವನ ಸಾಗಿಸಲು ಅವರ ರಕ್ಷಣೆಗಾಗಿ ಸರ್ಕಾರ ಈ ಕಾಯ್ದೆ ತಂದಿದೆ. ಇದರ ಮೂಲಕ ಹಿರಿಯ ನಾಗರಿಕರು ರಕ್ಷಣೆ ಪಡೆಯಲು ಅವಕಾಶವಿದೆ.

Related News

spot_img

Revenue Alerts

spot_img

News

spot_img