ಬೆಂಗಳೂರು, ಮೇ. 29 : ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಿಂದ ಬಹಳ ಮಂದಿಗೆ ಉತ್ತಮವಾದ ಉಳಿತಾಯವಾಗುತ್ತಿದೆ. ಪಿಪಿಎಫ್ ಮೂಲಕ ಹಣ ಉಳಿತಾಯ ಮಾಡುವುದರಿಂದ ಒಲ್ಳೆಯ ರಿಟರ್ನ್ಸ್ ಅನ್ನು ಕೂಡ ಪಡೆಯಬಹುದಾಗಿದೆ. ಸರ್ಕಾರ ಈ ಯೋಜನೆಯನ್ನು ನಡೆಸುತ್ತಿರುವುದರಿಂದ ಇನ್ನು ಜನರ ಮೆಚ್ಚಿನ ಸ್ಕೀಮ್ ಆಗಿದೆ. ಪಿಪಿಎಫ್ ಖಾತೆಯಲ್ಲಿ ಹಣವನ್ನು ಹೂಡಿದರೆ, ಶೇ. 7.1 ರಷ್ಟು ಬಡ್ಡಿಯು ದೊರೆಯುತ್ತಿದೆ. ಈ ಯೋಜನೆಯೂ ತೆರಿಗೆ ವಿನಾಯ್ತಿಗೂ ಒಳಪಡುತ್ತದೆ.
ಈ ಯೋಜನೆಯು 15 ವರ್ಷ ಅವಧಿಯದ್ದಾಗಿದೆ. ಆದರೆ, ಇದನ್ನು 20 ವರ್ಷದವರೆಗೆ ವಿಸ್ತರಿಸಲು ಅವಕಾಶವಿದೆ. ಸಾರ್ವಜನಿಕ ಭವಿಷ್ಯ ನಿಧಿ ಮೂಲಕ ಪ್ರತಿ ತಿಂಗಳು ಕನಿಷ್ಠ 500 ರೂನಿಂದ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ವರ್ಷಕ್ಕೆ 1,20,000 ರೂಪಾಯಿ ಅನ್ನು ಕಟ್ಟಿದರೆ, ಕೊನೆಯಲ್ಲಿ ಬಡ್ಡಿ ಸೇರಿ ಒಟ್ಟಿಗೆ ಅಧಿಕ ಮೊತ್ತವನ್ನು ಪಡೆಯಬಹುದು. ಪಿಪಿಎಫ್ ಖಾತೆಯನ್ನು ಎಸ್ಬಿಐ, ಪಿಎನ್ಬಿ, ಆಂಧ್ರಾ ಬ್ಯಾಂಕ್ ಸೇರಿದಂತೆ ಹಲವು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಇಲ್ಲವೇ ಅಂಚೆ ಕಚೇರಿಗಳಲ್ಲಿ ತೆರೆಯಬಹುದು.
ಆನ್ ಲೈನ್ ನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ವೆಬ್ ಸೈಟ್ ನಲ್ಲಿ ನಿಮ್ಮ ಖಾತೆಗೆ ಲಾಗಿನ್ ಆಗಬೇಕು. ನಿಮ್ಮದೇ ಹೆಸರಿನಲ್ಲಿ ಖಾತೆ ತೆರೆಯುವುದಾದರೆ, ಸೆಲ್ಫ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ. ಬಳಿಕ ಅರ್ಜಿಯಲ್ಲಿ ಅಗತ್ಯ ಮಾಹಿತಿ ತುಂಬಿರಿ. ಒಂದು ಹಣಕಾಸು ವರ್ಷದಲ್ಲಿ ಎಷ್ಟು ಮೊತ್ತವನ್ನು ಖಾತೆಗೆ ಹಾಕುತ್ತೀರಿ ಎಂಬ ಬಗ್ಗೆ ಸ್ಪಷ್ಟವಾಗಿ ನಮೂದಿಸಿ. ಅಪ್ಲಿಕೇಶನ್ ಸಬ್ಮಿಟ್ ಮಾಡಿದ ಬಳಿಕ ನೊಂದಾಯಿತ ಮೊಬೈಲ್ ನಂಬರ್ಗೆ ಒಟಿಪಿ ಬರುತ್ತದೆ. ಅದನ್ನು ಎಂಟರ್ ಮಾಡಿ.
ಇದಾದ ನಂತರ ನಿಮ್ಮ ಪಿಪಿಎಫ್ ಖಾತೆ ತೆರೆಯುತ್ತದೆ. ಸ್ಕ್ರೂನ್ ಮೇಲೆ ನಿಮ್ಮ ಪಿಪಿಎಫ್ ಖಾತೆ ನಂಬರ್ ಕಾಣುತ್ತದೆ. ಇದನ್ನು ನಿಮ್ಮ ನೊಂದಾಯಿತ ಇಮೇಲ್ ವಿಳಾಸಕ್ಕೆ ಈ ಸಂಬಂಧ ಒಂದು ಮೇಲ್ ಬರುತ್ತದೆ. ಅಲ್ಲಿಗೆ ನೀವು ಪಿಪಿಎಫ್ ಖಾತೆ ತೆರೆದಿರುವುದಕ್ಕೆ ದೃಢೀಕರಣ ಬಂದಂತಾಗುತ್ತದೆ. ಇದರಲ್ಲಿ ಹಣವನ್ನು ಹೂಡುತ್ತಾ ಬಂದರೆ, 15 ವರ್ಷಗಳ ಬಳಿಕ ದೊಡ್ಡ ಮೊತ್ತವನ್ನು ಹಿಂಪಡೆಯಬಹುದಾಗಿದೆ.