ಬೆಂಗಳೂರು: ಹೊಸ ವರ್ಷ ಆಗಮನದ ಮುಂಚೆಯೇ ಬ್ಯಾಂಕ್ ಆಫ್ ಬರೋಡಾ (BOB) ತನ್ನ ಗ್ರಾಹಕರಿಗೆ ಸಿಹಿಸುದ್ದಿಯನ್ನು ನೀಡಿದೆ. BOBಯಲ್ಲಿ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 125 (1.25 ಪ್ರತಿಶತ) ಬೇಸಿಸ್ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಶೇ. ಅರ್ಧದಷ್ಟು ಬಡ್ಡಿ ದರವನ್ನು ಎಸ್‌ಬಿಐ ಹೆಚ್ಚಿಸಿದ ಬಳಿಕ ಈ ನಿರ್ಧಾರವನ್ನು BOB ಕೈಗೊಂಡಿದೆ. ಹೆಚ್ಚಿದ ಬಡ್ಡಿ ದರ ನಿನ್ನೆಯಿಂದಲೇ ಜಾರಿಗೆ ಬಂದಿದೆ ಎಂದು ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ಬ್ಯಾಂಕ್ ಆಫ್ ಬರೋಡಾ(BOB) ವತಿಯಿಂದ 16ರಿಂದ 25 ವರ್ಷಗಳ ವಯೋ ಮಾನದ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸ ಮಾಡಿದ ಶೂನ್ಯ ಉಳಿತಾಯ ಖಾತೆ ‘ ಬಿಡುಗಡೆ ಮಾಡಲಾಗಿದೆ.ಉಳಿತಾಯ ಖಾತೆಯು ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಅನುಕೂಲವನ್ನು ಒದಗಿಸುತ್ತದೆ. ಅವರ ನಿರ್ದಿಷ್ಟ ಅಗತ್ಯವನ್ನು ಪೂರೈಸುವುದಕ್ಕಾಗಿ ಗ್ರಾಹಕೀಯ ಗೊಳಿಸಲಾಗಿದೆ ಮತ್ತು ನಿರ್ವಹಣೆ ಮಾಡಲು. ಸುಲಭ ಹಾಗೂ ನೇರವಾಗಿದೆ. ಇದರಲ್ಲಿ ಕನಿಷ್ಠ ಬ್ಯಾಲೆನ್ಸ್ ಇಟ್ಟುಕೊಳ್ಳುವ ಆಗತ್ಯಲ್ಲ.
ಜೀವನಪೂರ್ತಿ ಉಚಿತವಾದ ಡೆಬಿಟ್ ಕಾರ್ಡ್(Debitcard) ಮತ್ತು ಹಲವು ಇತರ ಪ್ರಯೋಜನಗಳೂ ಇವೆ ಜತೆಗೆ ಬ್ಯಾಂಕ್ ಎಂದು ಪ್ರಕಟಣೆ ತಿಳಿಸಿದೆ.ಉಳಿತಾಯ ಖಾತೆಯಲ್ಲಿ ವಿದ್ಯಾರ್ಥಿಗಳಿಗೆ ಹಲವು ಕೊಡುಗೆಗಳಿವೆ. ಶಿಕ್ಷಣ ಸಾಲಗಳ ಮೇಲೆ 15 ಮೂಲಾಂಶದವರೆಗೆ ಬಡ್ಡಿ ದರ ರಿಯಾಯಿತಿ, ಶಿಕ್ಷಣ ಸಾಲಗಳ ಮೇಲೆ ಪ್ರಕ್ರಿಯೆ ಶುಲ್ಕ ಸಂಪೂರ್ಣ ವಿನಾಯಿತಿ ಮತ್ತು ಜೀವನಪೂರ್ತಿ ಉಚಿತ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಸೌಲಭ್ಯವಿದೆ.ಶಿಕ್ಷಣ ಸಾಲಗಳ ಮೇಲೆ 15 ಮೂಲಾಂಶದವರೆಗೆ ಬಡ್ಡಿದರ ರಿಯಾಯಿತಿ, ಶಿಕ್ಷಣ ಸಾಲಗಳ ಮೇಲೆ ಪ್ರಕ್ರಿಯೆ ಶುಲ್ಕ ಸಂಪೂರ್ಣ ವಿನಾಯಿತಿ. ಎಲೆಕ್ಟ್ರಾನಿಕ್ಸ್, ಗೃಹಬಳಕೆ ಸಾಮಗ್ರಿ, ಪ್ರಯಾಣ, ಆಹಾರ, ವಸ್ತ್ರ, ಮನರಂಜನೆ, ಜೀವನಶೈಲಿ, ದಿನಸಿ ಮತ್ತು ಆರೋಗ್ಯ ವಿಭಾಗಗಳಲ್ಲಿ ಪ್ರಮುಖ ಬ್ರಾಂಡ್‌ಗಳ ಮೇಲೆ ವಿಶೇಷ ಕೊಡುಗೆಗಳೂ ಇರಲಿವೆ ಎಂದರು.