20.4 C
Bengaluru
Saturday, November 23, 2024

ಪೋಸ್ಟ್ ಆಫೀಸಿನಲ್ಲಿ 5000 ಹೂಡಿಕೆ ಮಾಡಿ ಅಧಿಕ ಲಾಭ ಪಡೆಯಿರಿ..

ಬೆಂಗಳೂರು, ಡಿ. 23: ಹಲವು ವರ್ಷಗಳಿಂದ ಪೋಸ್ಟ್ ಆಫೀಸ್ ಜನಸಾಮಾನ್ಯರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದೆ. ಅಂತರ್ಜಾಲದ ಅಬ್ಬರದಿಂದ ಅಂಚೆ ಕಛೇರಿಗಳು ಮರೆಯಾಗುತ್ತಿವೆ. ಹಿಂದೆ, ನಾವು ದೂರದಲ್ಲಿರುವ ಜನರಿಗೆ ಸಂದೇಶಗಳನ್ನು ಕಳು ಹಿಸಲು ಪೋಸ್ಟ್‌ ಆಫೀಸ್‌ ಗಳ ಮೇಲೆ ಅವಲಂಬಿತರಾಗಿರುತ್ತಿದ್ದೆವು. ಆದರೆ ಈಗ ನಾವು Whatsapp ಮತ್ತು Facebook Messenger ಅನ್ನು ಹೊಂದಿದ್ದೇವೆ. ಆದರೂ, ಅಂಚೆ ಕಛೇರಿಗಳು ನಮ್ಮ ಜೀವನದಲ್ಲಿ ದೀರ್ಘಾವಧಿಯವರೆಗೆ ನಿರ್ಣಾಯಕ ಪಾತ್ರವನ್ನು ವಹಿಸಿವೆ ಎಂಬ ಅಂಶವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ. ಅಂಚೆ ಕಚೇರಿಗಳು ಈಗ ನಮ್ಮಲ್ಲಿ ಕೆಲವರಲ್ಲಿ ನಾಸ್ಟಾಲ್ಜಿಕ್ ಭಾವನೆಯನ್ನು ಹುಟ್ಟುಹಾಕುತ್ತವೆ.

ಈ ಯುಗದಲ್ಲಿ, ಅಂಚೆ ಕಚೇರಿಯನ್ನು ಬಳಸುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ವೃದ್ಧರು ಮಾತ್ರವೇ ಮೊದಲಿನಿಂದ ಇಂದಿನವರೆಗೂ ಪೋಸ್ಟ್‌ ಆಫೀಸ್ ಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದು, ಇಂದಿಗೂ ಬ್ಯಾಂಕ್‌ ಗಿಂತಲೂ ಪೋಸ್ಟ್‌ ಆಫೀಸ್‌ ಮೇಲೆ ಡಿಪೆಂಡ್‌ ಆಗಿದ್ದಾರೆ. ಇನ್ನು ಪೋಸ್ಟ್‌ ಆಫಿಸಿಲ್ಲಿ ಹುಟ್ಟಿದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಯೋಜನೆಗಳಿವೆ. ಆದರೆ, ಈಗ ಪೋಸ್ಟ್‌ ಆಫೀಸ್‌ ಅನ್ನು ಬಳಸುವವರ ಸಂಖ್ಯೆಯೇ ಕ್ಷೀಣಿಸಿದೆ. ಆದರೆ, ಪೋಸ್ಟ್‌ ಆಫೀಸಿನಲ್ಲಿ ಹಣ ಹೂಡಿದರೆ ಲಾಭವೂ ಅಧಿಕವಾಗಿದ್ದು, ಸುರಕ್ಷಿತವಾಗಿರುತ್ತದೆ. ಸದ್ಯ ನಮಗೆ ಹೂಡಿಕೆ ಮಾಡಲು ಸಾಕಷ್ಟು ಆಯ್ಕೆಗಳಿವೆ. ಆದರೆ, ಪೋಸ್ಟ್‌ ಆಫೀಸಿನಲ್ಲಿ ರಿಕ್ಯೂರಿಂಗ್‌ ಡೆಪಾಸಿಟ್‌ ಯೋಜನೆಯಿಂದ ಎಷ್ಟು ಲಾಭವಿದೆ ಎಂಬುದನ್ನು ತಿಳಿಯಿರಿ.

ಪ್ರತಿ ತಿಂಗಳು ಉಳಿತಾಯ ಮಾಡಿದ ಹಣವನ್ನು ಹೂಡಿಕೆ ಮಾಡಿ, ಕೊನೆಯಲ್ಲಿ ದೊಡ್ಡ ಮೊತ್ತದ ಹಣವನ್ನು ಪಡೆಯಲು ಪೋಸ್ಟ್‌ ಆಫೀಸ್‌ ನ ಆರ್‌ʼಡಿ ಅಕೌಂಟ್‌ ಉತ್ತಮವಾದ ಆಯ್ಕೆಯಾಗಿದೆ. ಅಂಚೆ ಕಚೇರಿಯಲ್ಲಿ ಪ್ರತೀ ತಿಂಗಳು 5000 ಸಾವಿರ ರೂಪಾಯಿ ಹಣವನ್ನು ಹೂಡಿಕೆ ಮಾಡಿ. ಒಟ್ಟು 5 ವರ್ಷಗಳ ಕಾಲ ಅಂದರೆ 60 ತಿಂಗಳು ಆರ್‌ʼಡಿಯಲ್ಲಿ ಪ್ರತೀ ತಿಂಗಳು 5000 ಡೆಪಾಸಿಟ್‌ ಮಾಡಿ. ಇದು ಕೊನೆಯಲ್ಲಿ ಬರೋಬ್ಬರಿ 3ಲಕ್ಷ ರೂಪಾಯಿ ಆಗುತ್ತದೆ. ನಿಮಗೆ ಬಡ್ಡಿ ಸಮೇತ 3,48,740/- ರೂಪಾಯಿ ನಿಮ್ಮ ಕೈ ಸೇರುತ್ತದೆ. ನಿಮಗೆ ತಿಳಿಯದೇ ನಿಮ್ಮ ಉಳಿತಾಯದ ಹಣ ದೊಡ್ಡ ಮೊತ್ತವಾಗಿ ಮಾರ್ಪಾಟಾಗಿರುತ್ತದೆ.

ಇನ್ನು ಆರ್‌ʼಡಿ ಅಕೌಂಟ್‌ ಅನ್ನು 100 ರೂಪಾಯಿ ಇಂದಲೂ ಪ್ರಾರಂಭಿಸಬಹುದು. 10 ವರ್ಷ ಮೇಲ್ಪಟ್ಟ ಮಕ್ಕಳು ಕೂಡ ಪೋಸ್ಟ್‌ ಆಫೀಸ್‌ ನಲ್ಲಿ ಆರ್‌ʼಡಿ ಅಕೌಂಟ್‌ ಅನ್ನು ತೆರೆಯಬಹುದು. 5 ವರ್ಷ ಅವಧೀಗೆ ಆರ್‌ʼಡಿ ಅಕೌಂಟ್‌ ತೆರೆದಲ್ಲಿ, ಮಧ್ಯದಲ್ಲಿ ಹಣ ತೆಗೆಯಲು ಸಾಧ್ಯವಿಲ್ಲ. ಮೆಚ್ಯುರಿಟಿಗೂ ಮುನ್ನವೇ ಅಕೌಂಟ್‌ ಹೋಲ್ಡರ್‌ ಸಾವನ್ನಪ್ಪಿದರೆ, ಮಾತ್ರವೇ ಹಣವನ್ನು ಹಿಂಪಡೆಯಲು ಸಾಧ್ಯ. ತಿಂಗಳಿಗೆ 5000ರೂ. ಹೂಡಿಕೆ ಮಾಡಿದರೆ, ನಿಮಗೆ ಶೇ. 5.8 ರಷ್ಟು ಬಡ್ಡಿ ದೊರೆಯುತ್ತದೆ. ಸಣ್ಣದಾಗಿ ಕೂಡಿಟ್ಟ ಹಣ ನಿಮಗೆ ದೊಡ್ಡ ಮೊತ್ತವಾಗಿ ಕೈ ಸೇರುತ್ತದೆ. ಇನ್ನು ಪೋಸ್ಟ್‌ ಆಫೀಸ್‌ ನಲ್ಲಿ ಹಣ ಹೂಡುವುದರಿಂದ ನಿಮ್ಮ ಹಣಕ್ಕೂ ರಕ್ಷಣೆ ಇರುತ್ತದೆ. ಇನ್ಯಾಕೆ ತಡ, ಈಗಲೇ ಪೋಸ್ಟ್‌ ಆಫೀಸ್‌ ಗೆ ತೆರಳಿ ಇಂದೇ ನಿಮ್ಮ ಆರ್ʼಡಿ ಅಕೌಂಟ್‌ ಅನ್ನು ತೆರೆಯಿರಿ.

Related News

spot_img

Revenue Alerts

spot_img

News

spot_img