ಬೆಂಗಳೂರು, ಆ . 14 : ಮನೆಯಲ್ಲಿ ಮಹಿಳೆಯರು ಎಷ್ಟು ಹಣ ಕೂಡಿಟ್ಟರೂ ಕಡಿಮೆಯೇ. ಮೊದಲೆಲ್ಲಾ ಸಾಸಿವೆ ಡಬ್ಬಿ, ಜೀರಿಗೆ ಡಬ್ಬಿಗಳಲ್ಲಿ ಹಣ ಕೂಡಿಟ್ಟು, ಕಷ್ಟ ಬಂದಾಗ ಅಥವಾ ಅನಿವಾರ್ಯತೆ ಇದ್ದಾಗ ಬಳಕೆಗೆ ಬರುವಂತೆ ಮಾಡುತ್ತಿದ್ದರು. ಆದರೆ ಈಗ ಬ್ಯಾಂಕ್ ಖಾತೆಗಳಲ್ಲಿ ಉಳಿತಾಯ ಮಾಡಲು ಶುರು ಮಾಡಿದ್ದಾರೆ. ಇನ್ನೂ ಕೆಲ ಹೆಣ್ಣು ಮಕ್ಕಳು ಯೋಜನೆಗಳಿಗೆ ಹಣ ಹೂಡಿಕೆ ಮಾಡಿ ಅದರ ಲಾಭ ಪಡೆಯುತ್ತಾರೆ. ಮಹಿಳೆಯರಿಗಾಗಿಯೇ ಈಗ ಸಾಕಷ್ಟು ಯೋಜನೆಗಳು ಕೂಡ ಬಂದಿವೆ.
ಎಲ್ ಐಸಿ ಕಂಪನಿಯೂ ವಯಸ್ಸಾದವರಿಗೆ, ಮಕ್ಕಳಿಗೆ, ಆರೋಗ್ಯ ಸಮಸ್ಯೆಗೆ, ವಿದ್ಯಾಭ್ಯಾಸಕ್ಕೆ, ನಿವೃತ್ತಿಗೆ ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ಕಷ್ಟವಾಗದಿರಲಿ ಎಂದು ನೂರಾರು ಯೋಜನೆಗಳನ್ನು ಪರಿಚಯಿಸಿದ್ದಾರೆ. ಅದೇ ರೀತಿಯಲ್ಲಿ ಮಹಿಳೆಯರು ಸಾಸಿವೆ ಡಬ್ಬಿ, ಸೀರೆ ಅಡಿಯಲ್ಲಿ ಹಣ ಕೂಡಿಡುವ ಬದಲು ಎಲ್ ಐಸಿಯ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ, ಲಾಭವನ್ನೂ ಗಳಿಸಬಹುದು. ನಿತ್ಯ 87 ರೂಪಾಯಿ ಕೂಡಿಟ್ಟು ಒಟ್ಟಿಗೆ ಲಕ್ಷ ಲಕ್ಷ ಹಣವನ್ನು ಪಡೆಯಬಹುದು.
ಎಲ್ ಐಸಿಯ ಈ ಯೋಜನೆ ಹೆಸರು ಆಧಾರ್ ಶಿಲಾ. ಇದರಲ್ಲಿ ಮಹಿಳೆಯರಿಗೆ ಮಾತ್ರವೇ ಹೂಡಿಕೆ ಮಾಡಲು ಅವಕಾಶವಿರುತ್ತದೆ. ಇದು 75 ಸಾವಿರದಿಂದ 3ಲಕ್ಷದವರೆಗಿನ ಪಾಲಿಸಿ ಆಗಿದೆ. 8 ವರ್ಷದಿಂದ 55 ವರ್ಷದವರೆಗಿನ ಮಹಿಳೆಯರು ಈ ಪಾಲಿಯನ್ನು ಪಡೆಯಬಹುದು. ಇದಕ್ಕಾಗೊ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಾಗುತ್ತದೆ. ಈ ಪಾಲಿಸಿಯಲ್ಲಿ ಡೆತ್ ಬೆನಿಫಿಟ್ ಕೂಡ ಇದೆ. 2020 ರಲ್ಲಿ ಈ ಯೋಜನೆಯನ್ನು ಎಲ್ ಐಸಿ ಜಾರಿಗೆ ತಂದಿದೆ.
ಇದರಲ್ಲಿ ನಿತ್ಯ 29 ರೂಪಾಯಿಯಂತೆ ವರ್ಷಕ್ಕೆ 10959 ರೂ.ಗಳನ್ನು ಈ ಯೋಜನೆ ಅಡಿಯಲ್ಲಿ ಪಾವತಿ ಮಾಡಿದರೆ, 10 ವರ್ಷಗಳ ಅವಧಿಗೆ ಈ ಹಣ 2,14,696 ರೂ. ಆಗುತ್ತದೆ. ಇದು ಮೆಚ್ಯೂರಿಟಿಗೆ ಬಂದಾಗ ನಿಮಗೆ 3,97,000 ಒಲಕ್ಷ ನಿಮಗೆ ಸಿಗುತ್ತದೆ. ಇದರಂತೆಯೇ ನೀವು ಪ್ರತಿ ದಿನ 87 ರೂ. ಇಟ್ಟರೆ, ತಿಂಗಳಿಗೆ 2610 ಪಾವತಿ ಮಾಡಿದರೆ, ಮೆಚ್ಯುರಿಟಿ ಸಂದರ್ಭದಲ್ಲಿ ಇದು ನಿಮಗೆ 11 ಲಕ್ಷ ಮೊತ್ತವನ್ನು ಕೊಡುತ್ತದೆ. ಇದರಲ್ಲಿ ಸರೆಂಡರ್ ಕೂಡ ಮಾಡಿಕೊಳ್ಲುವ ಅವಕಾಶವಿದೆ.