#Sale of plots # creating fake account #Cancel account # 55 plots #ordered # G.R. Manjunath
ಚಿಕ್ಕಬಳ್ಳಾಪುರ, ನ.28: ಜಿಲ್ಲೆಯಲ್ಲಿ ನಕಲಿ ದಾಖಲೆ(Fake document) ಸೃಷ್ಠಿಸಿ ಅಧಿಕಾರಿಗಳು, ಜನಪ್ರತಿನಿಧಿಗಳೇ ನಿವೇಶನಗಳನ್ನು ಮಾರಾಟ ಮಾಡಿದ್ದರು. ನಕಲಿ ಖಾತೆ ಸೃಷ್ಟಿಸಿ ನಿವೇಶನಗಳ ಮಾರಾಟ (Land Sale) ಮಾಡಿದ್ದ ಕೇಸ್ಗೆ ಸಂಬಂಧಿಸಿ ಮಾರಾಟ ಮಾಡಿದ್ದ 55 ನಿವೇಶನಗಳ ಖಾತೆ ರದ್ದು ಮಾಡಿ ತಾ.ಪಂ ಇಒ ಜಿ.ಆರ್.ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿಕೊಂಡು ಜನವಸತಿ ಇಲ್ಲದ ಬಾರ್ಲಹಳ್ಳಿ ಗ್ರಾಮವನ್ನೆ ಮಾರಾಟ ಮಾಡಿದ್ದರು. ಗ್ರಾಮದ ಸ್ವತ್ತಿಗೆ ಅಕ್ರಮವಾಗಿ ಖಾತೆಗಳನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು.ಈ ಕುರಿತಂತೆ ದೂರುಗಳು ಬಂದ ಹಿನ್ನಲೆಯಲ್ಲಿ ತನಿಖೆಗೂ ಆದೇಶಿಸಲಾಗಿತ್ತು. ತನಿಖೆಯ ವೇಳೆ ನಕಲಿ ಖಾತೆ(Fake account) ಸೃಷ್ಠಿಸಿ ನಿವೇಶನ ಮಾರಾಟ ಮಾಡಿರೋದು ದೃಢಪಟ್ಟಿದೆ.ನಕಲಿ ಖಾತೆ ಸೃಷ್ಠಿಸಿ ಮಾರಾಟ ಮಾಡಿದ್ದಂತ 55 ನಿವೇಶನಗಳನ್ನು ಚಿಕ್ಕಬಳ್ಳಾಪುರ(Chikkaballapura) ತಾಲೂಕು ಪಂಚಾಯ್ತಿ ಕಾರ್ಯ ನಿರ್ವಾಹಣಾಧಿಕಾರಿ(Taluk Panchayat Executive Officer) ಜಿ.ಆರ್ ಮಂಜುನಾಥ್ ಆದೇಶಿಸಿದ್ದಾರೆ.ಬಾರ್ಲಹಳ್ಳಿ ಗ್ರಾಮವನ್ನು ನಿವೇಶನಗಳನ್ನಾಗಿ ವಿಂಗಡಿಸಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಗ್ರಾಮ ಪಂಚಾಯ್ತಿ PDO ಎಂ.ಸಿ. ವೆಂಕಟೇಶ ಅವರನ್ನು ಅಮಾನತು(suspend) ಮಾಡಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿ CEO ಪ್ರಕಾಶ ಜೆ. ನಿಟ್ಟಾಲಿ ಆದೇಶ ಹೊರಡಿಸಿದ್ದರು.ಈತ ತನ್ನ ಪತ್ನಿ ಹೆಸರಿನಲ್ಲಿ ದಾಖಲೆ ಸೃಷ್ಠಿಸಿ ನಿವೇಶನ ಮಾರಿದ್ದರು. ಪ್ರಕರಣ ಸಂಬಂಧ ಹಿಂದಿನ ಪಿಡಿಓ ವಿರುದ್ಧವೂ ಕ್ರಮ ಜರುಗಿಸಲಾಗಿದೆ.ಗ್ರಾ.ಪಂ ಅಧ್ಯಕ್ಷೆ ನಾಗಮಣಿ ಅನುಮತಿ ಮೇರೆಗೆ ಪಿಡಿಒ ಅರುಣ ಗೋಪಿ ಆದೇಶ ಹೊರಡಿಸಿದ್ದಾರೆ.