ಬೆಂಗಳೂರು;ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಗೆ ನಗರದ 30 ಕಡೆಗಳಲ್ಲಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಜಾರಿ ಮಾಡಿದ್ದೇವೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ತಿಳಿಸಿದರು.ಅಪರಾಧಿಗಳನ್ನು ಹಿಡಿಯಲು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(AI) ಕೂಡ ಬಳಕೆ ಮಾಡುತ್ತಿದ್ದೇವೆ. ಪೊಲೀಸರ ಪ್ರತಿಕ್ರಿಯೆ ಸಮಯ ಕೂಡ ವೇಗವಾಗಿ ಮಾಡುವ ಪ್ರಯತ್ನ ನಡೆದಿದೆ ಎಂದರು.ಬಳಕೆದಾರರು ಸೇಫ್ಟಿ ಐಲ್ಯಾಂಡ್ ವ್ಯವಸ್ಥೆ ಬಳಿ ಬಂದು SOS ಬಟನ್ ಒತ್ತಬೇಕು. ಇದು ಸಮೀಪದ ನಿಯಂತ್ರಣ ಕೊಠಡಿಗೆ ಸಂಪರ್ಕ ಕಲ್ಪಿಸಿ, ಕರೆ ಮಾಡಿದ ವ್ಯಕ್ತಿಯ ಪರಿಸ್ಥಿತಿ ಬಗ್ಗೆ ತಿಳಿಸುತ್ತದೆ. ಪೊಲೀಸ್ ಸಿಬ್ಬಂದಿ ಸಾಧ್ಯವಾದಷ್ಟು ಬೇಗ ಸ್ಥಳಕ್ಕೆ ಆಗಮಿಸುತ್ತಾರೆ. ತೊಂದರೆಯಲ್ಲಿರುವ ವ್ಯಕ್ತಿಯು ಮೊಬೈಲ್ ಫೋನ್ ಬಳಸುವ ಸ್ಥಿತಿಯಲ್ಲಿಲ್ಲದಿದ್ದರೂ ಸಹ ಪೊಲೀಸರನ್ನು ತಲುಪುವ ರೀತಿಯಲ್ಲಿ ಸೇಫ್ಟಿ ಐಲ್ಯಾಂಡ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.ಆದರೆ ಈಗ ಮಹಿಳಾ ಸುರಕ್ಷತೆ ಜೊತೆಗೆ ಇತರೆ ಸಮಾಜ ಬಾಹೀರ ಶಕ್ತಿಗಳಿಗೆ ಕಡಿವಾಣ ಹಾಕಲು ಬೆಂಗಳೂರಲ್ಲಿ ಸೇಫ್ಟಿ ಐಲ್ಯಾಂಡ್ ಸಿಸ್ಟಂ ಜಾರಿಗೆ ಬಂದಿದೆ.ಪ್ರತಿ ಸೇಫ್ಟಿ ಐಲ್ಯಾಂಡ್(Safty iland) ವ್ಯವಸ್ಥೆ ಬಳಿ ಸಿಸಿಟಿವಿ ಹೊಂದಿದ್ದು, ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯ ಬಗ್ಗೆ ನೈಜ ಸಮಯದ ಮಾಹಿತಿ ನೀಡುತ್ತದೆ. ಮಹಿಳೆಯರ ಸುರಕ್ಷತೆ ಇದರ ಮೂಲ ಉದ್ದೇಶ.ಬೆಂಗಳೂರಿನಲ್ಲಿ 7500 ಕ್ಯಾಮೆರಾಗಳು ಇವೆ. ನಗರದ ನಿಗದಿತ ಪ್ರದೇಶದಲ್ಲಿ ಅಲರಾಂ ಇರಲಿದೆ. ಇವುಗಳ ಮೇಲೆ 24 ಗಂಟೆ ನಿಗಾ ಇರಲಿದೆ ಎಂದರು.