25.6 C
Bengaluru
Monday, December 23, 2024

ರೆವಿನ್ಯೂ ಫ್ಯಾಕ್ಟ್ ವಾಸ್ತು ಗೂರೂಜಿ ಡಾ. ರೇವತಿ ವೀ. ಕುಮಾರ್ ಕಿರು ಪರಿಚಯ

ವಾಸ್ತು ಶಾಸ್ತ್ರ ಕೇವಲ ಕಾಲ್ಪನಿಕವಲ್ಲ. ಪಂಚತತ್ವಗಳ ಮೇಲೆ ನಿಂತಿರುವ ಇದೊಂದು ವೇದ ವಿಜ್ಞಾನ. ಪ್ರಾಚೀನ ಕಾಲದಿಂದಲೂ ವಾಸ್ತುವಿಗೆ ಇನ್ನಿಲ್ಲದ ಮಹತ್ವ ಇದೆ. ಈಗಲೂ ಜಾಗತಿಕವಾಗಿ ವಾಸ್ತುಶಾಸ್ತ್ರಕ್ಕೆ ಮನ್ನಣೆ ಇದೆ. ಇದನ್ನೇ ಅರಿತು ಕೆಲವರು ಸುಳ್ಳೇ – ಸುಳ್ಳುಗಳನ್ನು ಜನರಿಗೆ ಹೇಳಿ ವ್ಯಾಪಾರ ಮಾಡಿಕೊಂಡಿದ್ದಾರೆ. ವಾಸ್ತು ಬಗ್ಗೆ ಗಂಧ ಗಾಳಿ ಗೊತ್ತಿಲ್ಲದವರೂ ಗುರೂಜಿ ಪಟ್ಟ ಧರಿಸಿ ವಾಸ್ತು ಹೆಸರಲ್ಲಿ ಜನರಿಗೆ ಮಂಕುಬೂದಿ ಹಾಕುವ ಅನೇಕ ಘಟನೆಗಳು ದಿನ ನಿತ್ಯ ನಿಂತಿರುತ್ತವೆ. ಇದಕ್ಕೆ ಕಡಿವಾಣ ಹಾಕಿ ವೇದಿಕ್ ವಾಸ್ತುವನ್ನು ವೈಜ್ಞಾನಿಕವಾಗಿ ಅಸಲಿ ಪಂಡಿತರಿಂದ ಜನರಿಗೆ ಸರಳವಾಗಿ ಅರ್ಥ ಪಡಿಸುವ ಉದ್ದೇಶದಿಂದಲೇ ರೆವಿನ್ಯೂ ಫ್ಯಾಕ್ಟ್ ವೇದಿಕ್ ವಾಸ್ತ ಪರಿಚಯಿಸಿದೆ.

ವಾಸ್ತು ಎಂದರೆ, ವಾಸು ಅಥವಾ ಭೂಮಿಯಿಂದ ಬಂದ್ದು ಎಂದರ್ಥ. ಭೂಮಿಯ ಕಟ್ಟಡಗಳ ಎಲ್ಲಾ ಮೂಲ ತತ್ವ, ಭೂಮಿಯ ಮೇಲಿರುವ ಎಲ್ಲಾ ಕಟ್ಟಡಗಳು, ಭೂಮಿಯಿಂದ ಬರುವ ಎಲ್ಲಾ ವಸ್ತುಗಳು ಸಹ ವಾಸ್ತು ಆಗಿದೆ. ವಾಸ್ತು ಎಂಬುದು ಕೇವಲ ಮನೆಗಳಿಗೆ ಸೀಮಿತವಲ್ಲ. ಗರುಡ ಪುರಾಣದ ಪ್ರಕಾರ, ಪ್ರತಿ ಕಟ್ಟಡಕ್ಕೆ, ಮನೆ, ಸರ್ಕಾರಿ ಕಚೇರಿ, ವಾಣಿಜ್ಯ ಸಂಕೀರ್ಣ, ಕೋಟೆ, ನಗರ ನಿರ್ಮಾಣ, ಉದ್ಯಾನವನ, ಮನರಂಜನಾ ಕಟ್ಟಡ, ಮಠ, ಗುಡಿ ಗೋಪುರ, ಬಂದರು, ವಿಮಾನ ನಿಲ್ದಾಣ, ಎಲ್ಲಾ ಸ್ಥಳಗಳಿಗೂ ಅನ್ವಯ ಆಗುತ್ತದೆ.

ರೆವಿನ್ಯೂ ಫ್ಯಾಕ್ಟ್ ವಾಸ್ತು ಗುರೂಜಿ ಪರಿಚಯ:
ಡಾ. ವೀ ಕುಮಾರ್ ಅವರು ರೆವಿನ್ಯೂ ಫ್ಯಾಕ್ಟ್ ವೆಬ್ ತಾಣಕ್ಕೆ ವಾಸ್ತು ಕುರಿತ ಸರಣಿ ಲೇಖನ ಪ್ರಸ್ತುತ ಪಡಿಸಲಿದ್ದಾರೆ. ಸಾಮಾನ್ಯವಾಗಿ ಡಾ. ರೇವತಿ ವೀ. ಕುಮಾರ್ ಎಂದೇ ಚಿರಪರಿಚಿತರಾಗಿದ್ದಾರೆ. ಇವರು ವೇದಿಕ್ ವಾಸ್ತು ಶಾಸ್ತ್ರದ ಪಂಡಿತರು ಮಾತ್ರವಲ್ಲ, ಸಂಶೋಧಕರು. ಜ್ಯೋತಿಷ್ಯ, ವಾಸ್ತು ಹಾಗೂ ಇನ್ನಿತರ ನಿಗೂಢ ವಿದ್ಯೆ ಕುರಿತ ದೇಶದ ಅತ್ಯುತನ್ನತ ಸಂಸ್ಥೆಯಾಗಿರುವ ಇಂಡಿಯನ್ ಕೌನ್ಸಿಲ್ ಆಫ್ ಅಸ್ಟ್ರಾಲಾಜಿಕಲ್ ಸೈನ್ಸ್ (ICAS) ಚಾಪ್ಟರ್ -1 ಮುಖ್ಯಸ್ಥರಾಗಿ ಸದ್ಯ ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ರೇವತಿ ವೀ ಕುಮಾರ್ ಅವರು ಜ್ಯೋತಿಷ್ಯ, ವಾಸ್ತು, ಸಂಖ್ಯಾಶಾಸ್ತ್ರ, ಫೆಂಗ್‌ಶ್ಯೂಯಿ, ಅಸ್ತ್ರ ಸಾಮುದ್ರಿಕ ಶಾಸ್ತ್ರ ಇನ್ನಿತರ ನಿಗೂಢ ವಿದ್ಯೆಗಳ ಬಗ್ಗೆ AIFAS ಬೆಂಗಳೂರು ಇಲ್ಲಿ 2002 ರಿಂದ 2012 ರ ವರೆಗೂ ಜ್ಯೋತಿಷ್ಯ ಮತ್ತು ನಿಗೂಢ ವಿದ್ಯೆಗಳ ಬಗ್ಗೆ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ.

2012 ರಿಂದ ಈಚೆಗೆ ICAS ಬೆಂಗಳೂರು ಚಾಪ್ಟರ್ 1 ರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮೂಲತಃ ವಿಜ್ಞಾನ ವಿದ್ಯಾರ್ಥಿಯಾಗಿದ್ದು, ಜ್ಯೋತಿಷ್ಯದಲ್ಲಿ MA, ಪದವಿಯನ್ನು ಹೈದರಾಬಾದ್ ನ ಪೊಟ್ಟಿ ಶ್ರೀರಾಮುಲು ತೆಲಗು ವಿಶ್ವ ವಿದ್ಯಾಲಯದಲ್ಲಿ ಪಡೆದಿರುತ್ತಾರೆ. ಆ ಬಳಿಕ ತತ್ವಶಾಸ್ತ್ರ ಮತ್ತು ಧರ್ಮದ ಬಗ್ಗೆ ಮತ್ತೊಂದು ಪದವಿಯನ್ನು ತಮಿಳುನಾಡಿನ ಮಧುರೈ ಕಾಮರಾಜು ವಿಶ್ವವಿದ್ಯಾನಿಲಯದಲ್ಲಿ ಪಡೆದಿರುತ್ತಾರೆ. ತದನಂತರ ವಾಸ್ತು ಬಗ್ಗೆ ಡಾಕ್ಟರೇಟ್ ಪದವಿಯನ್ನು ( Phd) ಅಂತಾರಾಷ್ಟ್ರೀಯ ಮುಕ್ತ ವಿಶ್ವ ವಿದ್ಯಾನಿಲಯ ಪರ್ಯಾಯ ವೈದ್ಯ ವಿಜ್ಞಾನ ಶ್ರೀಲಂಕಾ ಇಲ್ಲಿ 2010 ರಲ್ಲಿ ಪಡೆದಿರುತ್ತಾರೆ. ಡಾ. ರೇವತಿ ವೀ ಕುಮಾರ್ ವೃತ್ತಿಯಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿ ಬಿಎಸ್‌ಎನ್‌ಎಲ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುತ್ತಾರೆ.

25ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧ:
ಡಾ. ರೇವತಿ ವೀ. ಕುಮಾರ್ ರವರು, ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಇತರೆ ವಿಚಾರಗಳಲ್ಲಿ 25 ಕ್ಕೂ ಅಧಿಕ ಸಂಶೋಧನಾ ಪ್ರಬಂಧ ಮಂಡಿಸಿದ್ದು, AIFAS ವಿವಿಯ ಸಂಶೋಧನಾ ಜರ್ನಲ್ ಹಾಗೂ ಇನ್ನಿತರ ಮಾಧ್ಯಮಗಳಲ್ಲಿ ಇವರ ಸಂಶೋಧನಾ ಪ್ರಬಂಧಗಳು ಪ್ರಕಟವಾಗಿರುತ್ತವೆ.

ಪದವಿಗಳು:
ಡಾ. ರೇವತಿ ವೀ. ಕುಮಾರ್ ಅವರಿಗೆ ಆಚಾರ್ಯ, ಪ್ರಾಚಾರ್ಯ, ವಾಚಸ್ಪತಿ, ಜ್ಯೋತಿರ್‌ವಿದ್ವಾನ್, ಜ್ಯೋತಿಷ್ಯ ಕಲಾದಾರ, ಜ್ಯೋತಿರ್ ಮಾರ್ತಂಡ, ಜ್ಯೋತಿಷ್ಯ ಮಹೋಪಾಧ್ಯಾಯ ಎಂಬ ಬಿರುದುಗಳನ್ನು ವಿವಿಧ ಸಂಸ್ಥೆಗಳು ನೀಡಿ ಗೌರವಿಸಿರುತ್ತವೆ.

ಇವರು ಜ್ಯೋತಿಷ್ಯ, ವಾಸ್ತು,ಸಂಖ್ಯಾ ಶಾಸ್ತ್ರ ಮತ್ತು ನಿಗೂಢ ವಿದ್ಯೆ ಬಗ್ಗೆ, Foundation of Vedik Vastu ಮತ್ತು Medical Vastu Shastra ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಮೂರನೇ ಪುಸ್ತಕ ಪರ್ಯಾಯ ವಾಸ್ತುಶಾಸ್ತ್ರ ಶೀಘ್ರದಲ್ಲಿಯೇ ಪ್ರಕಟವಾಗಲಿದೆ. ನಾಲ್ಕನೇ ಪುಸ್ತಕ ದಿ ಟೆಕ್ನಿಕ್ಸ್ ಆಫ್ ಪ್ರಿಡಿಕ್ಷನ್ ಎಂಬ ವಾಸ್ತುಶಾಸ್ತ್ರ ಕುರಿತ ಪುಸ್ತಕ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ.

ವಾಸ್ತು, ಸಂಖ್ಯಾಶಾಸ್ತ್ರ ಬಗ್ಗೆ ಡಾ. ರೇವತಿ ವಿ. ಕುಮಾರ್ ಸಂಪರ್ಕಿಸಲು www.revenuefacts.com ಮೂಲಕ ಭೇಟಿ ಕೊಡಿ ಅಥವಾ 6363386332

Related News

spot_img

Revenue Alerts

spot_img

News

spot_img