28.3 C
Bengaluru
Friday, June 28, 2024

ರಾಜ್ಯದಲ್ಲಿ ಭೂ ಪರಿವರ್ತನೆ ಜಮೀನುಗಳ ನೋಂದಣಿ ಸ್ಥಗಿತಗೊಳಿಸಿ ಆದೇಶ

#Registration, #Land, #Revenu department, #Real estate
ಬೆಂಗಳೂರು, ಡಿ. 14: ಭೂ ಪರಿವರ್ತನೆಯಾದ ಜಮೀನುಗಳನ್ನು ರಾಜ್ಯದಲ್ಲಿ ಉಪ ನೋಂದಣಾಧಿಕಾರಿಗಳು ನೋಂದಣಿ ಮಾಡದಂತೆ ಕಾವೇರಿ 2 .0 ತಂತ್ರಾಂಶದಲ್ಲಿ ಮಾರ್ಪಾಡು ಮಾಡಲಾಗಿದೆ.ಭೂ ಪರಿವರ್ತನೆಯಾಗಿರುವ ಜಮೀನು ಪಹಣಿಗಳಲ್ಲಿ ಕ್ರಯ ಇತ್ಯಾದಿ ನೋಂದಣಿ ಮಾಡುತ್ತಿದ್ದು, ಹಕ್ಕು ಬದಲಾವಣೆಗಾಗಿ ಭೂಮಿ ತಂತ್ರಾಂಶಕ್ಕೆ ಜೆ ಸ್ಲಿಪ್‌ ಗಳನ್ನು ಕಳುಹಿಸಲಾಗುತ್ತಿದೆ.

ಭೂ ಪರಿವರ್ತನೆ ಬಳಿಕ ಪರಿವರ್ತಿತ ಜಮೀನುಗಳಿಗೆ ಜೆ ಸ್ಲಿಪ್‌ ಗಳನ್ನು ನಿಯಮಾನುಸಾರ ಭೂ ಕಂದಾಯ ಕಡಿತಗೊಳಿಸಿ ನಗರ ಸ್ಥಳೀಯ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಿಗಳು ಆಸ್ತಿ ಗುರುತಿನ ಸಂಖ್ಯೆ ನೀಡಿ ನಿರ್ವಹಣೆ ಮಾಡಬೇಕಾಗಿರುತ್ತದೆ.ಈ ಕಾರ್ಯ ನಿರ್ವಹಣೆಯಲ್ಲಿ ಕ್ರಮ ಬದ್ಧತೆ ಇಲ್ಲದ ಕಾರಣ ಇ ಖಾತಾ ಮತ್ತು ಭೂಮಿ ಪಹಣಿಗಳಲ್ಲಿ ನಿಯಮ ಬಾಹಿರವಾಗಿ ಎರಡೂ ಕಡೆ ಕ್ರಯದ ವಹಿವಾಟು ನಡೆಯುತ್ತಿದ್ದು, ಭವಿಷ್ಯದಲ್ಲಿ ಭೂ ವ್ಯಾಜ್ಯಗಳು ಉದ್ಭವಿಸುವ ಸಾಧ್ಯತೆಯಿದೆ. ಅಂದರೆ ಪರಿವರ್ತಿತ ಜಮೀನಿನ ಪರಭಾರೆ ಹಾಗೂ ಪರಿವರ್ತಿತ ಜಮೀನನ್ನು ನಿವೇಶನಗಳನ್ನಾಗಿ ವಿಂಗಡಿಸಿ ಪರಭಾರೆ ಮಾಡುವ ಅಪಾಯವಿದೆ.

ಈ ಹಿನ್ನೆಲೆಯಲ್ಲಿ ಭೂ ಪರಿವರ್ತನೆಯಾಗಿ ಫ್ಲಾಗ್‌ ಆಗಿರುವ ಪಹಣಿಗಳಲ್ಲಿ ಪರಭಾರೆ ಆಗದಂತೆ ತಡೆಯುವ ಸಲುವಾಗಿ ಸದರಿ ಪಹಣಿಗಳ ಮೂಲಕ ನೋಂದಣಿಯಾದಂತೆ ತಂತ್ರಾಂಶದಲ್ಲಿ ನಿರ್ಬಂಧ ವಿಧಿಸಲಾಗಿದೆ. ಅಫಿಡವುಟ್‌ / ಮಾಸ್ಟರ್‌ ಪ್ಲಾನ್‌ ಆಧಾರಿತ ಭೂ ಪರಿವರ್ತನಾ ತಂತ್ರಾಂಶ ಜಾರಿಗೊಳಿಸಿದ ನಂತರದಲ್ಲಿ ಪರಿವರ್ತನೆಯಾದ ಎಲ್ಲಾ ಜಮೀನುಗಳ ಪಹಣಿಗಳಲ್ಲಿ ಪರಿಪೂರ್ಣವಾಗಿ ಭೂ ಪರಿವರ್ತನೆ ಫ್ಲಾಗ್ ಮಾಡಲು ಕ್ರಮ ವಹಿಸಲಾಗಿದೆ.

ಅಫಿಡವಿಟ್‌ / ಮಾಸ್ಟರ್‌ ಪ್ಲಾನ್‌ ಭೂ ಪರಿವತ್ನಾ ತಂತ್ರಾಂಶ ಜಾರಿಗೊಳಿಸಿದಕ್ಕಾಗಿ ಮುಂಚಿತವಾಗಿ ಪರಿವರ್ತನೆಯಾದ ಎಲ್ಲಾ ಜಮೀನುಗಳ ಪಹಣಿಗಳನ್ನು ಪರಿಪೂರ್ಣವಾಗಿ ಭೂ ಪರಿವರ್ತನೆ ಫ್ಲಾಗ್‌ ಮಾಡಿಲ್ಲ. ದಿನಾಂಕ 2018 , 03- 1 ಮುಂಚಿತವಾಗಿ ಭೂ ಪರಿವರ್ತನಾ ಕೋರಿಕೆಗಳನ್ನು ಭೌತಿಕ ಕಡತಗಳಲ್ಲಿ ( ಮ್ಯಾನುಯಲ್ ) ನಿರ್ವಹಿಸಲಾಗಿದ್ದು ಸದರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಭೂ ಪರಿವರ್ತನೆಯಾದ ಜಮೀನುಗಳ ಪಹಣಿಗಳಲ್ಲಿ ಭೂ ಪರಿವರ್ತನೆ ಫ್ಲಾಗ್‌ ಮಾಡಲು ನಿಯಮಾನುಸುಆರ ಪರಿಶೀಲಿಸಿ ಕ್ರಮ ಜರುಗಿಸಲು ತಹಶೀಲ್ದಾರರಿಗೆ ಸೂಕ್ತ ನಿರ್ದೇಶನ ನೀಡಲು ಸೂಚಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Related News

spot_img

Revenue Alerts

spot_img

News

spot_img