18.5 C
Bengaluru
Friday, November 22, 2024

ಹುನ್ನೂರ ಚೆಕ್ ಪೋಸ್ಟ್ ನಲ್ಲಿ ದಾಖಲೆ ಇಲ್ಲದ ಬಾರಿ ಮೊತ್ತದ ಹಣ ರವಾನೆ

ಬಾಗಲಕೋಟೆ;ಜಮಖಂಡಿ ತಾಲೂಕಿನ ಹುನ್ನೂರು ಚೆಕ್​​ಪೋಸ್ಟ್​ನಲ್ಲಿಸಂಶಯಾಸ್ಪದವಾದ ಹಾಗೂ ದಾಖಲೆ ಇಲ್ಲದ ಒಟ್ಟು 2.10 ಕೋಟಿ ರೂ.ಗಳ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದ್ದಾರೆ,ಮುಧೋಳದಿಂದ ಅಥಣಿ ಕಡೆಗೆ ತೆರಳುತ್ತಿದ್ದ ಬೊಲೆರೊ ವಾಹನದಲ್ಲಿ ಬಾರಿ ಮೊತ್ತದ ಹಣ ರವಾನೆ ಮಾಡಲಾಗುತ್ತಿತ್ತು.

ಅನುಮಾನಾಸ್ಪದ ಒಂದು ವಾಹನವನ್ನು ತಡೆದು ನಿಲ್ಲಿಸಿ ತಪಾಸನೆಗೊಳಪಡಿಸಿದಾಗ ದಾಖಲೆ ಇಲ್ಲದ ಅಂದಾಜು 2.10 ಕೋಟಿ ರೂ.ಗಳ ಮೊತ್ತವನ್ನುಸೌಹಾರ್ದ ಬ್ಯಾಂಕಿಗೆ ಸಂಬಂಧಿಸಿದವರಾಗಿ ತಿಳಿಸಿದ್ದು, ನೀಡಿರುವ ದಾಖಲಾತಿಗಳು ಪರಿಪೂರ್ಣ ವೆಂದು ಪರಿಗಣಿಸಲು ಸಾಧ್ಯವಾಗದೆ ಇದ್ದ ಹಿನ್ನೆಲೆಯಲ್ಲಿ ಅವರಿಗೆ ದಾಖಲೆ ಒದಗಿಸಲು ಹೆಚ್ಚಿನ ಅವಕಾಶವನ್ನು ನೀಡಿ, ಸದರಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಚುನಾವಣಾಧಿಕಾರಿಗಳ ಕಚೇರಿಯಿಂದ ಜಮಖಂಡಿಯ ಸರ್ಕಾರಿ ಖಜಾನೆಗೆ ಜಮಾ ಮಾಡಲಾಗಿದೆ. ಹಿಪ್ಪರಗಿ ಸತ್ತಿ ಅಥನಿ ಬನಹಟ್ಟಿ ರಬಕವಿ ಬೇರೆ ಬೇರೆ ಶಾಖೆಗಳಿಗೆ ಹಣ ರವಾನಿಸುತಿರುವುದಾಗಿ ಮೌಖಿಕವಾಗಿ ಮಾಹಿತಿ ನೀಡಿರುತ್ತಾರೆ,ಸದರಿ ಸಮಿತಿಯು ಈ ಬಗ್ಗೆ ಪರಿಶೀಲಿಸಿ ಕ್ರಮ .ನಿಗದಿತ ನಮೂನೆಯಲ್ಲಿ ದಾಖಲೆಗಳು ಇಲ್ಲದೆ ಇರುವುದಕ್ಕೆ ಮತ್ತು ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಸಾಗಾಣಿಕೆಗೆ ಬಳಸುವ ಸಂಶಯ ಕಂಡು ಬಂದಿರುವುದರಿಂದ ಪ್ರಸ್ತುತ ಮುಟ್ಟುಗೋಲು ಕ್ರಮ ಕೈಕೊಳ್ಳಲಾಗಿದೆ,ಚುನಾವಣಾಧಿಕಾರಿಗಳು ದಾಖಲೆ ಪತ್ರ ಪರಿಶೀಲನೆ ಮಾಡಿದ್ದಾರೆ.

Related News

spot_img

Revenue Alerts

spot_img

News

spot_img