21.1 C
Bengaluru
Monday, December 23, 2024

ರಿಲಯನ್ಸ್ ತೆಕ್ಕೆಗೆ ಮೆಟ್ರೋ ಕ್ಯಾಶ್ & ಕ್ಯಾರಿ 2850 ಕೋಟಿ ಕೊಟ್ಟು ಮೆಟ್ರೋ ಖರೀದಿ!

ಮುಂಬೈ (ಡಿ.23): ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ ‘ಮೆಟ್ರೋ ಕ್ಯಾಶ್ ಆಂಡ್‌ ಕ್ಯಾರಿ ಇಂಡಿಯಾ ಪ್ರೈವೇಟ್ ಲಿ.’ನ ಶೇ. 100ರಷ್ಟು ಷೇರನ್ನು ಖರೀದಿಸಲು 2,850 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ.ಜರ್ಮನಿಯ ಚಿಲ್ಲರೆ ವ್ಯಾಪಾರಿ ಕಂಪನಿಯಾದ ಮೆಟ್ರೋ ಕ್ಯಾಶ್‌ ಆಂಡ್‌ ಕ್ಯಾರಿ (Metro Cash And Carry) ಇಂಡಿಯಾವನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ರಿಲಯನ್ಸ್​​ ಯಶಸ್ವಿಯಾಗಿದೆ.

ಈ ಮೂಲಕ ಮೆಟ್ರೋದ 31 ಬಿ2ಬಿ ಮಳಿಗೆಗಳು ರಿಲಯನ್ಸ್‌ ಪಾಲಾಗಲಿವೆ.ಈ ಸ್ವಾಧೀನದ ಮೂಲಕ ಪ್ರಮುಖ ನಗರಗಳ ಪ್ರಮುಖ ಸ್ಥಳಗಳಲ್ಲಿರುವ ಮೆಟ್ರೋದ ಬೃಹತ್‌ ಮಳಿಗೆಗಳ ನೆಟ್‌ವರ್ಕ್‌ ರಿಲಯನ್ಸ್‌ ಪಾಲಾಗಲಿದೆ. ಜತೆಗೆ ನೋಂದಾಯಿತ ಕಿರಾಣಿ ಅಂಗಡಿಗಳು ಮತ್ತು ಸಗಟು ಗ್ರಾಹಕರ ದೊಡ್ಡ ಜಾಲ, ಬಲವಾದ ಪೂರೈಕೆ ನೆಟ್‌ವರ್ಕ್ ಕೂಡ ರಿಲಯನ್ಸ್‌ಗೆ ದೊರೆಯಲಿದೆ.

 

34 ದೇಶಗಳಲ್ಲಿ ಮೆಟ್ರೋ ಕಾರ್ಯವಹಿವಾಟು ಹೊಂದಿದ್ದು, METRO AG ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದು 2003 ರಲ್ಲಿ. ಕಿರಣಿ ಅಂಗಡಿಗಳು, ಹೋಟೆಲ್ ಗಳು, ರೆಸ್ಟೋರೆಂಟ್ ಗಳು ಹಾಗೂ ಕೇಟರರ್ಸ್, ಖಾಸಗಿ ಕಂಪನಿಗಳು ಹಾಗೂ ಕೆಲವು ಸಂಸ್ಥೆಗಳು ಮೆಟ್ರೋ ಕ್ಯಾಶ್ ಹಾಗೂ ಕ್ಯಾರಿಯ ಗ್ರಾಹಕರಾಗಿದ್ದಾರೆ.ಮೆಟ್ರೋ ಕ್ಯಾಶ್ & ಕ್ಯಾರಿ ಬೆಂಗಳೂರಿನಲ್ಲಿ 6, ಹೈದರಾಬಾದ್ ನಲ್ಲಿ 4, ಮುಂಬೈ ಮತ್ತು ನವದೆಹಲಿಯಲ್ಲಿ ತಲಾ 2 ಮಳಿಗೆಗಳನ್ನು ಹೊಂದಿದೆ. ಇನ್ನು ಕೋಲ್ಕತ್ತ, ಜೈಪುರ, ಜಲಂಧರ, ಅಮೃತಸರ, ಅಹಮದಾಬಾದ್, ಸೂರತ್, ಇಂದೋರ್, ಲಖನೌ, ಮೀರತ್, ನಾಸಿಕ್, ಗಾಜಿಯಾಬಾದ್, ತುಮಕೂರು, ವಿಜಯವಾಡ, ವಿಶಾಖಪಟ್ಟಣಂ, ಗುಂಟೂರು, ಹುಬ್ಬಳ್ಳಿಯಲ್ಲಿ ತಲಾ ಒಂದು ಕೇಂದ್ರ ಹೊಂದಿದೆ. ಮೆಟ್ರೋ ಕ್ಯಾಶ್ & ಕ್ಯಾರಿ 3,500 ಉದ್ಯೋಗಿಗಳನ್ನು ಹೊಂದಿದೆ.

 

Related News

spot_img

Revenue Alerts

spot_img

News

spot_img