21.4 C
Bengaluru
Saturday, July 27, 2024

ಯೂಟ್ಯೂಬ್‌ನಲ್ಲಿ ದಾಖಲೆ,ನರೇಂದ್ರ ಮೋದಿಗೆ 2 ಕೋಟಿ ಚಂದಾದಾರರು

#record #youtube #Narendra Modi #2 crore #subscribers
ನವದೆಹಲಿ;ಪ್ರಧಾನಿ ನರೇಂದ್ರ ಮೋದಿಯವರ(Narendramodi) ಯೂಟ್ಯೂಬ್(Youtube) ಚಾನೆಲ್ ದೊಡ್ಡ ದಾಖಲೆಯನ್ನೇ ನಿರ್ಮಿಸಿದೆ. ಪಿಎಂ ಯೂಟ್ಯೂಬ್ ಚಾನೆಲ್(Youtube chanel) ಮಂಗಳವಾರ 2 ಕೋಟಿ ಚಂದಾದಾರಿಕೆಯನ್ನು ದಾಟಿ ಇತಿಹಾಸ ಸೃಷ್ಟಿಸಿದೆ. 2022ರ ಫೆಬ್ರವರಿಯಲ್ಲಿ ಮೋದಿ ಯೂಟ್ಯೂಬ್ ಚಾನೆಲ್ ಒಂದು ಕೋಟಿ ಚಂದಾದಾರಿಕೆ ಪಡೆದಿತ್ತು. ಇದೀಗ ಒಂದೇ ವರ್ಷದಲ್ಲಿ 10 ಮಿಲಿಯನ್ ಚಂದಾದಾರರನ್ನು(subscribers) ಪಡೆಯುವ ಮೂಲಕ 2 ಕೋಟಿ ತಲುಪಿದೆ. ಪ್ರಧಾನಿ ಮೋದಿ ಖಾತೆಯಿಂದ ಇಲ್ಲಿಯವರೆಗೆ ಒಟ್ಟು 23 ಸಾವಿರ ವಿಡಿಯೋಗಳು(Videos) ಅಪ್ಲೋಡ್‌ ಆಗಿವೆ. 2023ರ ಡಿಸೆಂಬರ್‌ ತಿಂಗಳಿನಲ್ಲೇ 2.24 ಶತಕೋಟಿ ವೀಕ್ಷಣೆ ಕಂಡಿವೆ.ಟ್ವಿಟ್ಟರ್‌ನಲ್ಲಿ(Twitter) ಮೋದಿ ಅವರನ್ನು 9.4 ಕೋಟಿ ಮಂದಿ ಫಾಲೋ ಮಾಡಿದ್ದರೆ, ಫೇಸ್‌ಬುಕ್‌ನಲ್ಲಿ ಮೋದಿ ಅವರ ಪೇಜನ್ನು 4.8 ಕೋಟಿ ಮಂದಿ ಲೈಕ್‌ ಮಾಡಿದ್ದಾರೆ. ಇನ್‌ಸ್ಟಾದಲ್ಲಿ ಮೋದಿ ಅವರನ್ನು 8.2 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ. ಮೋದಿ ಅವರನ್ನು ವಾಟ್ಸಪ್‌ನಲ್ಲಿ 12 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ.ಮೋದಿಯವರು ಇಷ್ಟು ಅಗಾಧ ಸಂಖ್ಯೆ ಯುಟ್ಯೂಬ್ ಸಬ್ ಸ್ಕ್ರೈಬರ್ ಗಳನ್ನು ಹೊಂದಿದ ವಿಶ್ವದ ನಂ. 1 ನಾಯಕರಾಗಿ ಹೊರಹೊಮ್ಮಿದ್ದಾರೆ.ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಅನೇಕ ಜಾಗತಿಕ ನಾಯಕರನ್ನು ಮೋದಿ ಹಿಂದಿಕ್ಕಿದ್ದಾರೆ ಎಂದು ಮೂಲಗಳು ತಿಳಿಸಿವೆ

Related News

spot_img

Revenue Alerts

spot_img

News

spot_img