21.1 C
Bengaluru
Monday, December 23, 2024

ಹೂಡಿಕೆ ಮಾಡಲು ರಿಯಲ್‌ ಎಸ್ಟೇಟ್‌ ಕ್ಷೇತ್ರವೇ ಬೆಸ್ಟ್

ಬೆಂಗಳೂರು, ಏ. 03 : ಹೂಡಿಕೆ ಮಾಡುವುದಕ್ಕೆ ಬಹಳಷ್ಟು ದಾರಿಗಳಿವೆ. ಸ್ಟಾಕ್‌ ಮಾರ್ಕೆಟ್‌ ಗಳಲ್ಲಿ, ಗೋಲ್ಡ್‌ ಬಾಂಡ್‌ ಸೇರಿದಂತೆ ಹಲವು ರೀತಿಯಲ್ಲಿ ಹೂಡಿಕೆ ಮಾಡಬಹದು. ಲಾಭದಾಯಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದರೆ, ಲಾಭ ಸಿಗುವುದು. ಚಿನ್ನ, ಮ್ಯುಚುವಲ್‌ ಫಂಡ್‌, ಬಾಂಡ್‌ ಗಳು, ರಿಯಲ್‌ ಎಸ್ಟೇಟ್‌ ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಮಾಡಬಹುದು. ಇದರಲ್ಲಿ ಸದ್ಯ ಭಾರತದಲ್ಲಿ ಬೆಸ್ಟ್‌ ಹೂಡಿಕೆಯ ಕ್ಷೇತ್ರ ಎಂದರೆ, ಅದು ರಿಯಲ್‌ ಎಸ್ಟೇಟ್‌. ರಿಯಲ್‌ ಎಸ್ಟೇಟ್‌ ನಲ್ಲಿ ಹೂಡಿಕೆ ಮಾಡಿದರೆ, ಲಾಭವಂತೂ ಗ್ಯಾರೆಂಟಿ.

 

ಕಳೆದ 15 ವರ್ಷಗಳಿಂದ ಭಾರತದಲ್ಲಿ ರಿಯಲ್‌ ಎಸ್ಟೇಟ್‌ ಬಹುವೇಗವಾಗಿ ಬೆಳೆಯುತ್ತಿದೆ. ಕೋವಿಡ್‌ ಬಂದಾಗಿನಿಂದಲೂ ರಿಯಲ್‌ ಎಸ್ಟೇಟ್‌ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಕೋವಿಡ್‌ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳು ಮಕಾಡೆ ಮಲಗಿದ್ದವು. ಈ ವೇಳೆ, ಭಾರತದ ರಿಯಲ್‌ ಎಸ್ಟೇಟ್‌ ಕ್ಷೇತ್ರವು ಕೂಡ ಮಕಾಡೆ ಮಲಗಿತ್ತು. ಆದರೆ, ಕೋವಿಡ್‌ ಮುಗಿದ ಕೂಡಲೇ ನಿಧಾನವಾಗಿ ಮತ್ತೆ ಮೇಲೇರುತ್ತಾ ಬಂದಿದೆ. ಈ ಸಂದರ್ಭದಲ್ಲಿ ರಿಯಲ್‌ ಎಸ್ಟೇಟ್‌ ಬೆಳೆಯುತ್ತಿದ್ದು, ಈ ವೇಳೆ, ಹೂಡಿಕೆ ಮಾಡುವುದು ಲಾಭವನ್ನು ತಂದುಕೊಡುತ್ತದೆ.

ಕೋವಿಡ್‌ ಸಂದರ್ಭದಲ್ಲಿ ಎಲ್ಲವೂ ಮಕಾಡೆ ಮಲಗಿದಾಗ ಎಲ್ಲರೂ ಯಾವುದರಲ್ಲಿ ಹೂಡಿಕೆ ಮಾಡುವುದು ಎಂದು ಯೋಚಿಸಿದಾಗ ಎಲ್ಲರಿಗೂ ಕಂಡಿದ್ದು ರಿಯಲ್‌ ಎಸ್ಟೇಟ್.‌ ರಿಯಲ್‌ ಎಸ್ಟೇಟ್‌ ನಲ್ಲಿ ಹೂಡಿಕೆ ಮಾಡಿದರೆ, ಯಾವತ್ತಿಗಾದರೂ ಲಾಭವೇ ಎಂದು ತಿಳಿದವರೆಲ್ಲಾ ಈಗ ರಿಯಲ್‌ ಎಸ್ಟೇಟ್‌ ನಲ್ಲಿ ಹೂಡಿಕೆ ಮಾಡಲು ಎಲ್ಲರೂ ಮುಂದಾಗಿದ್ದಾರೆ. ಭಾರತದ ರಿಯಲ್ ಎಸ್ಟೇಟ್ ವಲಯವು 2021 ರ ವೇಳೆಗೆ $ 200 ಶತಕೋಟಿ ಮಾರುಕಟ್ಟೆ ದಾಖಲೆ ನಿರ್ಮಿಸಲಾಗಿದೆ. ಇನ್ನು 2030 ರ ವೇಳೆಗೆ $ 1 ಟ್ರಿಲಿಯನ್ ಮಾರ್ಕ್ ಅನ್ನು ತಲುಪುವ ಸಾಧ್ಯತೆ ಇದೆ.

ಇನ್ನು ಭಾರತದ ಜಿಡಿಪಿಯ 13% ಕೊಡುಗೆ ರಿಯಲ್‌ ಎಸ್ಟೇಟ್ ಕ್ಷೇತ್ರದಿಂದಲೇ ಆಗಮಿಸಿದೆ.‌ ರಿಯಲ್‌ ಎಸ್ಟೇಟ್ ವಲಯ 2017-2021 ರ ನಡುವೆ ಒಟ್ಟು $10.3 ಬಿಲಿಯನ್ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಿದೆ. ಈ ಕ್ಷೇತ್ರ ಭಾರತದಲ್ಲಿ ಎರಡನೇ ಅತಿ ದೊಡ್ಡ ಉದ್ಯೋಗದಾತ ಎಂಬ ಬಿರುದನ್ನು ಪಡೆದುಕೊಂಡಿದೆ. ಕೃಷಿಯ ಬಳಿಕ ಜಿಡಿಪಿ ಬೆಳವಣಿಗೆಗೆ ಕೊಡುಗೆ ನೀಡುವ ಜವಬ್ದಾರಿಯನ್ನು ರಿಯಲ್ ಎಸ್ಟೇಟ್ ಕ್ಷೇತ್ರ ಹೊಂದಿದೆ ಎಂಬುದು ವರದಿಯ ಮೂಲಕ ತಿಳಿದು ಬಂದಿದೆ.

ಇನ್ನು ರಿಯಲ್‌ ಎಸ್ಟೇಟ್‌ ಕ್ರೇತ್ರವನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಖರೀದಿದಾರರಿಗೆ ತೆರಿಗೆ ವಿನಾಯಿತಿಯನ್ನು ನೀಡುತ್ತಿದೆ. ರೇರಾ ಮತ್ತು ಜಿಎಸ್‌ಟಿಯ ಅನುಷ್ಠಾನ ಇದೆಲ್ಲವೂ ಈ ಕ್ಷೇತ್ರವನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ದಿದೆ. ಈ ಮೂಲಕ ಮನೆ ಖರೀದಿದಾರರಲ್ಲಿ ವಿಶ್ವಾಸವನ್ನು ಮೂಡಿಸಿದೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ಲಾಭವನ್ನು ತಂದುಕೊಡುತ್ತಿದೆ. ಭಾರತದ ಹಲವು ನಗರಗಳಲ್ಲಿ ಉತ್ತಮ ಪ್ರಗತಿಯನ್ನು ಕಂಡಿದೆ. ರಿಯಲ್‌ ಎಸ್ಟೇಟ್‌ ನಲ್ಲಿ ಹೂಡಿಕೆ ಮಾಡಲು ಸಾಲ ಸಿಗುತ್ತದೆ. ಇದಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ದಿನ ಕಳೆದಂತೆ ಬ್ಯಾಂಕ್‌ ಗಳಲ್ಲಿ ರಿಯಲ್‌ ಎಸ್ಟೇಟ್‌ ಮೇಲಿನ ಹೂಡಿಕೆಗೆ ಬಡ್ಡಿದರವನ್ನು ಕೂಡ ಹೆಚ್ಚಿಸುತ್ತಿದೆ.

Related News

spot_img

Revenue Alerts

spot_img

News

spot_img