22.7 C
Bengaluru
Monday, December 23, 2024

ರಿಯಲ್‌ ಎಸ್ಟೇಟ್‌: ಪ್ರಾರಂಭಿಕ ದೃಢೀಕರಣ ಪತ್ರ (ಸಿಸಿ) ಯಾಕೆ ಮುಖ್ಯ?

ನೀವು ಮನೆ ಕಟ್ಟಬೇಕೆಂದರೆ ಅಥವಾ ಲೇಔಟ್‌ಗಳ ನಿರ್ಮಾಣವನ್ನು ನೀವು ಪ್ಲಾನ್ ಪ್ರಕಾರ ಕಟ್ಟುತ್ತೀರ ಎಂದಾದರೆ ಅದಕ್ಕೆ ಪ್ರಾರಂಭಿಕ ದೃಢೀಕರಣ ಪತ್ರ (ಸಿಸಿ-commencement Certificate ) ಪಡೆಯಲೇಬೇಕು. ನಿಮ್ಮ ನಿರ್ಮಾಣ ಯೋಜನೆ ಆರಂಭಕ್ಕೂ ಮೊದಲು ಸ್ಥಳೀಯ ನಗರ ಸಂಸ್ಥೆಗಳಿಂದ ಪಡೆಯುವ ಕಾನೂನಾತ್ಮಕ ಅನುಮತಿ ಪತ್ರವೇ ಒಸಿ-ಸಿಸಿ. ಈ ಪ್ರಮಾಣಪತ್ರವನ್ನು ಯೋಜನೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಹಾಗೂ ಕಟ್ಟಡದ ಯೋಜನೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳನ್ನು ಡೆವಲಪರ್‌ಗಳು ಪೂರೈಸಿದ ನಂತರ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಸಾಮಾನ್ಯವಾಗಿ ನೀಡಲಾಗುತ್ತದೆ.

ಈ ಪ್ರಮಾಣಪತ್ರವು ಯೋಜನೆ ಕುರಿತಾದ ಕಾನೂನು ಸಮ್ಮತಿಯನ್ನು ಸಾಬೀತುಪಡಿಸುವ ದಾಖಲೆಯಾಗಿದ್ದು, ರಿಯಲ್‌ ಎಸ್ಟೇಟ್‌ನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಡೆವಲಪರ್‌ ಹಾಗೂ ಮನೆ ಖರೀದಿದಾರರಿಗೆ ಇಬ್ಬರಿಗೂ ಇದು ಅವಶ್ಯಕ ದಾಖಲೆಯಾಗಿದೆ.

ಸಿಸಿ ಪಡೆದುಕೊಳ್ಳುವುದು ಹೇಗೆ
ಹೊಸ ಕಟ್ಟಡ ಅಥವಾ ಯೋಜನೆ ನಿರ್ಮಾಣ ಕಾರ್ಯ ಆರಂಭವಾಗುವ ಮೊದಲು ಡೆವಲಪರ್‌ಗಳು ಕಡ್ಡಾಯವಾಗಿ ಸ್ಥಳೀಯ ಪಾಲಿಕೆಯಿಂದ ಆರಂಭಿಕ ಪ್ರಮಾಣಪತ್ರವನ್ನು ಪಡೆಯಬೇಕು. ಡೆವಲಪರ್‌ ಯೋಜನೆ ಕುರಿತಾದ ವಿವರಗಳನ್ನು ಸಲ್ಲಿಸಿದ ನಂತರ ಪಾಲಿಕೆಯು, ಸಿಸಿ ಒದಗಿಸಲು ಯೋಜನೆ ಯೋಗ್ಯವಾಗಿದೆಯೇ ಎಂದು ಹಲವಾರು ಪ್ರಾಥಮಿಕ ಪರಿಶೀಲನೆಗಳನ್ನು ನಡೆಸುತ್ತದೆ. ಈ ಸಮಯದಲ್ಲಿ ಡೆವಲಪರ್‌ ಹೊಸ ಯೋಜನೆಗೆ ಎಲ್ಲಾ ಇಲಾಖೆಗಳಿಂದ ಅಗತ್ಯ ನೋ ಅಬ್ಜೆಕ್ಷನ್‌ ಪ್ರಮಾಣಪತ್ರಗಳನ್ನು ನೀಡಬೇಕು. ಜಲಮಂಡಳಿ, ಅಗ್ನಿ ಶಾಮಕ ಮಂಡಳಿ, ವಿದ್ಯುತ್‌ ಮಂಡಳಿ ಸೇರಿದಂತೆ ಎಲ್ಲಾ ಸಂಬಂಧಿತ ಇಲಾಖೆಗಳಿಂದ ಯೋಜನೆಗೆ ಅನುಮತಿ ಪಡೆದಿರುವ ಸಾಕ್ಷಿಗಳನ್ನು ತೋರಿಸಬೇಕಾಗುತ್ತದೆ.

ಸಿಸಿ ಪಡೆಯಲು ಒದಗಿಸಬೇಕಾದ ದಾಖಲೆಗಳು
ಆಸ್ತಿ ಕುರಿತಾದ ದಾಖಲೆಗಳು, ತೆರಿಗೆ ರಶೀತಿಗಳು, ಫೋಟೊಗಳು, ವಿವಿಧ ಇಲಾಖೆಗಳಿಂದ ಪಡೆದ ನೋ ಅಬ್ಜೆಕ್ಷನ್‌ ದಾಖಲೆಗಳು..

ಪ್ರಮಾಣ ಪತ್ರ ನೀಡುವುದು ಯಾವಾಗ?
ಸಿಸಿಯನ್ನು ಎರಡು ಹಂತಗಳಲ್ಲಿ ನೀಡಲಾಗುತ್ತದೆ. ನೆಲಮಟ್ಟದ ಮೇಲೆ ಗೋಡೆಯ ಭಾಗ ಕಟ್ಟುತ್ತಿರುವ ಸಂದರ್ಭ ಹಾಗೂ ಕಟ್ಟಡದ ಮೇಲಿನ ಭಾಗದ ನಿರ್ಮಾಣದ ಸಮಯದಲ್ಲಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ನಗರ ಯೋಜನೆ ಹಾಗೂ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ತಪಾಸಣೆ ನಡೆಸಿದ ನಂತರ ಅವರ ತೀರ್ಮಾನದ ಆಧಾರದಂತೆ ಡೆವಲಪರ್‌ಗಳು ಪ್ರಮಾಣಪತ್ರ ಪಡೆಯುತ್ತಾರೆ. ಹೊಸ ರೇರಾ ನಿರ್ದೇಶನದ ಪ್ರಕಾರ, ಮಾನ್ಯತೆ ಹೊಂದಿದ ಸಿಸಿಯು ರೇರಾ ಅನುಮೋದನೆ ಪಡೆಯಲು ಕಡ್ಡಾಯವಾದ ದಾಖಲೆಯಾಗಿದೆ.

ಮನೆ ಖರೀದಿದಾರರಿಗೆ ಸಿಸಿ?
ಡೆವಲಪರ್ ತನ್ನ ಪ್ರಾಜೆಕ್ಟ್‌ಗಾಗಿ ಆರಂಭಿಕ ಪ್ರಮಾಣಪತ್ರವನ್ನು ಪಡೆಯುವವರೆಗೆ, ಅದರ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲು ಅವನಿಗೆ ಅಧಿಕಾರವಿಲ್ಲ. ಆದ್ದರಿಂದ, ಡೆವಲಪರ್‌ಗೆ ಮನೆ ಖರೀದಿ ಮಾಡಲು ಬಯಸುವ ವ್ಯಕ್ತಿಗೆ ಮಾನ್ಯವಾದ ಆರಂಭಿಕ ಪ್ರಮಾಣಪತ್ರವನ್ನು ಒದಗಿಸಲು ಸಾಧ್ಯವಾಗದಿದ್ದರೆ, ಮನೆ ಖರೀದಿದಾರನು ಯೋಜನೆಯಲ್ಲಿ ಹೂಡಿಕೆ ಮಾಡಬಾರದು. ಒಂದು ವೇಳೆ ಡೆವಲಪರ್‌ ಯೋಜನೆಗಾಗಿ ಸಿಸಿ ಪಡೆದಿದ್ದರೆ ಅದರಲ್ಲಿ ಆಸ್ತಿಯನ್ನು ಖರೀದಿಸಲು ಬಯಸುವ ಮಹಡಿಯನ್ನು ಒಳಗೊಂಡಿದೆಯೇ ಎಂಬುದನ್ನು ಸಹ ಖರೀದಿದಾರ ಕೂಲಂಕಷವಾಗಿ ಪರಿಶೀಲಿಸಬೇಕು.

ಸ್ವಾಧೀನಾನುಭವ ಪ್ರಮಾಣಪತ್ರ(ಒಸಿ)ದಂತೆ ಸಿಸಿ ಕೂಡ ಮುಖ್ಯ. ಎಲ್ಲಾ ಕಾನೂನು ಪ್ರಕ್ರಿಯೆ ಹಾಗೂ ನಿರ್ಬಂಧಗಳನ್ನು ಪೂರೈಸಿದ ನಂತರ ಯೋಜನೆ ಆರಂಭಿಸಲಾಗಿದೆ ಎಂಬುದನ್ನು ಈ ಪ್ರಮಾಣಪತ್ರ ಸ್ಪಷ್ಟಪಡಿಸುತ್ತದೆ. ಹಾಗೇ ಭವಿಷ್ಯದಲ್ಲಿ ಸಂಭವನೀಯ ಕಾನೂನು ತೊಡಕುಗಳಿಂದ ಪಾರಾಗಲು ಸಿಸಿ ಅಗತ್ಯ.

Related News

spot_img

Revenue Alerts

spot_img

News

spot_img