27.3 C
Bengaluru
Monday, July 1, 2024

ಕೋರಮಂಗಲದಲ್ಲಿ ರಿಯಲ್ ಎಸ್ಟೇಟ್‌ ಬೂಮ್: ಹೂಡಿಕೆಗೆ 7 ಟಿಪ್ಸ್‌ಗಳು..

 

ಬೆಂಗಳೂರು ಇಂದು ವಾಸಿಸಲು ಯೋಗ್ಯವಾಗಿರುವ ದೇಶದ ಅತ್ಯುತ್ತಮ ನಗರದಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಇದನ್ನು ಇತ್ತೀಚೆಗೆ ಸರ್ಕಾರ ಬಿಡುಗಡೆ ಮಾಡಿರುವ ರಾಷ್ಟ್ರೀಯ ಮೌಲ್ಯಮಾಪನದಲ್ಲಿ ಜೀವನ ಸೂಚ್ಯಂಕವೇ ಹೇಳುತ್ತದೆ. ತ್ವರಿತಗತಿಯ ಅಭಿವೃದ್ಧಿ, ಹೆಚ್ಚಿನ ಬೇಡಿಕೆ ಮತ್ತು ಮೂಲಸೌಕರ್ಯ ಸುಧಾರಣೆಗಳು ನಗರದಲ್ಲಿ ರಿಯಲ್ ಎಸ್ಟೇಟ್ ಬೆಳವಣಿಗೆಯನ್ನು ಹೆಚ್ಚಿಸುವ ಪ್ರಮುಖ ಅಂಶಗಳಾಗಿವೆ.

ರಿಯಲ್ ಎಸ್ಟೇಟ್ ಬೆಲೆಗಳು, ಉದ್ಯೋಗದ ಬೆಳವಣಿಗೆ, ಜಿಡಿಪಿ, ಮೂಲಸೌಕರ್ಯ ಮತ್ತು ಜನಸಂಖ್ಯೆಯ ಬೆಳವಣಿಗೆಗೆ ನೇರವಾಗಿ ಅನುಪಾತದಲ್ಲಿರುತ್ತವೆ. ಜೊತೆಗೆ ಈ ಎಲ್ಲಾ ಅಂಶಗಳಲ್ಲಿ ಬೆಂಗಳೂರಿನ ದರಗಳು ಹೆಚ್ಚು. ದೇಶದ ಮತ್ತು ಪ್ರಪಂಚದ ಇತರ ಭಾಗಗಳಿಂದ ಬೆಂಗಳೂರು ನಗರಕ್ಕೆ ಗಮನಾರ್ಹ ಸಂಖ್ಯೆಯಲ್ಲಿ ಬರುತ್ತಲೇ ಇರುತ್ತಾರೆ. ಇದು ಇಲ್ಲಿನ ಶಿಕ್ಷಣ ಮತ್ತು ಉದ್ಯೋಗದಲ್ಲಿನ ಏರಿಕೆಗೆ ಕಾರಣವಾಗಿದೆ.

ನಗರವು ಟೆಕ್ ಪಾರ್ಕ್‌ಗಳು, ಟೌನ್‌ಶಿಪ್‌ಗಳು ಮತ್ತು ಉನ್ನತ ಮಟ್ಟದ ವಸತಿ ಸಮುದಾಯಗಳೊಂದಿಗೆ ವಿಕೇಂದ್ರೀಕೃತ ರೀತಿಯಲ್ಲಿ ಬೆಳೆದಿದೆ. ಈ ಅಭಿವೃದ್ಧಿಗೆ ಮುಖ್ಯವಾಗಿ ಸಾಫ್ಟ್‌ವೇರ್ ಕಂಪನಿಗಳು ಕೂಡ ಕಾರಣ. ಇವುಗಳಿಂದಾಗಿ ಬೆಂಗಳೂರನ್ನು ಭಾರತದ ಐಟಿ ರಾಜಧಾನಿ ಎನ್ನಲಾಗುತ್ತದೆ.

ಈ ಹೈಟೆಕ್-ಸಿಟಿಯಲ್ಲಿ, ಕೋರಮಂಗಲವು ಪ್ರಮುಖ ಐಟಿ ಕಾರ್ಪೊರೇಷನ್‌ಗಳಿಗೆ ಸಮೀಪವಿರುವ ಕಾರಣದಿಂದ ಪ್ರಾಮುಖ್ಯತೆ ಪಡೆದ ಪ್ರದೇಶವಾಗಿದೆ. ಅನೇಕ ಸ್ಟಾರ್ಟ್ಅಪ್‌ಗಳು ಇಲ್ಲಿರುವ ಕಾರಣ ಕೋರಮಂಗಲವನ್ನು ಬೆಂಗಳೂರಿನ ಸ್ಟಾರ್ಟ್ಅಪ್ ಹಬ್ ಎಂದು ಕರೆಯಲಾಗುತ್ತದೆ. ಇದು ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ (CBD) ಆಗಿ ರೂಪಾಂತರಗೊಂಡಿದೆ. ಜೊತೆಗೆ ವಸತಿ ಮತ್ತು ವಾಣಿಜ್ಯ ಹೂಡಿಕೆದಾರರಿಗೆ ಸಮಾನವಾದ ಬೇಡಿಕೆಯ ತಾಣವಾಗಿದೆ.

ನೀವು ಕೋರಮಂಗಲದಲ್ಲಿ ಮನೆಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಆ ಪ್ರದೇಶ ನಿಮಗ್ಯಾಕೆ ಮುಖ್ಯವಾಗಬೇಕು ಎಂಬ ಕೆಲವು ಅಂಶಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.

1. ಆಕರ್ಷಕ ಮತ್ತು ಆಯಕಟ್ಟಿನ ಸ್ಥಳ:
ಕೋರಮಂಗಲವು ಎಲೆಕ್ಟ್ರಾನಿಕ್ ಸಿಟಿ ಮತ್ತು ಎಚ್‌ಎಸ್‌ಆರ್ ಲೇಔಟ್‌ನ ಪಕ್ಕದಲ್ಲಿ ಆಯಕಟ್ಟಿನ ಸ್ಥಳವಾಗಿದೆ. ಇವೆರಡು ಬೆಂಗಳೂರಿನ ಐಟಿ ಬೂಮ್‌ನ ಹೃದಯಭಾಗದಲ್ಲಿರುವ ಪ್ರದೇಶಗಳು. ಈ ಪ್ರಮುಖ ಪ್ರದೇಶದಲ್ಲಿ ಮನೆಯಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಈ ಸಾಮೀಪ್ಯದಿಂದ ಹಲವಾರು ಪ್ರಯೋಜನಗಳಿವೆ. ವಿಶ್ವದ ಕೆಲವು ದೊಡ್ಡ ಸಂಸ್ಥೆಗಳು ಇಲ್ಲಿ ತಮ್ಮ ಕಚೇರಿಗಳನ್ನು ಸ್ಥಾಪಿಸುವ ಮೂಲಕ ಈ ಪ್ರದೇಶಗಳಲ್ಲಿ ಹೂಡಿಕೆ ಮಾಡಿವೆ.

ಹೂಡಿಕೆಗಳು ಹೆಚ್ಚಾಗಿರುವ ಕಾರಣ ಮನೆ ಖರೀದಿದಾರರಿಗೆ ಹೆಚ್ಚಿನ ಬಾಡಿಗೆ ಆದಾಯವನ್ನು ಖಾತರಿಪಡಿಸಬಹುದು. ಕೋರಮಂಗಲವು ವಾಣಿಜ್ಯ ವಲಯಗಳಿಗೆ ಸಮೀಪದಲ್ಲಿದ್ದು ವಸತಿ ಪ್ರದೇಶದಲ್ಲಿ ವಾಸಿಸುವವರಿಗೆ ಎಲ್ಲಾ ಅನುಕೂಲಗಳನ್ನು ಸಹ ನೀಡುತ್ತದೆ. ಇದರರ್ಥ ಮನೆ ಖರೀದಿದಾರರು ಎರಡೂ ಪ್ರಪಂಚದ ಅನುಕೂಲತೆಗಳನ್ನು ಆನಂದಿಸಬಹುದು.

2. ಪ್ರಮುಖ ಪ್ರದೇಶಗಳಿಗೆ ಅತ್ಯುತ್ತಮ ಸಂಪರ್ಕ ಕಲ್ಪಿಸುತ್ತದೆ
ಕೋರಮಂಗಲದಲ್ಲಿ ಹೂಡಿಕೆ ಮಾಡುವವರಿಗೆ ಮತ್ತೊಂದು ಪ್ರಮುಖ ಅನುಕೂಲವೆಂದರೆ ಅದು ಬೆಂಗಳೂರಿನ ಪ್ರಮುಖ ಸ್ಥಳಗಳಿಗೆ ಸುಲಭವಾದ ಸಂಪರ್ಕವನ್ನು ನೀಡುತ್ತದೆ. ಬೆಂಗಳೂರಿನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವ ಕಷ್ಟ ಅನುಭವಿಸಿದವರಿಗೆ ಗೊತ್ತು. ಹೀಗಿರುವಾಗ ಸಿಲ್ಕ್‌ಬೋರ್ಡ್‌ನಲ್ಲಿ ಮುಂದೆ ಬರುತ್ತಿರುವ ಮೆಟ್ರೋ ರೈಲು ಮಾರ್ಗವು ಕೋರಮಂಗಲವನ್ನು ಇಡೀ ದಕ್ಷಿಣ ಬೆಂಗಳೂರಿಗೆ ಜಯನಗರ ಮತ್ತು ಜೆಪಿ ನಗರಕ್ಕೆ ಹತ್ತಿರವಾಗಿಸುತ್ತದೆ.

ಸಮೀಪದ ಹೊಸೂರು ರಸ್ತೆಯು ಕೋರಮಂಗಲವನ್ನು ಮಡಿವಾಳ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಸರ್ಜಾಪುರ ರಸ್ತೆಯು ಕೋರಮಂಗಲವನ್ನು ಬೆಂಗಳೂರಿನ ಜೀವನಾಡಿ ಹೊರ ವರ್ತುಲ ರಸ್ತೆಗೆ (ಔಟರ್ ರಿಂಗ್ ರೋಡ್) ಸಂಪರ್ಕಿಸುತ್ತದೆ. 80 ಅಡಿ ರಸ್ತೆಯ ಮೂಲಕ ಎಂಜಿ ರಸ್ತೆಯಂತಹ ಪ್ರಮುಖ ವಾಣಿಜ್ಯ ಪ್ರದೇಶಗಳಿಗೆ ಈ ಸ್ಥಳವು ಉತ್ತಮ ಸಂಪರ್ಕ ಕಲ್ಪಿಸುತ್ತದೆ.

3. ಹಲವಾರು ಉದ್ಯೋಗಾವಕಾಶಗಳು:
ಕೋರಮಂಗಲ ಬೆಂಗಳೂರಿನ ಅತ್ಯಂತ ಅತ್ಯಾಕರ್ಷಕ ವಾಣಿಜ್ಯ ವಲಯಗಳಲ್ಲಿ ಒಂದಾಗಿದೆ. ಇಲ್ಲಿ ಆರಂಭವಾಗುವ ಹಲವಾರು ಕಚೇರಿಗಳು ಮತ್ತು ಸಹ-ಕೆಲಸದ ಸ್ಥಳಗಳಿಂದಾಗಿ ಇದು ನಗರದ ಸ್ಟಾರ್ಟ್ಅಪ್ ಕೇಂದ್ರವಾಗಿ ಖ್ಯಾತಿಯನ್ನು ಗಳಿಸಿದೆ. ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡುವ ನಿವಾಸಿಗಳು ಕೋರಮಂಗಲದಿಂದ ತಮ್ಮ ಕೆಲಸದ ಸ್ಥಳಗಳಿಗೆ ಸುಲಭವಾಗಿ ಪ್ರಯಾಣಿಸಬಹುದು. ಕೋರಮಂಗಲವನ್ನು ಇತರ ಪ್ರದೇಶಗಳಿಂದ ಪ್ರತ್ಯೇಕಿಸುವುದು ಯಾವುದೆಂದರೆ ಅದು ಯುವ ವಾಣಿಜ್ಯೋದ್ಯಮಿಗಳ ಸಂಖ್ಯೆಯಾಗಿದೆ.

4. ಹೆಚ್ಚು ಅಭಿವೃದ್ಧಿ ಹೊಂದಿದ ಮೂಲಸೌಕರ್ಯಗಳು:
ಕೋರಮಂಗಲವು ಮೂಲಸೌಕರ್ಯಗಳ ವಿಷಯದಲ್ಲಿ ಹೆಚ್ಚು ಮುಂದುವರಿದಿರುವುದರಿಂದ ಬೆಂಗಳೂರಿನ ಹಲವು ಪ್ರದೇಶಗಳಿಗಿಂತ ಹೆಚ್ಚು ಪ್ರಯೋಜನವನ್ನು ಹೊಂದಿದೆ. ನೆರೆಹೊರೆಯು ನಿವಾಸಿಗಳಿಗೆ ವಿಶಾಲವಾದ ಸೌಕರ್ಯಗಳು ಮತ್ತು ಅನುಕೂಲಗಳನ್ನು ಒದಗಿಸುತ್ತದೆ.
ಇದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು, ವಿಶ್ವ ದರ್ಜೆಯ ಆಸ್ಪತ್ರೆಗಳು, ರೆಸ್ಟೋರೆಂಟ್‌ಗಳು, ಪಬ್‌ಗಳು, ಮಾಲ್‌ಗಳು ಮತ್ತು ಹೆಚ್ಚಿನ ವಾಣಿಜ್ಯ ಮಳಿಗೆಗಳಿಂದ ಆವೃತವಾದ ಪ್ರದೇಶವಾಗಿದೆ.

5. ಉತ್ತಮವಾದ ವಸತಿ ಯೋಜನೆಗಳು:
ಕೋರಮಂಗಲ ಮತ್ತು ಸುತ್ತಮುತ್ತಲಿನ ಹೂಡಿಕೆಗಳು ಹರಿದುಬರುವುದರಿಂದ ಹಲವಾರು ಉನ್ನತ ಮಟ್ಟದ ವಸತಿ ಯೋಜನೆಗಳ ಅಭಿವೃದ್ಧಿಗೆ ಕಾರಣವಾಗಿದೆ. ಕ್ಲಬ್ ಹೌಸ್, ಜಾಗಿಂಗ್ ಟ್ರ್ಯಾಕ್, ಓಪನ್ ಗ್ರೀನ್ ಪ್ಲೇಸಸ್, ನಿವಾಸಿಗಳಿಗಾಗಿ ಈಜುಕೊಳ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುವ ಅಭಿವೃದ್ಧಿಯನ್ನು ಹೊಂದಿರುವ ಪ್ರದೇಶವಾಗಿದೆ. ಕೋರಮಂಗಲದಲ್ಲಿ, ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವ ಮನೆಯನ್ನು ನೀವು ಕಂಡುಕೊಳ್ಳುವುದು ಖಚಿತ. ನಿಮ್ಮ ಜೀವನದ ಅತ್ಯುತ್ತಮ ವರ್ಷಗಳನ್ನು ನೀವು ವೇಗವಾಗಿ ಬೆಳೆಯುತ್ತಿರುವ ಸ್ಥಳದಲ್ಲಿ ಜೀವಿಸುತ್ತೀರಿ ಎಂಬುದು ಖಚಿತ.

6. ಆಕರ್ಷಕ ಬೆಲೆ:
ಕ್ಷಿಪ್ರ ಅಭಿವೃದ್ಧಿಯೊಂದಿಗೆ ಆಸ್ತಿ ಮೌಲ್ಯವು ವೇಗವಾಗಿ ಬೆಲೆಯನ್ನು ಪಡೆಯುತ್ತದೆ. ಪ್ರಮುಖ ವಾಣಿಜ್ಯ ಪ್ರದೇಶಗಳಿಗೆ ಸಮೀಪದಲ್ಲಿರುವುದರಿಂದ ಮತ್ತು ಇಲ್ಲಿ ಹೆಚ್ಚಿನ ಸಂಖ್ಯೆಯ ಕಚೇರಿಗಳನ್ನು ತೆರೆಯುವುದರಿಂದ, ಕೋರಮಂಗಲವು ಆಸ್ತಿ ಬೆಲೆಯಲ್ಲಿ ತೀವ್ರ ಏರಿಕೆಗೆ ಸಾಕ್ಷಿಯಾಗಿದೆ. ನೀವು ಪ್ರಾಥಮಿಕ ಹೂಡಿಕೆಯಾಗಿ ಮನೆಯನ್ನು ಖರೀದಿಸಲು ಬಯಸಿದರೆ ಈ ಪ್ರದೇಶವು ಪರಿಪೂರ್ಣ ಆಯ್ಕೆಯಾಗಿದೆ. ಕೆಲಸಕ್ಕಾಗಿ ಈ ಪ್ರದೇಶಕ್ಕೆ ತೆರಳುವ ಜನರ ಸಂಖ್ಯೆ ಹೆಚ್ಚಿರುವುದರಿಂದ ವಸತಿ ಆಯ್ಕೆಗಳ ಬೇಡಿಕೆಯಲ್ಲಿ ಹೆಚ್ಚಳವಾಗಿದೆ. ಬಾಡಿಗೆದಾರರನ್ನು ಹುಡುಕುವುದು ಮತ್ತು ಹೆಚ್ಚಿನ ಬಾಡಿಗೆ ಆದಾಯವನ್ನು ಗಳಿಸುವುದು ಇಲ್ಲಿ ಸುಲಭ.

7. ಹಚ್ಚ ಹಸಿರಿನ ಪ್ರದೇಶ
ಕೊನೆಯದಾಗಿ, ಕೋರಮಂಗಲವು ಮನೆ ಖರೀದಿದಾರರಿಗೆ ಸಾಟಿಯಿಲ್ಲದ ಗುಣಮಟ್ಟದ ಜೀವನವನ್ನು ನೀಡುತ್ತದೆ. ಇಂದು, ಕೋರಮಂಗಲವು ಪ್ರೀಮಿಯಂ ಅಪಾರ್ಟ್‌ಮೆಂಟ್ ಸಂಕೀರ್ಣಗಳು, ಬಂಗಲೆಗಳು ಮತ್ತು ಕಚೇರಿಗಳೊಂದಿಗೆ ಹಚ್ಚ ಹಸಿರಿನ ಮರಗಳಿಂದ ಕೂಡಿದ ರಸ್ತೆ ಮಾರ್ಗಗಳು ಮತ್ತು ಸುಸಜ್ಜಿತವಾದ ಮಾರ್ಗಗಳನ್ನು ಹೊಂದಿದೆ.

ಪ್ರದೇಶದಲ್ಲಿನ ಬೆಲೆ ಪ್ರವೃತ್ತಿಗಳು ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಪರಿಗಣಿಸಿ, ಪ್ರದೇಶವು ಉತ್ತಮ ಹೂಡಿಕೆ ಎಂದು ಸಾಬೀತುಪಡಿಸುತ್ತದೆ. ಹೆಚ್ಚಿನ ಸ್ಟಾರ್ಟ್‌ಅಪ್‌ಗಳು, ರಿಟೇಲ್ ಹಬ್‌ಗಳು ಮತ್ತು ಕಂಪನಿಗಳು ಇಲ್ಲಿ ಅಂಗಡಿಗಳನ್ನು ಸ್ಥಾಪಿಸುವುದರಿಂದ ಇಲ್ಲಿನ ಮನೆಗಳಿಗೆ ಹೆಚ್ಚು ಬೇಡಿಕೆಯಿದೆ. ಈ ಪ್ರದೇಶವು ಸುತ್ತಮುತ್ತಲಿನ ಪ್ರಮುಖ ಕೇಂದ್ರಗಳಿಗೆ ಸಂಪರ್ಕ ಹೊಂದಿರುವ ಕಾರಣ ಜನ ಇಲ್ಲಿ ಮನೆ ಖರೀದಿಸಲು ಸರದಿಯಲ್ಲಿ ನಿಲ್ಲುತ್ತಾರೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಕೋರಮಂಗಲದಲ್ಲಿ ವಾಸಿಸುವ ಮೂಲಕ ನೀವು ಅತ್ಯುತ್ತಮ ಜೀವನ ಅನುಭವಿಸಬಹುದು.

Related News

spot_img

Revenue Alerts

spot_img

News

spot_img