22.9 C
Bengaluru
Thursday, January 23, 2025

ರಿಯಲ್ ಎಸ್ಟೇಟ್: ರಾಷ್ಟ್ರೀಯ ರಾಜಧಾನಿ ದೆಹಲಿ ಮೆಲೆಯೇ ಎಲ್ಲರ ಕಣ್ಣು!

ಕೋವಿಡ್‌ನಂಥ ಸಾಂಕ್ರಾಮಿಕ ರೋಗದ ಹೊಡೆತಕ್ಕೆ ಸಿಕ್ಕು ತತ್ತರಿಸಿದ್ದ ಭಾರತ ಇದೀಗ ಆರ್ಥಿಕ ಸಂಕೋಲೆಯಿಂದ ಹೊರಬಂದು ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಹಾಗೆಯೇ ರಿಯಲ್‌ ಎಸ್ಟೇಟ್‌ ಕ್ಷೇತ್ರವೂ ತ್ವರಿತ ಗತಿಯಲ್ಲಿ ಮುನ್ನಡೆಯುತ್ತಿದೆ ಎಂದು ವಿಶ್ಲೇಷಿಸಿದ್ದಾರೆ ʼಗ್ರಾಂಥಂ ಸಂಸ್ಥೆʼಯ ಸೇಲ್ಸ್‌ ಮುಖ್ಯಸ್ಥರಾದ ಸುಮಿತ್‌ ಅಗರ್‌ವಾಲ್‌.

ಕಚೇರಿ ಸ್ಥಳಗಳು ಸೇರಿದಂತೆ ಇನ್ನಿತರೆ ವಾಣಿಜ್ಯ ಉದ್ದೇಶದ ಖಾಸಗಿ ಆಸ್ತಿಗಳ ಮೇಲಿನ ಷೇರುಗಳ ಹೂಡಿಕೆಯಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ನವದೆಹಲಿಯೇ (NCR) ಹೂಡಿಕೆದಾರರ ಮೊದಲನೇ ಆಯ್ಕೆಯಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. ಇದರಿಂದ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯ ದೊರೆತಂತಾಗಿದೆ.

ಅನಾರಾಕ್‌ ಮಾಡಿರುವ ಅಧ್ಯಯನದ ಪ್ರಕಾರ, ದೆಹಲಿ NCR ಮೇಲಿನ ಹೂಡಿಕೆಯು ಪ್ರಸ್ತುತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಶೇ 61ರಷ್ಟು ಏರಿಕೆ ಕಂಡಿದೆ. ಇನ್ನುಳಿದ ನಗರಗಳಾದ ಚೆನ್ನೈ, ಮುಂಬೈ, ಹೈದರಾಬಾದ್‌, ಬೆಂಗಳೂರು ಹಾಗೂ ಪುಣೆಗೆ ಹೋಲಿಸಿದರೆ ಶೇ 50ಕ್ಕಿಂತ ಹೆಚ್ಚಿನ ಪಾಲನ್ನು NCR ಗಳಿಸಿಕೊಂಡಿದೆ. ಈ ಐದು ನಗರ ಪ್ರದೇಶಗಳ ಒಟ್ಟೂ ಹೂಡಿಕೆಯ ಮೌಲ್ಯ 555 ಮಿಲಿಯನ್‌ ಡಾಲರ್‌ನಷ್ಟು ಇದ್ದರೆ NCR ಒಂದರಲ್ಲೇ ಹೂಡಿಕೆಯ ಮೌಲ್ಯ 992 ಮಿಲಿಯನ್‌ ಡಾಲರ್‌ನಷ್ಟು ಆಗಿರುವುದು ಗಮನಾರ್ಹ.

NCR ಅಥವಾ ರಾಷ್ಟ್ರೀಯ ರಾಜಧಾನಿ ಪ್ರದೇಶವು ದೆಹಲಿ ಸುತ್ತಮುತ್ತಲು ನೀಡಲಾದ ಬೃಹತ್‌ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಶೇ 62.6ರಷ್ಟು ನಗರೀಕರಣದ ಮಟ್ಟವಿದ್ದು, ಅಂದಾಜು 46,069,000 ಜನ ವಾಸವಾಗಿದ್ದಾರೆ. ಈ ಪ್ರದೇಶವು ಎಲ್ಲ ಕ್ಷೇತ್ರದಲ್ಲಿಯೂ ಎಲ್ಲ ದಿಕ್ಕಿನಿಂದಲೂ ಬೆಳೆಯುತ್ತಿದೆ. ಉಳಿದ ಉಪ ನಗರಗಳೂ ವೇಗವಾಗಿ ಬೆಳೆಯುತ್ತಿದ್ದು ವಸತಿ ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳು ಸಾಕಷ್ಟು ತೆರೆದುಕೊಳ್ಳಲಿವೆ.

ಅಭಿವೃದ್ಧಿಗೆ ಒತ್ತು ನೀಡುವುದರ ಮುಖ್ಯ ಉದ್ದೇಶವೇ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಂಪರ್ಕ ಬೆಳೆಸುವ ಆಶಯದೊಂದಿಗೆ. ರಸ್ತೆ, ರೈಲು, ಮೆಟ್ರೊ, ರಾಪಿಡ್‌ ರೈಲು, ವಿಮಾನ ಸಂಪರ್ಕದಂಥ ಕಾರ್ಯಗಳು ಪ್ರಾರಂಭವಾಗುತ್ತವೆ. ಹೊಸ ಬಗೆಯ ಸಾರಿಗೆ ಸಂಪರ್ಕ ಸಾಧನಗಳಾದ ಮೊನೊರೈಲ್‌, ರೋಪ್‌ವೇಗಳು, ಎಲೆಕ್ಟ್ರಿಕ್‌ ಕಾರಿಡಾರ್‌ಗಳಂಥ ವ್ಯವಸ್ಥೆಯ ನಿರ್ಮಾಣವಾಗುತ್ತದೆ. ಇದು ಕಾರ್ಯದಕ್ಷತೆಯನ್ನು ಹೆಚ್ಚಿಸಿ ಬೇರೆ ಬೇರೆ ಉಪನಗರಗಳನ್ನು ಮಾತ್ರವಲ್ಲದೆ ಇನ್ನಿತರ ಪ್ರದೇಶಗಳನ್ನು ಸುಲಭವಾಗಿ ಸಂಪರ್ಕಿಸುವಂತೆ ಮಾಡುತ್ತವೆ.

ಮೊದಲು ಗುರಗಾಂವ್‌ ಹಾಗೂ ನೊಯ್ಡಾ ಅಭಿವೃದ್ಧಿಗೆ ಚಿತ್ತಹರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ನೊಯ್ಡಾದ ಪಶ್ಚಿಮ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿವೆ. ಅಲ್ಲದೆ ಯಮುನಾ ಎಕ್ಸ್‌ಪ್ರೆಸ್‌ ವೇ ಸುತ್ತಮುತ್ತಲ ಪ್ರದೇಶದಲ್ಲಿ ಜೆವರ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬೋಡಕಿಯಲ್ಲಿ ರೈಲು ನಿಲ್ದಾಣ, ಸರಕು ಸಾಗಾಣಿಕಾ ಕಾರಿಡಾರ್‌, ಫಿಲ್ಮಿ ಸಿಟಿ, ಕಾರ್ಪೊರೇಟ್‌ ಹಬ್‌ಗಳ ನಿರ್ಮಾಣವಾಗಿದೆ. ಈ ಎಲ್ಲಾ ಬೆಳವಣಿಗೆಯಿಂದಾಗಿ ಈ ಎಲ್ಲಾ ಪ್ರದೇಶಗಳು ಹಿಂದೆಂದಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಪರಿವರ್ತನೆಯಾಗುತ್ತವೆ. ಇವೆಲ್ಲವುದಕ್ಕಿಂತ ಮುಖ್ಯವಾಗಿ ಉದ್ಯಮಶೀಲತೆಯ ಭಾವನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಸತಿ ಹಾಗೂ ವಾಣಿಜ್ಯ ಕ್ಷೇತ್ರದ ರಿಯಲ್‌ ಎಸ್ಟೇಟ್‌ ಹೆಚ್ಚು ಅಭಿವೃದ್ಧಿ ಕಾಣಲಿದೆ.

ಸದ್ಯದ ಪರಿಸ್ಥಿತಿಯಲ್ಲಿ ಬೆಲೆಗಳು ಕೈಗೆಟುಕುವ ದರದಲ್ಲಿದ್ದು ಅವಕಾಶಗಳು ಸಾಕಷ್ಟಿವೆ. ಕೋವಿಡ್‌ನಂಥ ಸಾಂಕ್ರಾಮಿಕ ಪಿಡುಗು ಬರುವುದಕ್ಕಿಂತ ಮುಂಚಿನ ಸ್ಥಿತಿಗೆ ಇನ್ನೂ ರಿಯಲ್‌ ಎಸ್ಟೇಟ್‌ ತಲುಪಿಲ್ಲವಾದರೂ ಬೇಡಿಕೆ ಹಾಗೂ ಅವಕಾಶಗಳು ಈ ಕ್ಷೇತ್ರದಲ್ಲಿ ಇಂದಿಗೂ ಹಚ್ಚ ಹಸಿರಾಗೇ ಇವೆ. ಆರ್ಥಿಕತೆ ಮತ್ತೆ ಸಾಮಾನ್ಯ ಸ್ಥಿತಿಗೆ ಬರುತ್ತಿದ್ದು ಭಾರತವು ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮರಳಿ ಪಡೆಯುತ್ತಿದೆ. ಹೀಗಾಗಿ ರಿಯಲ್‌ ಎಸ್ಟೇಟ್‌ ಕ್ಷೇತ್ರವೂ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.

ಈ ಎಲ್ಲ ಬೆಳವಣಿಗೆಗಳು ಪ್ರಮುಖ ನಗರ ಪ್ರದೇಶಗಳಲ್ಲಿ ವಸತಿ ಹಾಗೂ ವಾಣಿಜ್ಯ ಯೋಜನೆಗಳೆರಡರಲ್ಲೂ ಕ್ರಾಂತಿಯನ್ನು ಸಾಧಿಸಬಹುದಾಗಿದೆ. ಒಮ್ಮೆ ಅಭಿವೃದ್ಧಿ ಆಯಿತು ಎಂದಾದರೆ ಕೇವಲ ಹೆಮ್ಮೆ ಪಡುವಂಥ ಜೀವನ ಶೈಲಿಯಷ್ಟೇ ಅಲ್ಲ, ಜಾಗತಿಕ ಮಾನದಂಡದ ಬದುಕೂ ಲಭಿಸುತ್ತದೆ.

Related News

spot_img

Revenue Alerts

spot_img

News

spot_img