22.9 C
Bengaluru
Friday, July 5, 2024

ಕೆವೈಸಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆ ಮಾಡಿದ RBI ಗವರ್ನರ್,

ಕೆವೈಸಿ ನಿಯಮಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಹತ್ವದ ಮಾಹಿತಿ ನೀಡಿದ್ದಾರೆ. ನೀವು ಒಮ್ಮೆ KYC ಮಾಡಿದ್ದರೆ, ಎರಡನೇ ಬಾರಿ ಅದನ್ನು ಮಾಡಲು ನೀವು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ಈ ಕುರಿತು ಮಾಹಿತಿಯನ್ನು ನೀಡಿರುವ ಅವರು. ನಿಮ್ಮ ವಿಳಾಸ ಬದಲಾಗಿದ್ದರೆ, ನಿಮ್ಮ ಹೊಸ ವಿಳಾಸವನ್ನು ಇಮೇಲ್ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬ್ಯಾಂಕ್‌ಗೆ ಕಳುಹಿಸಿ ಅಪ್ಡೇಟ್ ಮಾಡಿಸಿಕೊಳ್ಳಬಹುದು ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

1. ಕೆ ವೈ ಸಿ ಎಂದರೇನು ? ಅದು ಏಕೆ ಅಗತ್ಯವಿದೆ ?

ಕೆ ವೈ ಸಿ ಎಂದರೆ “ನಿಮ್ಮ ಗ್ರಾಹಕರನ್ನು ತಿಳಿಯಿರಿ” (know Your Customer ). ಇದು ಬ್ಯಾಂಕುಗಳು ಗ್ರಾಹಕರ ವಿಳಾಸ ಮತ್ತು ಅವರ ಗುರುತಿನ ಬಗ್ಗೆ ಮಾಹಿತಿ ಪಡೆಯುವ ಒಂದು ಪ್ರಕ್ರಿಯೆ ಆಗಿದೆ. ಈ ಪ್ರಕ್ರಿಯೆಯು ಬ್ಯಾಂಕುಗಳ ಸೇವೆಗಳು ದುರ್ಬಳಕೆ ಆಗದಂತೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಖಾತೆಗಳನ್ನು ತೆರೆಯುವ ಸಂದರ್ಭದಲ್ಲಿ ಬ್ಯಾಂಕುಗಳು ಕೆ ವೈ ಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಬ್ಯಾಂಕುಗಳು ಸಹ ನಿಯತಕಾಲಿಕವಾಗಿ ಗ್ರಾಹಕರ ‘ಕೆವೈಸಿ ವಿವರಗಳನ್ನು ಪರಿಷ್ಕರಣೆಗೊಳಿಸುವ ಅಗತ್ಯವಿದೆ.  ಭಾರತ ಸರ್ಕಾರವು ಗುರುತಿನ ಪುರಾವೆಯ ಉದ್ದೇಶಕ್ಕಾಗಿ ಆರು ದಾಖಲೆಗಳನ್ನು “ಅಧಿಕೃತವಾಗಿ ಸಿಂಧುವಾದ ದಾಖಲೆ” (Officially Valid Documents ) ಎಂದು ಗುರುತಿಸಿದೆ. ಆ ಆರು ದಾಖಲೆಗಳು ಯಾವುದೆಂದರೆ , ಪಾಸ್ ಪೋರ್ಟ್ , ಡ್ರೈವಿಂಗ್ ಲೈಸೆನ್ಸ್ , ಮತದಾರರ ಗುರುತಿನ ಚೀಟಿ , ಪ್ಯಾನ್ ಕಾರ್ಡ್ , ಯು. ಐ . ಡಿ. ಐ ನಿಂದ ನೀಡಲ್ಪಟ್ಟ ಆಧಾರ್ ಪತ್ರ ಮತ್ತು ಎನ್ ಆರ್ ಈ ಜಿ ಏ ಯಿಂದ ನೀಡಲಾಗಿರುವ ಜಾಬ್ ಕಾರ್ಡ್ . ನೀವು ಗುರುತಿನ ಪುರಾವೆಯಾಗಿ ಈ ದಾಖಲೆಗಳಲ್ಲಿ ಯಾವುದೇ ಒಂದನ್ನು ಸಲ್ಲಿಸುವ ಅಗತ್ಯವಿದೆ.

ವಿಳಾಸದ ಪುರಾವೆಯಾಗಿ ಈ ಕೆಳಗಿನ ದಾಖಲೆಗಳನ್ನು ಸಲ್ಲಿಸಬಹುದು

1.ಬ್ಯಾಂಕ್ ಖಾತೆ ಅಥವಾ ಅಂಚೆ ಕಛೇರಿ ಉಳಿತಾಯ ಬ್ಯಾಂಕ್ ಖಾತೆಯ ವಿವರಣಾ ಪಟ್ಟಿ

2.ಆಸ್ತಿ ಅಥವಾ ಮುನ್ಸಿಪಲ್ ನಿಂದ ನೀಡಿರುವ ತೆರಿಗೆ ಸ್ವೀಕೃತಿ ಪತ್ರ

3.ಎರಡು ತಿಂಗಳ ಅವಧಿಯೊಳಗಿರುವ ವಿದ್ಯುತ್ ಬಿಲ್ , ದೂರವಾಣಿ , ಪೋಸ್ಟ್ – ಪೇಡ್ ಮೊಬೈಲ್ ಬಿಲ್ , ಕೊಳವೆ ಗ್ಯಾಸ್ ಮತ್ತು ನೀರಿನ ಬಿಲ್ ಮುಂತಾದ ಯುಟಿಲಿಟಿ ಬಿಲ್.

4.ವಿದೇಶಿ ಅಧಿಕಾರವ್ಯಾಪ್ತಿಯ ಸರ್ಕಾರದ ಇಲಾಖೆಗಳು ಅಥವಾ ಭಾರತದಲ್ಲಿರುವ ವಿದೇಶಿ ರಾಯಭಾರಿ ಅಥವಾ ಮಿಷನ್ ನಿಂದ ನೀಡಲ್ಪಟ್ಟಿರುವ ದಾಖಲೆ ಪತ್ರಗಳು.

ಆರ್‌ಬಿಐ ಗವರ್ನರ್ ಹೇಳಿದ್ದೇನು

ಇ-ಕೆವೈಸಿ ಆಧಾರ್ ಸಂಖ್ಯೆಗಳನ್ನು ಹೊಂದಿರುವವರಿಗೆ ಮಾತ್ರ ಸಾಧ್ಯ. ಇ-ಕೆವೈಸಿ ಸೇವೆಯನ್ನು ಬಳಸಲು ಅಧಿಕೃತ ಬಯೋ ಮೆಟ್ರಿಕ್ ಮುಖಾಂತರ ನಿಮ್ಮ ಗುರುತು / ವಿಳಾಸವನ್ನು ಬ್ಯಾಂಕು ಶಾಖೆ / ವ್ಯವಹಾರ ಪ್ರತಿನಿಧಿಗಳಿಗೆ ಬಿಡುಗಡೆ ಮಾಡಲು ಯು ಐ ಡಿ ಏ ಐ ಗೆ ಅಧಿಕಾರವನ್ನು ನಿಮ್ಮ ಸಮ್ಮತಿಯ ಮೂಲಕ ನೀಡಬೇಕು ನಂತರ ಯು ಐ ಡಿ ಏ ಐ ನಿಮ್ಮ ಹೆಸರು , ವಯಸ್ಸು , ಲಿಂಗ ಮತ್ತು ಛಾಯಾಚಿತ್ರವನ್ನು ವಿದ್ಯುನ್ಮಾನದ ಮೂಲಕ ನೀಡುತ್ತದೆ . ಹೀಗೆ ಇ-ಕೆವೈಸಿ ಮೂಲಕ ನೀಡಿರುವ ಮಾಹಿತಿಯು ಅಕ್ರಮ ಹಣ ವರ್ಗಾವಣೆ ತಡೆಯುವಿಕೆ ನಿಯಮದಡಿಯಲ್ಲಿ ಅಧಿಕೃತವಾಗಿ ಸಿಂಧುವಾದ ದಾಖಲೆಯಾಗುತ್ತದೆ ಮತ್ತು ಇದು ಒಂದು ಅಧಿಕೃತವಾದ ಕೆ ವೈ ಸಿ ಪ್ರಕ್ರಿಯೆ ಆಗಿದೆ .

ಕ್ರೆಡಿಟ್ / ಸ್ಮಾರ್ಟ್ ಕಾರ್ಡುಗಳಿಗೆ ಮತ್ತು ಆಡ್ ಆನ್ / ಪೂರಕ ಕಾರ್ಡ್ ಗಳಿಗೂ ಕೂಡ ಕೆವೈಸಿ ಪ್ರಕ್ರಿಯೆ ಅನ್ವಯವಾಗುತ್ತದೆ. ಖಾತೆದಾರರಿಗೆ ಮಾತ್ರ ಡೆಬಿಟ್ ಕಾರ್ಡ್ ನೀಡಲಾಗುತ್ತದೆ ಮತ್ತು ಕೆ ವೈ ಸಿ ಪ್ರಕ್ರಿಯೆ ನಂತರವೆ ಖಾತೆಗಳನ್ನುತೆರೆಯುವ ಕಾರಣ ಡೆಬಿಟ್ ಕಾರ್ಡ್ ಪಡೆಯಲು ಪ್ರತ್ಯೇಕವಾಗಿ ಕೆ ವೈ ಸಿ ನೀಡುವ ಅಗತ್ಯವಿಲ್ಲ .

ವಿಳಾಸ ಬದಲಾವಣೆಯ ಕುರಿತು kyc ಮಾಡುವುದು ಹೇಗೆ?

1. ಕೇವಲ 60 ದಿನಗಳಲ್ಲಿ ಪತ್ರವನ್ನು ಕಳುಹಿಸುವ ಮೂಲಕ ಬ್ಯಾಂಕ್ ಅದನ್ನು ಪರಿಶೀಲಿಸುತ್ತದೆ

2.ನೀವು ಬ್ಯಾಂಕ್ ನ ಬ್ಯಾಂಕಿಂಗ್ ಒಂಬುಡ್ಸ್‌ಮನ್ ವ್ಯವಸ್ಥೆ ಮತ್ತು ಕಾನೂನುಬದ್ಧವಲ್ಲದ ತ್ವರಿತ ಪರಿಹಾರದ ಅಡಿಯಲ್ಲಿ ದೂರು ನೀಡಬಹುದು.

3.ನೀವು ಮನೆಯಲ್ಲಿ ಕುಳಿತು ಬ್ಯಾಂಕ್‌ನ ನೋಂದಾಯಿತ ಮೊಬೈಲ್ ಸಂಖ್ಯೆಗೆ ಇಮೇಲ್ ಅಥವಾ ಸಂದೇಶವನ್ನು ಕಳುಹಿಸಬಹುದು.

4. CKYCR ಅಡಿಯಲ್ಲಿ, ಗ್ರಾಹಕರಿಗೆ CKYCR ಐಡೆಂಟಿಫಿಕೆಶನ್ ಸಂಖ್ಯೆಯನ್ನು ನೀಡಲಾಗುತ್ತದೆ, ಅದನ್ನು ನೀವು ಬ್ಯಾಂಕ್‌ನೊಂದಿಗೆ ಹಂಚಿಕೊಳ್ಳಬಹುದು, ಬಳಿಕ ನೀವು ಇತರ ಬ್ಯಾಂಕ್ ನಲ್ಲಿ KYC ಮಾಡಬೇಕಾಗಿಲ್ಲ.

 

 

Related News

spot_img

Revenue Alerts

spot_img

News

spot_img