22.9 C
Bengaluru
Friday, July 5, 2024

ಮನೆ ಖರೀದಿಸಲು ಬಯಸುವ ಮಧ್ಯಮ ವರ್ಗದವರಿಗೆ ಸಿಹಿ ಸುದ್ದಿ ಕೊಟ್ಟ ರಿಯಲ್ ಎಸ್ಟೇಟ್ ತಜ್ಞರು

ಬೆಂಗಳೂರು, ಏ. 12 : ಆರ್ಬಿಐನ ಹಣಕಾಸು ನೀತಿ ಸಮಿತಿ ರೆಪೋ ದರವನ್ನು 6.5% ನಲ್ಲಿ ಯಥಾಸ್ಥಿತಿಗೆ ಕಾಯ್ದಿರಿಸಿದೆ. ಇದರಿಂದ ರಿಯಲ್ ಎಸ್ಟೇಟ್ ಅನ್ನು ಉತ್ತೇಜಿಸಲು ಸಹಕಾರಿಯಾಗಿದೆ. ಅದರಲ್ಲೂ ಮಧ್ಯಮ ವರ್ಗದವರು ಮನೆ ಖರೀದಿಸಲು ಬಹಳ ಸುಲಭವಾಗಲಿದೆ. ಮಧ್ಯಮ ವರ್ಗದವರ ಆದಾಯ ಒತ್ತಡವನ್ನು ಇದು ಕಡಿಮೆ ಮಾಡಲಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ತಿಳಿಸಿದ್ದಾರೆ.

ಗೃಹ ಸಾಲದ ಇಎಂಐ ಗಳು ಏಪ್ರಿಲ್ 2022 ರಿಂದ ಶೇ. 15-17 ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಮನೆ ಬೆಲೆಗಳು ಶೇ. 4-12 ರಷ್ಟು ಏರಿಕೆ ಕಂಡಿದೆ. ಇದರಿಂದ ಮಧ್ಯಮ ಕುಟುಂಬದವರು ಶಾಕ್ ಆಗಿದ್ದರು. ಆದರೆ, ಈಗಿನ ನೀತಿ ದರಗಳ ಪ್ರಸ್ತುತ ಪರಿಸ್ಥಿತಿ ಮಧ್ಯಮ ವರ್ಗದವರಿಗೆ ಸ್ವಲ್ಪ ನೆಮ್ಮದಿಯನ್ನು ತಂದುಕೊಟ್ಟಿದೆ ಎಂದು ರಿಯಲ್‌ ಎಸ್ಟೇಟ್‌ ತಜ್ಞರು ಹೇಳಿದ್ದಾರೆ.

ಈನ್ನು ಆರ್‌ಬಿಐನ ರೇಪೋ ದರದ ಬಗ್ಗೆ ಕ್ರೆಡೈ ನ್ಯಾಷನಲ್‌ನ ಅಧ್ಯಕ್ಷ ಬೊಮನ್ ಇರಾನಿ ಅವರು ಕೂಡ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇರಾನಿ ಅವರು ಆರ್‌ಬಿಐ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದರಿಂದ ಮಾರಾಟದ ವೇಗವನ್ನು ಕಾಯ್ದುಕೊಳ್ಳುತ್ತದೆ. ಅದು ಕೂಡ ಬಹಳ ದೂರ ಸಾಗಲಿದೆ. ಈ ಕ್ರಮ ಕೈಗೆಟುಕುವ ವಸತಿಯನ್ನು ಉತ್ತೇಜಿಸುತ್ತದೆ. ಅದರಲ್ಲೂ ಮಧ್ಯಮ ವರ್ಗದವರ ಆದಾಯದ ವಸತಿ ಮಾರುಕಟ್ಟೆಯನ್ನು ವಿಶೇಷವಾಗಿ ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ. ಮುಂಬರುವ ತ್ರೈಮಾಸಿಕಗಳಲ್ಲಿ ಕೈಗೆಟುಕುವ ವಸತಿಗಾಗಿ ಬೇಡಿಕೆ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇನ್ನು ರಾಜ್ಯ ಸರ್ಕಾರ ಸ್ಟ್ಯಾಂಪ್ ಡ್ಯೂಟಿ ರಿಯಾಯಿತಿಗಳು ಇಲ್ಲವೇ ನೋಂದಣಿ ಶುಲ್ಕವನ್ನು ಮನ್ನಾ ಮಾಡುವುದರಿಂದ ಇನ್ನಷ್ಟು ಅನುಕೂಲಗಳಾಗಲಿವೆ. ಮನೆ ಖರೀದಿದಾರರ ಮೇಲಿನ ಹೊರೆಯನ್ನು ಇದು ಕಡಿಮೆ ಮಾಡುತ್ತದೆ ಎಂದು ಎಂದು ಕೆಲ ಡೆವಲಪರ್‌ಗಳು ಹೇಳಿದ್ದಾರೆ. ಸ್ಟ್ಯಾಂಪ್‌ ಡ್ಯೂಟಿ ಹಾಗೂ ನೋಂದಣಿ ಶಲ್ಕದ ಮೇಲಿನ ಕ್ರಮದಿಂದ ಮನೆ ಖರೀದಿದಾರರಿಗೆ ಆರ್ಥಿಕ ಹೊರೆಯನ್ನು ತಗ್ಗಿಸುವಲ್ಲಿ ಸಹಕಾರಿಯಾಗುತ್ತದೆ. ಮನೆ ಖರೀದಿಸಲು ಬಯಸುವ ಮಧ್ಯಮದವರಿಗೆ ಮನೆ ಮಾಲೀಕತ್ವವನ್ನು ಕೈಗೆಟುಕುವಂತೆ ಮಾಡುತ್ತದೆ ಎನ್ನಲಾಗಿದೆ.

ಈ ಬಗ್ಗೆ ಸಿಗ್ನೇಚರ್ ಗ್ಲೋಬಲ್ (ಇಂಡಿಯಾ) ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಪ್ರದೀಪ್ ಅಗರ್‌ವಾಲ್ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಸಾಂಕ್ರಾಮಿಕ ರೋಗ ಕೋವಿಡ್‌ ನಿಂದ ವಸತಿ ಕ್ಷೇತ್ರ ಒತ್ತಡದಲ್ಲಿದೆ. 40 ಲಕ್ಷ ರೂಪಾಯಿಗಿಂತಲೂ ಕಡಿಮೆ ಬೆಲೆಯಿರುವ ವಸತಿ ಘಟಕಗಳು 2019, 2022 ರ ನಡುವೆ ಮಾರಾಟ ಷೇರುಗಳ ಕುಸಿತವನ್ನು ಕಂಡಿದೆ ಎನ್ನಲಾಗಿದೆ. .

Related News

spot_img

Revenue Alerts

spot_img

News

spot_img