ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಗೆ ಲಿಂಕ್ ಮಾಡಲು ಡಿ. 31ರವರೆಗೆ ಟೈಮ್ ಇದೆ. ಆದರೆ, ಇನ್ನೂ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್(Link) ಮಾಡದಿದ್ದರೆ, ತಕ್ಷಣ ಅದನ್ನು ಮಾಡುವುದು ಉತ್ತಮ. ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ನಿಮ್ಮ ಆಧಾರ್ ಕಾರ್ಡ್(Aadharcard) ಅನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲೂ ಲಿಂಕ್ ಮಾಡಬಹುದು. ಪಿಡಿಎಸ್(PDS) ಪೋರ್ಟಲ್‌ಗೆ ಹೋದರೆ ನಿಮಗೆ ಲಿಂಕ್ ಮಾಡುವ ಆಯ್ಕೆ ಸಿಗುತ್ತದೆ ಅಥವಾ ಪಡಿತರ ಕಚೇರಿಗೆ ಅಗತ್ಯ ದಾಖಲೆ ಕೊಟ್ಟರೂ ಸಾಕು.ಪಡಿತರ ಚೀಟಿ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವು ಅಗತ್ಯವಾಗಿದೆ. December 31 ರೊಳಗೆ ಈ ಕೆಲಸ ಮಾಡಿಕೊಳ್ಳುವುದು ಉತ್ತಮವಾಗಿದೆ. ಅಂತ್ಯೋದಯ ಯೋಜನೆ, ಆಧ್ಯತೆಯ ವಸತಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಪಡಿತರ ಚೀಟಿದಾರರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕಿದೆ. ಆಧಾರ್ ಜೊತೆ ರೇಷನ್ ಕಾರ್ಡ್ ಮಾಡುವುದು ವಂಚನೆಯನ್ನು ತಡೆಯುವ ಮೂಲ ಉದ್ದೇಶವಾಗಿದೆ.
ರೇಷನ್ ಕಾರ್ಡ್-ಆಧಾರ್ ಲಿಂಕ್‌ಗೆ ಏನೆಲ್ಲಾ ದಾಖಲೆ ಬೇಕು?
> ಮೂಲ ಪಡಿತರ ಚೀಟಿಯ ಪೋಟೋ ಕಾಪಿ
> ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ನ ಫೋಟೋಕಾಪಿ
> ಕುಟುಂಬದ ಮುಖ್ಯಸ್ಥರ ಆಧಾರ್ ಕಾರ್ಡ್‌ನ ಫೋಟೋ ಕಾಪಿ
> ಬ್ಯಾಂಕ್ ಪಾಸ್‌ಬುಕ್‌ನ ಒಂದು ಪ್ರತಿ
> ಕುಟುಂಬದ ಮುಖ್ಯಸ್ಥರ 2 ಪಾಸ್‌ಪೋರ್ಟ್ ಫೋಟೋಗಳು