ದೆಹಲಿ;ದೆಹಲಿ ಅಬಕಾರಿ ನಿಯಮ(Excise Act) ಅವ್ಯವಹಾರ ಪ್ರಕರಣದಲ್ಲಿ ಸಂಸದ ಸಂಜಯ್ ಸಿಂಗ್ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಆಮ್ ಆದ್ಮ ಪಕ್ಷದ ನಾಯಕನ ಸ್ಥಾನ ಖಾಲಿಯಾಗಿತ್ತು. ಈ ಸ್ಥಾನಕ್ಕೆ ಸದ್ಯ ಸಂಸದ ರಾಘವ್ ಚಡ್ಡಾ(Raghav chadda) ಅವರನ್ನು ನೇಮಿಸಿ ಆದೇಶಿಸಲಾಗಿದೆ. ಈ ಹಿಂದೆ ಸಂಸತ್ ನಿಂದ ಚಡ್ಡಾ ಅವರನ್ನೂ ಕೂಡ ಅಮಾನತು ಮಾಡಲಾಗಿತ್ತು. ಪರಿಣಾಮ ಸಂಜಯ್ ಬಂಧನವಾದ ಹಲವು ದಿನಗಳವರೆಗೆ ಪಕ್ಷದ ರಾಜ್ಯಸಭಾ ನಾಯಕನ ಸ್ಥಾನ ಖಾಲಿಯಾಗಿಯೇ ಉಳಿದಿತ್ತು.ರಾಜ್ಯಸಭಾ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ, ಎಎಪಿ ಪಕ್ಷದ ನಾಯಕತ್ವವು ಸಂಜಯ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ, ರಾಘವ್ ಚಡ್ಡಾ ಇನ್ನು ಮುಂದೆ ಮೇಲ್ಮನೆಯಲ್ಲಿ ಪಕ್ಷದ ನಾಯಕರಾಗಿರಲಿದ್ದಾರೆ ಎಂದು ಹೇಳಿದೆ.ಪ್ರಸ್ತುತ ಮೇಲ್ಮನೆಯಲ್ಲಿ ಎಎಪಿ ಒಟ್ಟು 10 ಸಂಸದರನ್ನು ಹೊಂದಿದೆ. ರಾಜ್ಯಸಭೆಯ ಕಿರಿಯ ಸದಸ್ಯರಲ್ಲಿ ಒಬ್ಬರು ರಾಘವ್ ಚಡ್ಡಾ