22.9 C
Bengaluru
Friday, July 5, 2024

ಮಹಿಳಾ ಮೀಸಲಾತಿ ಮಸೂದೆಗೆ ರಾಜ್ಯಸಭೆ ಅನುಮೋದನೆ

#Rajya Sabha #approves #Women’s #Reservation Bill

ದೆಹಲಿ;ಹಲವು ದಶಕಗಳಿಂದ ಕಾಯುತ್ತಿದ್ದ ಮಹಿಳೆಯರ ಕನಸು ನನಸಾಗಿದೆ. ಲೋಕಸಭೆ & ವಿಧಾನಸಭೆಗಳಲ್ಲಿ ಅವರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ಸಂಸತ್ತಿನ ಎರಡೂ ಸದನಗಳು ಅನುಮೋದನೆ ನೀಡಿವೆ. ನಿನ್ನೆ ಲೋಕಸಭೆಯಲ್ಲಿ & ಇಂದು ರಾಜ್ಯಸಭೆಯಲ್ಲಿ ಎಲ್ಲ ಪಕ್ಷಗಳು ಬೆಂಬಲ ಸೂಚಿಸಿವೆ. ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ಬೀಳಬೇಕಿದ್ದು, ನಂತರ ಅದು ಕಾನೂನಾಗಿ ಜಾರಿಗೆ ಬರಲಿದೆ. ಇಂದು ಮಹಿಳೆಯರಿಗೆ ವಿಶೇಷ ದಿನವಾಗಿ ಇತಿಹಾಸದಲ್ಲಿ ದಾಖಲಾಗಲಿದೆ. ನಾರಿ ಶಕ್ತಿಗೆ ವಂದನೆಗಳು,ಇದೀಗ ರಾಜ್ಯಸಭೆಯಲ್ಲಿ ಮತದಾನ ನಡೆದಿದ್ದು, 215 ಸಂಸದರು ಪರವಾಗಿ ಮತ ಚಲಾಯಿಸಿದ್ದಾರೆ. ಈ ಮಸೂದೆ ವಿರುದ್ಧ ಒಂದೇ ಒಂದು ಮತವೂ ಚಲಾವಣೆಯಾಗಿಲ್ಲ.

ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಇದೊಂದು ಐತಿಹಾಸಿಕ ಗೆಲುವು ಎಂದು ಬಣ್ಣಿಸಿದ್ದಾರೆ. ಈ ಮಸೂದೆಗೆ ಲೋಕಸಭೆ ನಿನ್ನೆಯೇ ಅನುಮೋದನೆ ನೀಡಿದೆ.ರಾಜ್ಯಸಭೆಯಲ್ಲಿ ಮತದಾನಕ್ಕೂ ಮುನ್ನ ಪ್ರಧಾನಿ ಮೋದಿ, ಈ ಮಸೂದೆ ದೇಶದ ಜನರಲ್ಲಿ ಹೊಸ ವಿಶ್ವಾಸಕ್ಕೆ ಕಾರಣವಾಗುತ್ತದೆ. ಎಲ್ಲಾ ಸದಸ್ಯರು ಮತ್ತು ರಾಜಕೀಯ ಪಕ್ಷಗಳು ಮಹಿಳೆಯರ ಸಬಲೀಕರಣ ಮತ್ತು ‘ನಾರಿ ಶಕ್ತಿ’ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಆದ್ದರಿಂದ ಈ ಸಂದರ್ಭದಲ್ಲಿ ದೇಶಕ್ಕೆ ಬಲವಾದ ಸಂದೇಶವನ್ನು ನೀಡಿ ಎಂದು ಮನವಿ ಮಾಡಿದ್ದರು.ಮಹಿಳೆಯರು ಈ ಶಾಸನದ ಪ್ರಯೋಜನಗಳನ್ನು ತಕ್ಷಣವೇ ಅನುಭವಿಸುವುದಿಲ್ಲ. ಸಂವಿಧಾನದ ತಿದ್ದುಪಡಿಯನ್ನು ಅಂಗೀಕರಿಸಿದ ನಂತರ ನಡೆಸಿದ ಮೊದಲ ಜನಗಣತಿಯ ನಂತರ ಇದು ಜಾರಿಗೆ ಬರಲಿದೆ ಎಂದು ಮಸೂದೆಯ ಕಲಂ 334 ಎ ಹೇಳುತ್ತದೆ.ನಾರಿ ಶಕ್ತಿ ವಂದನ್ ಅಧಿನಿಯಮ್ ಮಂಗಳವಾರ ಹೊಸ ಸಂಸತ್ ಭವನಕ್ಕೆ ಸ್ಥಳಾಂತರಗೊಂಡ ನಂತರ ವಿಶೇಷ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಅಂಗೀಕರಿಸಿದ ಮೊದಲ ಮಸೂದೆಯಾಗಿದೆ.

Related News

spot_img

Revenue Alerts

spot_img

News

spot_img