26.7 C
Bengaluru
Sunday, December 22, 2024

ಮಳೆ ನೀರು ಕೊಯ್ಲು ಮತ್ತು ವಿಧಾನಗಳು

ಬೆಂಗಳೂರು, ಮಾ. 08 : ಈಗ ಅಂತರ್ಜಲ ಕುಸಿಯುತ್ತಿದೆ. ನೂರಾರು ಅಡಿ ಬೋರ್ ವೆಲ್‌ ಕೊರೆದರೂ ನೀರು ಸಿಗುವುದು ಕಷ್ಟವಾಗಿದೆ. ನೀರಿನ ಕೊರತೆಯನ್ನು ತಗ್ಗಿಸಬೇಕೆಂದರೆ ಮಳೆ ನೀರಿನ ಕೊಯ್ಲು ಬಹಳ ಮುಖ್ಯವಾಗುತ್ತದೆ. ಮಳೆ ನೀರಿನ ಕೊಯ್ಲು ಹೊಸ ವಿಷಯವೇನಲ್ಲ. ಮಳೆಯ ನೀರನ್ನು ಸಂಗ್ರಹಿಸುವುದೇ ಈ ಮಳೆ ನೀರಿನ ಕೊಯ್ಲು. ಈ ನೀರನ್ನು ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ ಅಥವಾ ನೆಲದಡಿಯ ಸಂಪ್‌ಗಳಿಗೆ ಹರಿಸಲಾಗುತ್ತದೆ. ಮುಖ್ಯವಾಗಿ, ಮಳೆ ನೀರು ಹರಿದು ಪೋಲಾಗದಂತೆ ಮಾಡುವುದೇ ಇದರ ಉದ್ದೇಶ.

ಕೃತಕವಾಗಿ ವಿನ್ಯಾಸಗೊಳಿಸಲಾದ ವ್ಯವಸ್ಥೆಗಳನ್ನು ಬಳಸಿಕೊಂಡು ಮಳೆ ನೀರು ಕೊಯ್ಲು ಮಾಡಬಹುದು. ಮಳೆ ನೀರು ಕೊಯ್ಲು ಮೂಲಕ ಸಂಗ್ರಹಿಸಿದ ನೀರನ್ನು ಫಿಲ್ಟರ್ ಮಾಡಿ, ಸಂಗ್ರಹಿಸಿ ವಿವಿಧ ಉದ್ದೇಶಗಳಿಗೆ ಬಳಸಬಹುದು. ಹೆಚ್ಚು ಖರ್ಚಿಲ್ಲದೆ ಸರಳ ವಿಧಾನದಲ್ಲಿ ಮಳೆಕೊಯ್ಲು ಮಾಡಬಹುದು. ಆಗಸದಿಂದ ಬೀಳುವ ಶುದ್ಧ ಮಳೆ ನೀರು ಸುಮ್ಮನೇ ಹರಿದು, ಚರಂಡಿ ಸೇರಿ ಮುಂದೆ ಕೊಳಚೆ ನೀರಾಗಿ ಎಲ್ಲೋ ವ್ಯರ್ಥವಾಗಿ ಹೋಗುತ್ತದೆ. ಅದರ ಬದಲಿಗೆ ಮಳೆ ನೀರನ್ನು ಹಿಡಿದಿಟ್ಟು ಬಳಕೆ ಮಾಡುವುದು. ಹಾಗಾದರೆ, ಮಳೆ ನೀರಿನ ಕೊಯ್ಲು ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ..

ಮಳೆ ನೀರಿನ ಹರಿವನ್ನು ಕೊಯ್ಲು: ಮೊದಲಿಗೆ ಮಳೆ ನೀರಿನ ಹರಿವನ್ನು ಕೊಯ್ಲು ಮಾಡುವುದು ಹೇಗೆ ಎಂದು ತಿಳೀಯೋಣ. ಈ ತಂತ್ರವನ್ನು ಮಹಾನಗರಗಳಲ್ಲಿ ಸುಲಭವಾಗಿ ಜಾರಿಗೆ ತರಬಹುದು. ರಸ್ತೆ ಮೇಲೆ, ಮನೆಯ ಕೆಳಗಡೆ, ನೆಲದ ಮೇಲೆ ಹರಿಯುವ ಮಳೆ ನೀರನ್ನು ಸಂಗ್ರಹ ಮಾಡಬೇಕು. ಇವನ್ನು ಕೆರೆ, ಉಪ ನದಿಗಳಲ್ಲಿ ಶೇಖರಣೆ ಮಾಡಬಹುದು. ಇದಕ್ಕಾಗಿ ಅಲ್ಲಲ್ಲಿ ಕೊಳಗಳನ್ನು ನಿರ್ಮಿಸಬೇಕಾಗುತ್ತದೆ. ಈ ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾದ ಕೊಳಗಳು, ತೊಟ್ಟಿಗಳು ಮತ್ತು ಜಲಾಶಯಗಳನ್ನು ಮೇಲ್ಮೈ ಹರಿವನ್ನು ಸಂಗ್ರಹಿಸಲು ಬಳಸಲಾಗುತ್ತದೆ.

ಮೇಲ್ಛಾವಣಿಯ ಮಳೆ ನೀರು ಕೊಯ್ಲು: ಇದನ್ನು ಮಾಡಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಮನೆ, ಶಾಲೆ ಸೇರಿದಂತೆ, ಕಟ್ಟಡಗಳ ಮೇಲ್ಛಾವಣಿಯಲ್ಲಿ ಬೀಳುವ ಮಳೆನೀರು ಕೊಯ್ಲು ವಿಧಾನವನ್ನು ಆಯ್ಕೆ ಮಾಡಬಹುದು. ಇದರಲ್ಲಿ ಮಳೆನೀರನ್ನು ವಸತಿ ಅಥವಾ ವಾಣಿಜ್ಯ ರಚನೆಗಳ ಛಾವಣಿಗಳಿಂದ ಸಂಗ್ರಹಿಸಲಾಗುತ್ತದೆ. ಇವನ್ನು ಸಂಪ್‌ ಅಥವಾ ಟ್ಯಾಂಕ್‌ ಗಳಲ್ಲಿ ಸಂಗ್ರಹಿಸಲಾಗುತ್ತದೆ. ಈ ನೀರನ್ನು ಶೌಚಾಲಯಗಳು, ಯಂತ್ರಗಳನ್ನು ತೊಳೆಯಲು, ಕಾರುಗಳನ್ನು ವಾಶ್‌ ಮಾಡಲು, ತೋಟಗಾರಿಕೆಗೆ, ಸೇರಿದಂತೆ ದೈನಂದಿನ ಉಪಯೋಗಕ್ಕೆ ಬಳಸಿಕೊಳ್ಳಬಹುದು.

ಮೇಲ್ಛಾವಣಿಯ ಮಳೆನೀರು ಕೊಯ್ಲು ತಂತ್ರಗಳ ಬಗ್ಗೆ ಇನ್ನಷ್ಟು ವಿವರವಅಗಿ ತಿಳಿಯಲು ಈ ಕೆಳಗೆ ಓದಿ.

1. ನೇರ ಬಳಕೆಯ ಸಂಗ್ರಹಣೆ: ಈದು ಮಳೆ ನೀರನ್ನು ನೇರವಾಗಿ ಬಳಸಲು ಉಪಯೋಗಿಸಲಾಗುತ್ತದೆ. ಇದಕ್ಕೆ ಮನೆಯ ಮೇಲ್ಛಾವಣಿಯಲ್ಲಿ ಬರುವ ಮಳೆ ನೀರನ್ನು ಸಂಗ್ರಹಿಸಲು ಟ್ಯಾಂಕ್ ಅಥವಾ ಸಂಪ್‌ ಗಳನ್ನು ಪ್ರತ್ಯೇಕವಾಗಿ ನಿರ್ಮಿಸಬೇಕು. ಮೇಲ್ಛಾವಣಿಯ ನೀರನ್ನು ಶೋಧಿಸಿ ಸಂಗ್ರಹಿಸಲು ಫೈಪ್‌ ಗಳಲ್ಲಿ ಫಿಲ್ಟರ್‌ ಗಳನ್ನು ಅಳವಡಿಸಿರಬೇಕು. ಶೇಖರಣಾ ತೊಟ್ಟಿಗೆ ಸಂಪರ್ಕಿಸುವ ಮೊದಲು, ಪ್ರತಿ ಡ್ರೈನ್‌ಪೈಪ್‌ನಲ್ಲಿ ಫಿಲ್ಟರಿಂಗ್ ಸಿಸ್ಟಮ್, ಮೊದಲ ಫ್ಲಶ್ ಸಾಧನ ಮತ್ತು ಮೆಶ್ ಫಿಲ್ಟರ್ ಇರಬೇಕು. ಪ್ರತಿ ತೊಟ್ಟಿಯಲ್ಲಿ ಹೆಚ್ಚುವರಿ ನೀರು ಉಕ್ಕಿ ಹರಿಯುವ ವಿಧಾನ ಇರಬೇಕು. ಶೇಖರಣಾ ತೊಟ್ಟಿಗಳಿಂದ ನೀರನ್ನು ತೋಟಗಾರಿಕೆ ಮತ್ತು ಸ್ವಚ್ಛತೆಗೆ ಬಳಸಿಕೊಳ್ಳಬಹುದು. ಮಳೆನೀರನ್ನು ಸಂಗ್ರಹಿಸುವ ಅತ್ಯಂತ ಆರ್ಥಿಕ ವಿಧಾನವೆಂದರೆ ಇದು.

2. ಅಂತರ್ಜಲ ಮರುಪೂರ್ಣ: ಅಂತರ್ಜಲವನ್ನು ಮರು ಪೂರಣ ಎಂದರೆ, ಈಗಾಗಲೇ ನಗರದಲ್ಲಿರುವ ಬಾವಿ, ಕೆರೆಗಳೀಗೆ ನೀರನ್ನು ಬಿಟ್ಟು ರಿಚಾರ್ಜ್‌ ಮಾಡುವುದು. ಇದರಿಂದಾಗಿ ಮಳೆಯ ನೀರು ಭೂಮಿಗೆ ಬಿಟ್ಟಂತಾಗುತ್ತದೆ. ನಗರಗಳಲ್ಲಿ ಕೊಳಚೆ ಮೋರಿಗಳಿಗೆ ಹೋಗುವ ಬದಲು ಮಳೆ ನೀರು ನೇರವಾಗಿ ಕೆರೆ, ಕಟ್ಟೆಗಳಿಗೆ ಹೋದರೆ, ಬೇಸಿಗೆಯಲ್ಲೂ ನೀರು ಇರುತ್ತದೆ. ಈ ಕೆಳಗೆ ಅಂರ್ಜಲ ಮರುಪೂರಣದ ತಂತ್ರಗಳನ್ನು ನೀಡಲಾಗಿದೆ. • ಕೊಳವೆ ಬಾವಿಗಳ ಮರುಪೂರಣ
• ಅಗೆದ ಬಾವಿಗಳನ್ನು ತುಂಬುವುದು
• ಹೊಂಡಗಳನ್ನು ತುಂಬಿಸುವುದು
• ಬಾವಿಗಳನ್ನು ತುಂಬಿಸುವುದು
• ಶೋಧನೆ ಟ್ಯಾಂಕ್‌ಗಳು

3. ಕೊಳವೆ ಬಾವಿಗಳನ್ನು ತುಂಬಿಸುವುದು: ಡ್ರೈನ್ ಪೈಪ್ಗಳ ಮೂಲಕ, ಕಟ್ಟಡದ ಛಾವಣಿಯ ಮೇಲೆ ಸಂಗ್ರಹಿಸಿದ ಮಳೆ ನೀರನ್ನು ಕೊಳವೆ ಬಾವಿಗಳಿಗೆ ತುಂಬಿಸುವುದು. ಈದರಿಂದ ಈಗಾಗಲೇ ಡ್ರೈ ಆಗಿರುವ ಬೋರ್‌ ವೆಲ್‌ ಗಳನ್ನು ಮರುಪೂರಣ ಮಾಡಿದಂತಾಗುತ್ತದೆ. ಬೋರ್‌ ವೆಲ್‌ ಗಳಿಗೆ ಹೀಗೆ ಮಳೆ ನೀರನ್ನು ತುಂಬುವುದರಿಂದ ಅಂತರ್ಜಲವೂ ಹೆಚ್ಚಾಗಲು ಸಹಕಾರಿಯಾಗುತ್ತದೆ.

4. ಮರುಪೂರಣ ಹೊಂಡಗಳು: ಇಟ್ಟಿಗೆ ಅಥವಾ ಕಲ್ಲಿನ ಕಲ್ಲಿನ ಗೋಡೆಯೊಂದಿಗೆ ಸಂಕುಚಿತಗೊಂಡ ನಿಯಮಿತ ಮಧ್ಯಂತರದಲ್ಲಿ ಅಳುವ ರಂಧ್ರವನ್ನು ಹೊಂದಿರುವ ಸಣ್ಣ ಹೊಂಡಗಳನ್ನು ರೀಚಾರ್ಜ್ ಪಿಟ್‌ಗಳು ಎಂದು ಕರೆಯಲಾಗುತ್ತದೆ. ಪಿಟ್ನ ಮೇಲ್ಭಾಗವನ್ನು ಮುಚ್ಚಲು ರಂದ್ರ ಹೊದಿಕೆಗಳನ್ನು ಬಳಸಬಹುದು. ಫಿಲ್ಟರ್ ಮಾಧ್ಯಮವನ್ನು ಪಿಟ್ನ ಕೆಳಭಾಗದಲ್ಲಿ ಇಡಬೇಕು. ಹಳ್ಳದ ಸಾಮರ್ಥ್ಯವನ್ನು ನಿರ್ಧರಿಸಲು ಜಲಾನಯನ ಪ್ರದೇಶ, ಮಳೆಯ ತೀವ್ರತೆ ಮತ್ತು ಮಣ್ಣಿನ ಮರುಪೂರಣದ ದರವನ್ನು ಬಳಸಬಹುದು.

5. ಸೋಕ್ಅವೇ ಶಾಫ್ಟ್ ಗಳು: ಇದು ಮೇಲೆ 30 ಸೆಂ ನಷ್ಟು ರಂಧ್ರಗಳನ್ನು ಕೊರೆದು, ಕೆಳಗೆ ಪೈಪ್‌ ಗಳನ್ನು ಅಳವಡಿಸಿ ಮಳೆ ನೀರನ್ನು ಫಿಲ್ಟರ್‌ ಮಾಡಿ ಶೇಖರಿಸಿಡುವುದು. ಈ ಮೂಲಕವೂ ಮಳೆ ನೀರನ್ನು ಶೇಖರಿಸಿಡಬಹುದು.

6. ಬಾವಿಗಳನ್ನು ತುಂಬಿಸುವುದು: ಅಗೆದಿರುವ ಭಾವಿಗಳಲ್ಲಿ ನೀರು ಇಂಗಿರುತ್ತದೆ. ಇವನ್ನು ರೀಚಾರ್ಜ್ ಮಾಡಬಹುದು. ಮೇಲ್ಛಾವಣಿಯಿಂದ ಬರುವ ಮಳೆ ನೀರನ್ನು ಬಾವಿಗಳಿಗೆ ಪೈಪ್‌ ಮೂಲಕ ಹರಿ ಬಿಡಬಹುದು. ಈ ಪೈಪ್‌ ಗಳೀಗೂ ಫಿಲ್ಟರ್‌ ಗಳನ್ನು ಅಳವಡಿಸಿದ್ದರೆ ಸೂಕ್ತ.

7. ಕಂದಕಗಳು: ಮನೆಯ ಸುತ್ತಲೂ ಅಥವಾ ಪ್ರದೇಶಗಳಲ್ಲಿ ಮೋರಿಗಳಂತೆ ಚಿಕ್ಕ ಚಿಕ್ಕ ಕಂದಕಗಳನ್ನು ಅಗೆಯಬೇಕು. ಸುತ್ತಲೂ ಹರಿಯುವ ನೀರು ಈ ಕಂದಕವನ್ನು ತುಂಬುತ್ತದೆ. ಶಾಲೆಗಳು, ಉದ್ಯಾನವನ, ಆಟದ ಮೈದಾನಗಳಲ್ಲೂ ಈ ರೀತಿ ಕಂದಕಗಳನ್ನು ನಿರ್ಮಿಸಬಹುದು.

8. ಗದ್ದೆಗಳಲ್ಲಿ ಟ್ಯಾಂಕ್: ಇದು ದೊಡ್ಡ ದೊಡ್ಡ ಗದ್ದೆ, ಬಯಲಿನಲ್ಲಿ ನಿರ್ಮಾಣ ಮಾಡಬಹುದು. ದೊಡ್ಡ ಟ್ಯಾಂಕ್‌ ನಂತೆ ಭೂಮಿಯನ್ನು ಅಗೆಯಬೇಕು. ಇದರಲ್ಲಿ ಮಳೆ ನೀರು ಸಂಗ್ರವಾದಂತೆ ಅಂತರ್ಜಲ ಹೆಚ್ಚಾಗುತ್ತದೆ. ಈ ನೀರನ್ನು ತೋಟಗಾರಿಕೆಗೆ ಬಳಸಲು ಸಹಕಾರಿಯಾಗುತ್ತದೆ. ರೈತರು ಈ ರೀತಿ ಹೊಂಡಗಳನ್ನು ನಿರ್ಮಿಸಿಕೊಂಡರೆ ಉಪಯುಕ್ತವಾಗುತ್ತದೆ.

Related News

spot_img

Revenue Alerts

spot_img

News

spot_img