22.9 C
Bengaluru
Friday, July 5, 2024

ಕಂದಾಯ ಅಧಿಕಾರಿಗಳ ಅರೆ ನ್ಯಾಯಿಕ ತೀರ್ಮಾನ: ಕಾನೂನು ಏನು ಹೇಳುತ್ತದೆ

ಕಂದಾಯ ಇಲಾಖೆ ನಿಗದಿತ ದರ್ಜೆಯ ಅಧಿಕಾರಿಗಳಿಗೆ ಕೇವಲ ಕೇವಲ ಕಚೇರಿಗಳಷ್ಟೇ ಅಲ್ಲ ಅವರು ಭೂ ಕಂದಾಯಕ್ಕೆ ಸಂಬಂಧಿಸಿದ ವಿವಾದಗಳನ್ನೂ ಸಹ ತೀರ್ಮಾನ ಮಾಡಬೆಕಾಗಿರುತ್ತದೆ. ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ಎಲ್ಲವನ್ನೂ ಸಹ ನ್ಯಾಯಾಲಯಕ್ಕೆ ಕಳುಹಿಸಿದೆ ಹಿರಿಯ ಅಧಿಕಾರಿಗಳ ಹಂತದಲ್ಲಿಯೇ ಕೆಲವು ತೀರ್ಮಾನಗಳನ್ನು ಕೈಗೊಳ್ಳಲು ಅವಕಾಶ ಇದ್ದು, ಅದಕ್ಕೆ ಕಾನೂನಿನ ಮಾನ್ಯತೆಯೂ ಇದೆ.

ಭೂ ಕಂದಾಯ ಅಧಿನಿಯಮ-1964 ರ ಅನ್ವಯ ಕಂದಾಯ ಅಧಿಕಾರಿಗಳು ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕಿರುತ್ತದೆ. ಕಂದಾಯ ಅಧಿಕಾರಿಗಳ ಪ್ರಾಧಿಕಾರಗಳು ಅರೆ ನ್ಯಾಯಿಕ ನಡುವಳಿಗಳಾಗಿರುತ್ತವೆ. ಅರೆನ್ಯಾಯಿಕ ನಡವಳಿಗಳ ಮೂಲಕ ತಿರ್ಮಾನ ಮಾಡಬೇಕಾದರೆ ಅವರು ನೈಸರ್ಗಿಕ ನ್ಯಾಯಾದ ನಿಯಮ (rule of natural Justice) ಪಾಲನೆ ಮಾಡಬೇಕಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಭೂಕಂದಾಯ ಅಧಿನಿಯಮ ಏನೇನು ಹೇಳುತ್ತದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ನೈಸರ್ಗಿಕ ನ್ಯಾಯಾದ ನಿಯಮಗಳು ಈ ರೀತಿ ಇವೆ:-

1. ತನ್ನ ಸ್ವಂತ ವ್ಯಾಜ್ಯದಲ್ಲಿ ಯಾವನು ತಾನೇ ನ್ಯಾಯಾಧೀಶನಾಗಿರತಕ್ಕದಲ್ಲ:-
ಈ ತತ್ವದ ಅರ್ಥವೆನೆಂದರೆ ಯಾವನೇ ವ್ಯಕ್ತಿಯು ತನ್ನದೇ ಆದ ಪ್ರಕರಣದಲ್ಲಿ ತಾನೇ ನ್ಯಾಯಾಧೀಶನಾಗಿರಲು ಬರುವುದಿಲ್ಲ. ಇದರೊಂದಿಗೆ ನ್ಯಾಯಾಧೀಶನಾದವನು ನಿಸ್ಪಕ್ಷಪಾತದಿಂದ ಇದ್ದಿರಬೇಕು ಎಂಬ ತತ್ವವನ್ನು ಹೇಳಲಾಗಿದೆ. ಇದಕ್ಕೆ ಪಕ್ಷ ಪಾತದ ವಿರುದ್ದ ನಿಯಮ ಎನ್ನುತ್ತಾರೆ. ನ್ಯಾಯಾಧೀಶನೆಂದು ನಿರ್ವಹಿಸುತ್ತಿರುವ ವ್ಯಕ್ತಿಯನ್ನು ಪಕ್ಷಪಾತದ ಆಧಾರದ ಮೇಲೆ ಆನರ್ಹಗೊಳಿಸಲಾಗುತ್ತದೆ.

2. ನ್ಯಾಯಾವು ಕೇವಲ ಮಾಡಲ್ಪಟ್ಟರೆ ಸಾಲದು, ಆದರೆ ಅದು ಮಾಡಲ್ಪಟ್ಟಿದೆ ಎಂದು ಕಾಣಬರಬೇಕು:-
ನ್ಯಾಯಿಕ ವ್ಯವಹರಣೆಗಳ ಪ್ರಮುಖವಾದ ಅಗತ್ಯವೆಂದರೆ ನ್ಯಾಯಾಧೀಶನು ನಿಸ್ಪಕ್ಷಪಾತ ಮತ್ತು ತಟಸ್ಥ ರೀತಿಯಲ್ಲಿರ ತಕ್ಕದ್ದು ಮತ್ತು ಆ ನ್ಯಾಯಾಧೀಶನು ತನ್ನ ಮುಂದಿನ ವಿವಾಧದಲ್ಲಿ ಯುಕ್ತವಾದ ವ್ಯವಹರಣೆಯನ್ನು ನಡೆಸತಕ್ಕದ್ದು. ಆದರೆ ಆ ನ್ಯಾಯಾಧೀಶನು ಪಕ್ಷಪಾತದಿಂದ ಕೂಡಿದ್ದರೆ ಅವನು ನಡೆಸಿದ ವ್ಯವಹರಣೆಗಳು ರದ್ದಾಗುತ್ತವೆ.
ಪಕ್ಷ ಪಾತದಲ್ಲಿ ಮೂರು ಪ್ರಕಾರಗಳಿವೆ, ಅವುಗಳೆಂದರೆ
1. ಹಣ ಸಂಬಂಧಿ ಪಕ್ಷಪಾತ
2.ವೈಯಕ್ತಿಕ ಪಕ್ಷಪಾತ
3.ವಸ್ತು ವಿಷಯಕ್ಕೆ ಸಂಬಂಧ ಪಟ್ಟ ಪಕ್ಷಪಾತ

ಹಣ ಸಂಬಂಧಿ ಪಕ್ಷಪಾತ:
ಯಾವುದೇ ವ್ಯಕ್ತಿಯು ಹಣ ಸಂಬಂಧದಲ್ಲಿ ಹಿತಾಸಕ್ತಿಯನ್ನು ಹೊಂದಿದ್ದರೆ ಅವನು ನ್ಯಾಯಾಧೀಶನಾಗುವ ಅರ್ಹತೆಯನ್ನು ಕಳೆದುಕೊಳ್ಳುತ್ತಾನೆ. ಹಣ ಸಂಬಂಧದ ಆಸಕ್ತಿಯು ಎಷ್ಟೇ ಚಿಕ್ಕದಾಗಿದ್ದರೂ ಸಹ ಅದು ವ್ಯವಹರಣೆಗಳನ್ನು ಅಸಿಂಧುಗೊಳಿಸುತ್ತದೆ ಎಂದು ಆನೇಕ ನ್ಯಾಯಾಲಯಗಳು ಹೇಳಿರುತ್ತವೆ.

ಡೈಮ್ಸ್ V/s ಗ್ರ್ಯಾಂಡ್ ಜಂಕ್ಸನ್ ಕ್ಯಾನಲ್ (1852)3 HLC 759 ರ ಪ್ರಕರಣದಲ್ಲಿ ಮನವಿದಾರನು ಕಂಪನಿಯ ವಿರುದ್ದದ ವಿವಾದಗಳನ್ನು ನಡೆಸುತ್ತಿದ್ದನು. ಡೈಮ್ಸ್‌ನಿಂದ ಪಾಸು ಮಾಡಲಾದ ಡಿಕ್ರಿಯ ವಿರುದ್ದ ಮನವಿದಾರನು ಲಾರ್ಡ್ ಚಾನ್ಸಲರ್ನಿಗೆ ಮನವಿ ಮಾಡಿದನು. ಲಾರ್ಡ್ ಜಾನ್ಸಲರ್ ಇವನ ಮನವಿದಾರರ ವಿರುದ್ದ ತೀರ್ಪನ್ನು ಕೊಟ್ಟನು. ಮನವಿದಾರನಿಗೆ ನಂತರ ಆ ಚಾನ್ಸಲರನು ಆ ಕಂಪನಿಯನ್ನು ಒಂದು ಶೇರನ್ನು ಹೊಂದಿದ್ದನೆಂದು ತಿಳಿಯಿತು.

ಈ ತೀರ್ಪಿನ ವಿರುದ್ದ ಮನವಿದಾರನು ಮನವಿ ಮಾಡಿದನು ಚಾನ್ಸಲರನು ಆ ಕಂಪನಿಯಲ್ಲಿ ಹಿತಾಸಕ್ತಿ ಹೊಂದಿದ್ದಾನೆ ಎಂಬ ಕಾರಣಕ್ಕಾಗಿ ಅವನು ಕೊಟ್ಟ ಆ ತೀರ್ಪನ್ನು ಆಸಿಂಧುಗೊಳಿಸಲಾಯಿತು.
ಭಾರತದಲ್ಲಿಯೂ ಸಹ ನ್ಯಾಯಾಲಯಗಳು ಡೈಮ್ಸ್ ಪ್ರಕರಣವನ್ನು ಅನುಸರಿಸಿವೆ. ಹೀಗೆ ಒಂದು ವಿತ್ತೀಯ ಸಂಬಂಧವು ಒಬ್ಬ ವ್ಯಕ್ತಿಯನ್ನು ನ್ಯಾಯಾಧೀಶನಾಗುವುದರಿಂದ ಅನರ್ಹಗೊಳಿಸುತ್ತದೆ.

ವೈಯಕ್ತಿಕ ಪಕ್ಷಪಾತ :-
ವೈಯಕ್ತಿಕ ಪೂರ್ವ ಗ್ರಹಪೀಡೆಯಲ್ಲಿ ಎರಡು ಪ್ರಕಾರ
* ಯಾವುದೇ ಪ್ರಕರಣದ ವ್ಯವಹರಣೆಯು ಮುಕ್ತಯವಾಗುವ ಮೊದಲೇ ಆ ಪ್ರಕರಣಕ್ಕೆ ಸಂಬಂಧಪಟ್ಟು ಯಾವುದೇ ಒಂದು ತೀರ್ಮಾನಕ್ಕೆ ಬರುವುದು
* ಇಬ್ಬರು ಪಕ್ಷಕಾರರಲ್ಲಿ ಯಾವುದೇ ಒಬ್ಬ ಪ್ರಕ್ಷಕಾರನ ಬಗ್ಗೆ ನ್ಯಾಯಾಧೀಶನು ಹಿತಾಸಕ್ತಿ ಹೊಂದಿರುವುದು ಅಥವಾ ಯಾವುದೇ ಒಬ್ಬ ಪಕ್ಷಕಾರನಿಗೆ ಸಂಬಂಧಿಸಿರುವದು.

ಹೀಗೆ ಯಾವುದೇ ಒಬ್ಬ ನ್ಯಾಯಾಧೀಶನು ಯಾವುದೇ ಪ್ರಕರಣಕ್ಕೆ ಸಂಬಂಧಪಟ್ಟ ಮೊದಲೇ ಯಾವುದಾದರೂ ಅಭಿಪ್ರಾಯಕ್ಕೆ ಬಂದಿದ್ದರೆ ಮತ್ತು ಆ ಪ್ರಕರಣದ ಯಾವುದೇ ಒಬ್ಬ ಪಕ್ಷಕಾರನಿಗೆ ಸಂಬಂಧಪಟ್ಟವನಾಗಿದ್ದರೆ ಅದಕ್ಕೆ ವೈಯಕ್ತಿಕ ಪಕ್ಷಪಾತ ಹೊಂದಿದ್ದಾನೆಂದು ಹೇಳಲಾಗುತ್ತದೆ. ನ್ಯಾಯಾಧೀಶನು ಯಾವುದೇ ಒಬ್ಬ ಪಕ್ಷಕಾರನ ಮಿತ್ರನಾಗಿರಬಹುದು ಅಥವಾ ಅವನ ಸಂಬಂಧಿಕನಿರಬಹುದು ಅಥವಾ ವೈಯಕ್ತಿಕ ದ್ವೇಷ ಹೊಂದಿದ್ದರೆ ಅವನು ಒಬ್ಬ ಪಕ್ಷಕಾರನ ವಿರುದ್ದವಾಗಿ ಅಥವಾ ಪರವಾಗಿ ತನ್ನ ತೀರ್ಮಾನವನ್ನು ಕೊಡಬಹುದು. ಈ ರೀತಿ ಅವನು ವರ್ತಿಸುವುದರಿಂದ ಅವನು ನ್ಯಾಯಾಧೀಶನಾಗಿ ಕೆಲಸ ನಿರ್ವಹಿಸಲು ಅನರ್ಹನಾಗಿರುತ್ತಾನೆ. ವ್ಯಕ್ತಿಯು ಯಾವುದೇ ಪ್ರಕರಣದಲ್ಲಿ ಹಣಕಾಸಿನ ಹಿತಸಂಬಂಧ ಹೊಂದಿದ್ದು ಮತ್ತು ಯಾವುದೇ ಪಕ್ಷಕಾರನೊಂದಿಗೆ ಶತ್ರುತ್ವದ ಭಾವನೆ ಹೊಂದಿದ್ದರೆ ಅಂಥವನು ಈ ಪ್ರಕರಣದಲ್ಲಿ ನ್ಯಾಯಾಧೀಶನಾಗಿ ವರ್ತಿಸಲು ಅನರ್ಹನಾಗಿರುತ್ತಾನೆ.

ಮಂಗಲ್‌ದಾಸ್ ಎಸ್ಟೇಟ್ Vs ಕಾರ್ಮಿಕರು AIR 1963 SC 1719 ಪ್ರಕರಣದಲ್ಲಿ ಕಾರ್ಖಾನೆಯ ಕಾರ್ಮಿಕರು ಆ ಕಾರ್ಖಾನೆಯ ಪ್ರಬಂಧಕನ ಮೇಲೆ ಹಲ್ಲೆ ಮಾಡಿದರೆಂಬ ಕಾರಣಕ್ಕಾಗಿ ಅದರ ವಿಚಾರಣೆಯನ್ನು ಪ್ರಬಂಧಕನೆ ಪ್ರಾರಂಭ ಮಾಡಿದನು. ಹೀಗೆ ಪ್ರಬಂಧಕನು ತನ್ನದೇ ಆದ ವಿಚಾರಣೆಯಲ್ಲಿ ತಾನೇ ನ್ಯಾಯಾಧೀಶನಾಗಲು ಬರುವುದಿಲ್ಲ ಎಂದು ತೀರ್ಮಾನಿಸಲಾಯಿತು.

ವಸ್ತು ವಿಷಯಕ್ಕೆ ಸಂಬಂಧ ಪಟ್ಟ ಪಕ್ಷಪಾತ:
ಯಾವುದೇ ಒಬ್ಬ ನ್ಯಾಯಾಧೀಶನು ಪ್ರಕರಣದ ವಿಷಯ-ವಸ್ತುವಿನಲ್ಲಿ ಹಿತ ಸಂಬಂಧ ಹೊಂದಿದ್ದರೆ ಅವನು ಆ ಪ್ರಕರಣದಲ್ಲಿ ಒಬ್ಬ ಪಕ್ಷಕಾರನಾಗುತ್ತಾನೆಯೇ ಹೊರತು ನ್ಯಾಯಾಧೀಶನಾಗುವುದಿಲ್ಲ. ಆದ್ದರಿಂದ ನ್ಯಾಯಾಧೀಶನಾಗಿ ವರ್ತಿಸಬೇಕಾದರೆ ಅವನು ತನ್ನ ಮುಂದಿನ ಪ್ರಕರಣದಲ್ಲಿ ಯಾವುದೇ ರೀತಿಯ ಹಿತಸಂಬಂಧವನ್ನು ಹೊಂದಿರಬಾರದು.

ಮನಕಲಾಲ್ Vs ಪ್ರೇಮ್‌ಚಂದ್ AIR 1957 SC 425 ಈ ಪ್ರಕರಣದಲ್ಲಿ ರಾಜಸ್ಥಾನ ಉಚ್ಚ ನ್ಯಾಯಾಲಯದ ವಕೀಲನಾದ ಮನಕಲಾಲ್‌ನ ವಿರುದ್ದ ದುರ್ನಡತೆಯ ಬಗ್ಗೆ ಪ್ರೇಮಚಂದನು ಪಿರ್ಯಾದಿ ಕೊಟ್ಟನು. ವಕೀಲರ ವಿರುದ್ದ ಸಂಘದ ನ್ಯಾಯಾಧೀಕರಣವು ಮನಕಲಾಲ್‌ನ ಮೇಲೆ ಆಪಾದಿಸಲಾದ ದುರ್ನಡತೆಗಳ ಬಗ್ಗೆ ವಿಚಾರಿಸಲು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿಯಿಂದ ಸ್ಥಾಪಿಸಲ್ವಪಟ್ಟಿತು. ಈ ನ್ಯಾಯಾಧೀಕರಣವು ಒಬ್ಬ ಚೇರಮನ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿಯಿಂದ ಸ್ಥಾಪಿಸಲ್ಪಟ್ಟಿತು.

ಈ ನ್ಯಾಯಾಧಿಕರಣವು ಒಬ್ಬ ಚೇರಮನ್ ಮತ್ತು ಇತರ ಇಬ್ಬರು ಪರಸ್ಪರರನ್ನು ಒಳಗೊಂಡಿತ್ತು ಚೇರಮನ್‌ ಅದಕ್ಕಿಂತ ಮೊದಲು ಕೆಲವೊಂದು ಪ್ರಕರಣಗಳಲ್ಲಿ ಪ್ರೇಮಚಂದ್‌ನ ಪರವಾಗಿ ಹಾಜರಾಗಿದ್ದನು. ಚೇರ್‌ಮನ್ನನು ಒಬ್ಬ ಹಿರಿಯ ನ್ಯಾಯಾವಾದಿ ಮತ್ತು ರಾಜಸ್ಥಾನ ಉಚ್ಚ ನ್ಯಾಯಾಲಯದ ಮಹಾ ನ್ಯಾಯಾವಾದಿಯಾಗಿದ್ದನು. ಸರ್ವೋಚ್ಚ ನ್ಯಾಯಾಲಯವು, ಚೇರಮನ್ನನು ಪ್ರೇಮಚಂದನೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಹೊಂದಿದ್ದಲ್ಲ ಮತ್ತು ಅವನ ಪರವಾಗಿ ಹಾಜರಾದ ಬಗ್ಗೆ ಚೇರಮನ್‌ನಿಗೆ ನೆನಪಿದ್ದಲ್ಲ ಎಂದು ಸ್ಪಷ್ಟವಾಗಿ ಅಭಿಪ್ರಾಯ ಕೊಟ್ಟರೂ ಸಹ ನ್ಯಾಯಾವು ಮಾಡಲ್ಪಟ್ಟರೆ ಸಾಲದು, ಆದರೆ ಅದು ಮಾಡಲ್ಪಟ್ಟಿದೆ ಎಂದು ಕಂಡು ಬರಬೇಕು ಎಂಬ ತತ್ವದ ಆಧಾರದ ಮೇಲೆ ಚೇರಮನ್ನನನ್ನು ಆ ವಿಚಾರಣೆ ನಡೆಸಲು ಅನರ್ಹಗೊಳಿಸಲಾಯಿತು.

ನಿಜವಾಗಿಯೂ ಪಕ್ಷಪಾತವಾಗಿದೆ ಎಂಬುದು ಅಗತ್ಯವಿಲ್ಲದಿದ್ದರೂ ಹಾಗೆ ಆಗಿರಬಹುದೆಂಬ ಸ್ವಲ್ಪ ಮಟ್ಟಿಗಿನ ಸಂಶಯವೂ ಸಹ ಅಂತಹ ವ್ಯವಹರಣೆಯನ್ನು ರದ್ದು ಮಾಡುತ್ತದೆ.

3. ಇನ್ನೊಂದು ಪಕ್ಷವನ್ನು ಶ್ರವಣಮಾಡು (Audi alterm partem):-

ಯಾವುದೇ ಪ್ರಕರಣದಲ್ಲಿ ಕ್ರಮತೆಗೆದುಕೊಳ್ಳಬೇಕಾದರೆ ಅದಕ್ಕೆ ಸಂಬಂಧ ಪಟ್ಟವರಿಗೆ ಸೂಕ್ತ ನೋಟಿಸ್ ನೀಡಿ ಈ ವಿಚಾರದಲ್ಲಿ ಕ್ರಮತೆಗೆದುಕೊಳ್ಳುತ್ತಿದ್ದೇವೆ ಇದಕ್ಕೆ ನಿಮ್ಮ ತಕರಾರು/ಹೇಳಿಕೆ ಇದ್ದರೆ ತಿಳಿಸಿ ಎಂದು ಸೂಕ್ತ ಸಮಯ ನೀಡಬೇಕು ಅವನಿಂದ ಉತ್ತರ ಬಂದನಂತರ ಆ ವಿಚಾರಕ್ಕೆ ಸಂಬಂಧ ಪಟ್ಟಂತೆ ಕಾನೂನು ಸಮ್ಮತ ಕ್ರಮ ತೆಗೆದುಕೊಳ್ಳಬಹುದು.

ಉದಾಹರಣೆಗೆ ಯಾವುದೇ ಕಂದಾಯ ಇಲಾಖೆಯ ವ್ಯಕ್ತಿಗೆ ಯಾವುದೇ ಆಸ್ತಿಗೆ ಸಂಬಂದ ಪಟ್ಟಂತೆ ಯಾರಾದರೂ ದೂರು ಕೊಟ್ಟಲ್ಲಿ ಆ ದೂರು ಯಾರಾ ಮೇಲೆ ಕೊಟ್ಟಿರುತ್ತಾರೆ ಆ ವ್ಯಕ್ತಿಯಿಂದ ಉತ್ತರ ಪಡೆಯುವುದು ಅದರನ್ವಯ ಕಾನೂನಿನ ಅಂಶಗಳನ್ನು ಪರಿಶೀಲಿಸಿ ನ್ಯಾಯೋಚಿತ ಕ್ರಮ ತೆಗೆದುಕೊಳ್ಳಬೇಕು. ಒಂದು ವೇಳೆ ದೂರು ಬಂದ ತಕ್ಷಣ ಸಂಬಂಧ ಪಟ್ಟ ವ್ಯಕ್ತಿಗೆ ನೋಟಿಸ್ ನೀಡದೆ ನೇರವಾಗಿ ಕ್ರಮತೆಗೆದುಕೊಂಡರೆ ಅವನು ಸಿದಾ ನ್ಯಾಯಾಲಯಕ್ಕೆ ದಾವೆ ಹೂಡಬಹುದು ಅವರನ್ನು ಕೇಳಿಲ್ಲ ಎಂಬ ಕಾರಣವನ್ನು ನೀಡಿ ನ್ಯಾಯಾಲಯವು ಎಷ್ಟೋ ಪ್ರಕರಣಗಳ್ಲಿ ತಡೆಯಾಜ್ಞೆ ನೀಡಿ ಪ್ರಕರಣಗಳನ್ನು ರದ್ದು ಪಡಿಸಿರುವ ಉದಾಹರಣೆಗಳಿವೆ.

Related News

spot_img

Revenue Alerts

spot_img

News

spot_img