22.4 C
Bengaluru
Saturday, July 6, 2024

ಪುಣೆ ಹೌಸಿಂಗ್ ಸೊಸೈಟಿಗಳಲ್ಲಿ ಹಸಿ ಕಸ ಸಂಗ್ರಹ ಬಂದ್!: ಮುಂದೆ ಬೆಂಗಳೂರಿಗೂ ಅನ್ವಯ?

ಅಕ್ಟೋಬರ್‌ 2ರಿಂದ ಪುಣೆಯ ಪಿಂಪ್ರಿ– ಚಿಂಚ್ವಾಡ್‌ ಮಹಾನಗರ ಪಾಲಿಕೆಯು(ಪಿಸಿಎಂಸಿ) 100 ಕೆ.ಜಿಗಿಂತಲೂ ಹೆಚ್ಚು ತ್ಯಾಜ್ಯ ಉತ್ಪಾದಿಸುವ ಸುಮಾರು 700ಕ್ಕೂ ಹೆಚ್ಚು ವಸತಿ ಸಮುಚ್ಛಯಗಳಿಂದ ಹಸಿಕಸ ತ್ಯಾಜ್ಯಗಳನ್ನು ಸಂಗ್ರಹಿಸುವುದಿಲ್ಲ ಎಂದು ತಿಳಿಸಿದೆ.

ಬದಲಾಗಿ, ವಸತಿ ಸಮಚ್ಛಯಗಳು ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ, ಹಸಿ ಕಸವನ್ನು ತಮ್ಮ ಸಮುಚ್ಛಯದ ಆವರಣದಲ್ಲೇ ಕಾಂಪೋಸ್ಟ್‌ ಗೊಬ್ಬರವನ್ನಾಗಿ ಮಾರ್ಪಡಿಸಲು ಸೂಚಿಸಿದೆ. 100 ಕೆ.ಜಿಗಿಂತ ಅಧಿಕ ತ್ಯಾಜ್ಯ ಉತ್ಪಾದಿಸುವ ಸಮುಚ್ಛಯಗಳಿಂದ ನಾವು ಹಸಿ ಕಸ ಸಂಗ್ರಹ ಮಾಡುವುದಿಲ್ಲ, ಹಾಗೇ ಈ ನಿಮಯಮಕ್ಕೆ ಅಲ್ಲಿರುವ ಮನೆಗಳ ಸಂಖ್ಯೆ ಗಣನೆಗೆ ಬರುವುದಿಲ್ಲ’ ಎಂದು ಪಿಸಿಎಂಸಿ ಡೆಪ್ಯುಟಿ ಮುನ್ಸಿಪಾಲ್‌ ಕಾರ್ಪೋರೇಷನ್‌ ಅಜಯ್‌ ಚಾರ್ತಂಕರ್‌ ತಿಳಿಸಿದ್ದಾರೆ.

ಪುಣೆಯ ಈ ಮಾದರಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿಯೂ ಅನ್ವಯ ಆಗಬಹುದೇ ಎಂಬ ಮಾತುಗಳು ಬಿಬಿಎಂಪಿಯೊಳಗೆ ಕೇಳಿಬರುತ್ತಿವೆ.

ಪಿಸಿಎಂಸಿ ವ್ಯಾಪ್ತಿಯಲ್ಲಿ ಸುಮಾರು 5,500 ವಸತಿ ಸಮುಚ್ಛಯಗಳಿವೆ. ಇದರಲ್ಲಿ 700 ಸಮುಚ್ಛಯಗಳನ್ನು ‘ದೊಡ್ಡ ವಸತಿ ಸಮಚ್ಛಯ’ ಎಂದು ಗುರುತಿಸಲಾಗಿದ್ದು, ಇಲ್ಲಿ ಪ್ರತಿದಿನ 100 ಕೆ.ಜಿಗಿಂತ ಅಧಿಕ ಕಸ ಸಂಗ್ರಹವಾಗುತ್ತದೆ. ಈ 700 ಸೊಸೈಟಿಯಲ್ಲಿ 200 ಸೊಸೈಟಿಯಲ್ಲಿ ಹಸಿ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗಿದೆ. ಇನ್ನುಳಿದ ಸಮುಚ್ಛಯಗಳಲ್ಲಿ ಹಲವು ಬಾರಿ ತಿಳಿಸಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿರದ ಕಾರಣ ಈ ಕ್ರಮ ಕೈಗೊಳ್ಳಲಾಗುತ್ತದೆ. ನಾವು ಈ ಹೌಸಿಂಗ್‌ ಸೊಸೈಟಿಗಳಿಗೆ 2017ರಿಂದ ಈ ಕುರಿತು ನೋಟಿಸ್‌ ಕಳುಹಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

2016ರಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರದಂತೆ ಎಲ್ಲ ಹೌಸಿಂಗ್‌ ಸೊಸೈಟಿಗಳಿಗೆ ಒಣ, ಹಸಿ ಬೇರ್ಪಡಿಸುವಿಕೆ ಹಾಗೂ ಹಸಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಕಡ್ಡಾಯ ಎಂದು ತಿಳಿಸಲಾಗಿತ್ತು. 2016ರ ನಂತರ ನಿರ್ಮಾಣವಾದ ಕಟ್ಟಡಗಳಲ್ಲಿ ಹಸಿ ತ್ಯಾಜ್ಯದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿ ಘಟಕ ನಿರ್ಮಾಣಕ್ಕೆ ಜಾಗ
ಒದಗಿಸಿದ್ದಾರೆ. ಆದರೆ ಕೆಲವೊಂದು ಸೊಸೈಟಿಗಳು ಈ ನಿಮಯಗಳನ್ನು ಪಾಲಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

2016ರ ಮೊದಲು ನಿರ್ಮಾಣವಾದ ಕಟ್ಟಡಗಳಲ್ಲಿ ಹೊಸ ಹಸಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಬಹುದು ಅಥವಾ ಅವರು ಅಲ್ಲಿ ಸಂಗ್ರಹವಾದ ಹಸಿತ್ಯಾಜ್ಯವನ್ನು ಖಾಸಗಿ ಘಟಕಗಳಿಗೆ ನೀಡಿ, ಅವರಿಗೆ ಇಂತಿಷ್ಟು ದುಡ್ಡು ನೀಡಿ ಅದನ್ನು ಕಾಂಪೋಸ್ಟ್‌ ಗೊಬ್ಬರವನ್ನಾಗಿ ಮಾಡಿಕೊಂಡು ತಮ್ಮ ಮನೆಯ ಗಾರ್ಡನ್‌ ಮೊದಲಾದವುಗಳಿಗೆ ಬಳಸಬಹುದು ಎಂದು ಕಾರ್ಪೋರೇಷನ್‌ ಅಜಯ್‌ ಚಾರ್ತಂಕರ್‌ ತಿಳಿಸಿದ್ದಾರೆ.

Related News

spot_img

Revenue Alerts

spot_img

News

spot_img