20.5 C
Bengaluru
Tuesday, July 9, 2024

ಪಿಎಸ್‌ಎಲ್‌ವಿ-ಸಿ 56 ಉಡಾವಣೆಗೆ ಸಜ್ಜು

ನವದಹಲಿ:ಚಂದ್ರಯಾನ-3 ನೌಕೆಯನ್ನು ಯಶಸ್ವಿಯಾಗಿ ನಭಕ್ಕೆ ಸೇರಿಸಿದ ಸಂತೋಷದಲ್ಲಿರುವ ಇಸ್ರೋ, ಮತ್ತೊಂದು ಕಾರ್ಯಕ್ರಮಕ್ಕೆ ಸಜ್ಜಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜುಲೈ 30 ರಂದು ಆಂಧ್ರ ಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆರು ಸಹ-ಪ್ರಯಾಣಿಕ ಉಪಗ್ರಹಗಳೊಂದಿಗೆ ಸಿಂಗಾಪುರದ DS-SAR ಉಪಗ್ರಹ ಹೊತ್ತ ಪೋಲಾ‌ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV-C56) ಅನ್ನು ಉಡಾವಣೆ ಮಾಡಲಿದೆ.ಪಿಎಸ್‌ಎಲ್‌ವಿ-ಸಿ 56 ರಾಕೆಟ್ ಸಿಂಗಾಪುರದ 351.9 ಕೆ.ಜಿ ತೂಕದ ಭೂ ವೀಕ್ಷಣಾ ಉಪಗ್ರಹ’DS-SAR ಮತ್ತು ಆರ್ಕೇಡ್ ಸೇರಿದಂತೆ ಇತರ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಸೇರಿಸಲಿದೆ.ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಇಸ್ರೋ, ಮೊದಲ ಉಡಾವಣಾ ಕೇಂದ್ರದಿಂದ ಬೆಳಗ್ಗೆ 6.30ಕ್ಕೆ ಉಪಗ್ರಹಗಳನ್ನು ಉಡಾವಣೆ ಮಾಡಲಾಗುವುದು ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

Related News

spot_img

Revenue Alerts

spot_img

News

spot_img