26.4 C
Bengaluru
Thursday, December 19, 2024

ಪಿ.ಎಸ್.ಐ ಸ್ಕ್ಯಾಮ್: ಸೂಪರಿಡೆಂಟ್ ಮಂಜನಾಥ್ ರವರ ಜಾಮೀನು ಅರ್ಜಿ ವಜಾಮಾಡಿದ ಹೈಕೋರ್ಟ್:

ಬೆಂಗಳೂರು: ಫೆ-22;2022 ರಲ್ಲಿ ನಡೆದಿದ್ದ 545 ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನೇಮಕಾತಿ ಹಗರಣದಲ್ಲಿ ಪಿ.ಎಸ್.ಐ ಆಕಾಂಕ್ಷಿ ಯಶವಂತಗೌಡ ರವರಿಂದ ಹಣ ಪಡೆದು ಆತನು ಲಿಖಿತ ಪರೀಕ್ಷೆ ಬರೆದ ನಂತರ ಆತ ಬಳಸಿದ್ದ ಪೆನ್ನಿನಲ್ಲೇ ಒಎಂಆರ್ ಶೀಟ್ ತಿದ್ದಲು ಸಹಾಯ ಮಾಡಿದ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ  ಈ ಹಿಂದೆ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಸೂಪರಿಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕರಣದ 30ನೇ ಆರೋಪಿ ಮಂಜುನಾಥ್ ರವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈ ಕೋರ್ಟ್ ವಜಾಗೊಳಿಸಿ ಆದೇಶ ನೀಡಿದೆ.

ನ್ಯಾಯಾಲಯದ ವಿಚಾರಣೆ ವೇಳೆಯಲ್ಲಿ ಸಿಐಡಿ ಪರವಾಗಿ ವಾದ ಮಂಡಿಸಿದ ವಿಶೇಷ ಪ್ರಾಸಿಕ್ಯೂಟರ್ ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿದ್ದು ಈ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶ ಪಡಿಸುವ ಸಾಧ್ಯತೆ ಇದೆ ಆದ್ದರಿಂದ ಆರೋಪಿತನಿಗೆ ಜಾಮೀನು ನೀಡದೆ ಜಾಮೀನು ಅರ್ಜಿಯನ್ನು ವಜಾಗೊಳಿಸಬೇಕೆಂದು ವಾದಮಂಡಿಸಿ ಕೋರಿದ್ದರಿಂದ ಇದನ್ನು ಮಾನ್ಯ ಮಾಡಿದ ಘನ ಉಚ್ಚ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ. ಮೊನ್ನೆಯಷ್ಟೆ ಅಮ್ರುತ್ ಪೌಲ್ ರವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಮಾನ್ಯ ನ್ಯಾಯಾಲವು ಆದೇಶ ನೀಡಿತ್ತು.

Related News

spot_img

Revenue Alerts

spot_img

News

spot_img