23.1 C
Bengaluru
Monday, October 7, 2024

PSI ಮರುಪರೀಕ್ಷೆ ಇಂದಿನಿಂದ ಪ್ರವೇಶಪತ್ರ ಲಭ್ಯ

ಬೆಂಗಳೂರು;ಜನವರಿ.23ರಂದು ನಡೆಯಲಿರುವ PSI ನೇಮಕಾತಿ ಮರುಪರೀಕ್ಷೆಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಮಹತ್ವದ ಮಾಹಿತಿ ನೀಡಿದೆ. ಅಭ್ಯರ್ಥಿಗಳು ಜನವರಿ.17ರಂದು ಬೆಳಿಗ್ಗೆ 11ರಿಂದ ಪ್ರವೇಶಪತ್ರ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು http://kea.kar.nic.in d in ಲಿಂಕ್ ಆಯ್ಕೆ ಮಾಡಿಕೊಂಡ ಬಳಿಕ ಆಧಾರ್ ಮತ್ತು ಹೆಸರು ನಮೂದಿಸಿ ಪ್ರವೇಶ ಪತ್ರ ಪಡೆಯಬಹುದು.ಪರೀಕ್ಷೆಯು 23ರಂದು ನಿಗದಿತ ಕೇಂದ್ರಗಳಲ್ಲಿ ಬೆಳಗ್ಗೆ 10.30ರಿಂದ 12ರ ತನಕ ಪತ್ರಿಕೆ-1 ಮತ್ತು ಮಧ್ಯಾಹ್ನ 1ರಿಂದ 2.30ರ ತನಕ ಪತ್ರಿಕೆ-2ರ ಪರೀಕ್ಷೆಗಳು ನಡೆಯಲಿವೆ. ಅಭ್ಯರ್ಥಿಗಳು ವಸ್ತ್ರಸಂಹಿತೆ ಸೇರಿದಂತೆ ಪ್ರತಿಯೊಂದು ಸೂಚನೆಯನ್ನೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಾಧಿಕಾರ ಸೂಚಿಸಿದೆ. ಕರ್ನಾಟಕ ಸರ್ಕಾರ ಈಗಾಗಲೇ ನಿರ್ಧರಿಸಿದ ಪ್ರಕಾರ ಮತ್ತು ಹೈಕೋರ್ಟ್ ತೀರ್ಪಿನ ಪ್ರಕಾರ, ಮರುಪರೀಕ್ಷೆಗೆ ದಿನ ನಿಗದಿಯಾಗಿದೆ. ಜನವರಿ 23ರಂದು 545 ಪಿಎಸ್‍ಐ(PSI) ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿದೆ. ಕರ್ನಾಟಕ ಪರೀಕ್ಷಾಪ್ರಾಧಿಕಾರ (KEA) ಜ.23ರಂದು ನಡೆಸಲಿರುವ PSI ನೇಮಕಾತಿ ಪರೀಕ್ಷೆಗೆ ವಸ್ತ್ರ ಸಂಹಿತೆ ನಿಯಮಾವಳಿ ಪ್ರಕಟಿಸಿದ್ದು, ಸರಳ ಉಡುಪು ಧರಿಸಿ ಬರಲು ಸೂಚಿಸಿದೆ. ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಇನ್ಯಾವುದೇ ಆಭರಣಗಳನ್ನು ಧರಿಸಿ ಬರುವಂತಿಲ್ಲ ಎಂದು ತಿಳಿಸಿದೆ. ಇತ್ತೀಚಿನ ನಿಗಮ ಮಂಡಳಿ ಪರೀಕ್ಷೆಗಳ ವೇಳೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸುವ ಮುನ್ನ ಮಂಗಳಸೂತ್ರ ಮತ್ತು ಕಾಲುಂಗುರವನ್ನು ತೆಗೆಸಿದ್ದು ಭಾರೀ ವಿವಾದಕ್ಕೀಡಾಗಿತ್ತು. ಇದು ಬಹುಸಂಖ್ಯಾತ ಹಿಂದೂ ಸಂಸ್ಕೃತಿಗೆ ಅಗೌರವ ತೋರಲಾಗಿದೆ ಎಂದು ಸಾರ್ವಜನಿಕರು ಹಾಗೂ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೆ-ಸೆಟ್(K-set) ಪರೀಕ್ಷೆ ನಂತರ ಇದೀಗ ಪಿಎಸ್‌ಐ ಪರೀಕ್ಷೆಗೂ ಮಂಗಳ ಸೂತ್ರ ಮತ್ತು ಕಾಲುಂಗುರ ಧರಿಸಿ ಬರಲು ಅವಕಾಶ ನೀಡಲಾಗಿದೆ.

Related News

spot_img

Revenue Alerts

spot_img

News

spot_img