25.1 C
Bengaluru
Thursday, November 21, 2024

Property Tax:ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಬೀಗ ಜಡಿದ ಬಿಬಿಎಂಪಿ

ಬೆಂಗಳೂರು;ತೆರಿಗೆ ಪಾವತಿ(Payment of tax) ಬಾಕಿ ಆರೋಪದಡಿ ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ(Mantrimall) ಮತ್ತೆ ಸಂಕಷ್ಟ ಎದುರಾಗಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ BBMP ಅಧಿಕಾರಿಗಳು ಇಂದು ಬೆಳಗ್ಗೆ ಮಾಲ್ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಜಡಿದಿದ್ದಾರೆ ಎಂದು ತಿಳಿದುಬಂದಿದೆ. ಮಾಲ್ ವಿರುದ್ಧ ₹51 ಕೋಟಿವರೆಗೂ ತೆರಿಗೆ ಪಾವತಿ ಉಳಿಸಿಕೊಂಡಿದ್ದ ಆರೋಪವಿದೆ. ಈ ಹಿಂದೆಯೂ ಹಲವು ಬಾರಿ ತೆರಿಗೆ ವಿಚಾರಕ್ಕೆ ಮಾಲ್‌ಗೆ ಬೀಗ ಹಾಕಲಾಗಿತ್ತು. ಸದ್ಯ ಅಂದಾಜು ₹32 ಕೋಟಿ ತೆರಿಗೆ ಪಾವತಿ ಬಾಕಿಯಿದೆ ಎನ್ನಲಾಗುತ್ತಿದೆ.ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(BBMP) ಮಂತ್ರಿ ಮಾಲ್‌ಗೆ ಒನ್‌ ಟೈಂ ಪೇಮೆಂಟ್‌ಗೆ(One time payment) ಅವಕಾಶ ನೀಡಿತ್ತಾದರೂ ಅದನ್ನು ಪಾವತಿಸುವಲ್ಲಿ ಮಾಲ್‌ ವಿಫಲವಾಗಿದೆ.ಬಿಬಿಎಂಪಿ ಕಾಯ್ದೆ 2020ರ ಕಲಂ 156 ಹಾಗೂ ದಿನಾಂಕ 2023ರ ಡಿಸೆಂಬರ್ 06 ರ ಸುತ್ತೊಲೆಯಂತೆ ವ್ಯಾಪಾರ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ.ಶನಿವಾರ ವಾರಾಂತ್ಯದ ದಿನವಾಗಿರುವುದರಿಂದ ಮಂತ್ರಿ ಮಾಲ್‌ ವಹಿವಾಟು ಹೆಚ್ಚಾಗಿರುತ್ತದೆ. ಆದರೆ, ವಾರಾಂತ್ಯದ ದಿನವೇ ಮಾಲ್‌ನ ಮುಖ್ಯ ದ್ವಾರಗಳಿಗೆ ಬೀಗ ಹಾಕುವ ಮೂಲಕ ಬಿಬಿಎಂಪಿ ಮಂತ್ರಿ ಮಾಲ್‌ಗೆ ಬಿಸಿ ಮುಟ್ಟಿಸಿದೆ.

Related News

spot_img

Revenue Alerts

spot_img

News

spot_img