26.6 C
Bengaluru
Friday, November 22, 2024

ಬ್ರಿಟೀಷರ ಕಾಲದಲ್ಲಿ ಆಸ್ತಿ ನೋಂದಣಿ ಹೇಗಿತ್ತು ಗೊತ್ತಾ? ಪ್ರೆಸಿಡೆನ್ಸಿ ರಿಜಿಸ್ಟ್ರಾರ್ ಬಗ್ಗೆ ತಿಳಿಯಿರಿ

ಮನುಷ್ಯ ಸಮಾಜ ಜೀವಿಯಾದ ಬಳಿಕ ಸಂಚಾರಿಯಾಗದೆ ಒಂದು ನೆಲೆಯಲ್ಲಿ ವಾಸಿಸುವುದನ್ನು ಮತ್ತು ತನ್ನ ಆಹಾರಕ್ಕಾಗಿ ಕೃಷಿ ಮಾಡುವುದನ್ನು ಆರಂಭ ಮಾಡಿದ. ಕೃಷಿ ಮಾಡುವುದನ್ನು, ತನಗೆ ಸೇರಿದ ಕೃಷಿ ಭೂಮಿ, ಮನೆ, ಆಸ್ತಿ ಮಾಡಿಕೊಳ್ಳುವುದನ್ನು ಆರಂಭಿಸಿದ. ರಾಜ- ಮಹಾರಾಜರ ಕಾಲದಿಂದ, ಬ್ರಿಟೀಷರ ಆಡಳಿತದಲ್ಲಿರವಾಗಲೂ ಸಹ ತನ್ನ ಪಾಲಿನ ಸ್ವತ್ತುಗಳು ಏನು ಇವೆಯೋ ಅದನ್ನು ತನ್ನ ಸ್ವಂತದ್ದಾಗಿ ಮಾಡಿಕೊಳ್ಳುವುಕ್ಕೆ ಅದನ್ನು ಅಧಿಕೃತ ಪ್ರಾಧಿಕಾರಗಳ ಮೂಲಕ ನೋಂದಣಿ ಮಾಡಿಸಿಕೊಂಡು ಸಂರಕ್ಷಿಸುವ ಪ್ರಕ್ರಿಯೆ ನಡೆದೇ ಇರುತ್ತದೆ.

ನಾವು ಸದ್ಯ ನೋಂದಣಾಧಿಕಾರಿಗಳು (ಸಬ್‌ ರಿಜಿಸ್ಟ್ರಾರ್) ಕಚೇರಿಗಳಲ್ಲಿ ಯಾವುದೇ ಆಸ್ತಿ, ಜಮೀನು, ಮನೆ, ನಿವೇಶನಗಳ ನೋಂದಣಿ ಮಾಡಿಕೊಳ್ಳುತ್ತೇವೆ. ಆದರೆ, ಬ್ರಿಟೀಷರ ಕಾಲದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಹೇಗಿತ್ತು, ಯಾವ ಪದ್ಧತಿ ಅನುಸರಿಸಲಾಗುತ್ತಿತ್ತು, ನೋಂದಣಿ ಪ್ರಕ್ರಿಯೆ ಹಂತಗಳು ಹೇಗಿದ್ದವು ಎಂಬುದನ್ನು ಇಲ್ಲಿ ತಿಳಿಯಬಹುದು.

ಸ್ವಾತಂತ್ರ್ಯ ಪೂರ್ವದಲ್ಲಿ ಎಂದರೆ ಬ್ರಿಟೀಷರು ಭಾರತೀಯ ನೋಂದಣಿ ಕಾಯ್ದೆ 1908 ರ ಅನ್ವಯ ಸ್ವತ್ತುಗಳ ಅಥವಾ ಆಸ್ತಿಯ ನೋಂದಣಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನಿರ್ವಹಿಸಲಾಗುತ್ತಿತ್ತು. ಇದರ ಪ್ರಕಾರ ಜಿಲ್ಲೆಗಳು ಹಾಗೂ ಉಪ ಜಿಲ್ಲೆಗಳು ಎಂಬ ತತ್ವದಡಿ ಆಸ್ತಿಗಳನ್ನು ಜಿಲ್ಲೆಗೆ ಸಂಬಂಧಪಟ್ಟ ಸ್ವತ್ತುಗಳನ್ನು ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಉಪ ಜಿಲ್ಲೆಗೆ ಸಂಬಂಧಪಟ್ಟ ಸ್ವತ್ತುಗಳನ್ನು ಉಪನೋಂದಣಾಧಿಕಾರಿ ನೋಂದಣಿ ಮಾಡುವ ಪದ್ಧತಿ ಇದೆ.

ಪ್ರೆಸಿಡೆನ್ಸಿ ರಿಜಿಸ್ಟ್ರಾರ್
ಆದರೆ, ಇಡೀ ದೇಶದಲ್ಲಿ ನಾಲ್ಕು ಪ್ರೆಸಿಡೆನ್ಸಿ ರಿಜಿಸ್ಟ್ರಾರ್ ಕಚೇರಿಗಳು ಇದ್ದವು. ಅವುಗಳೆಂದರೆ ಮದ್ರಾಸ್ ಪ್ರೆಸಿಡೆನ್ಸಿ ರಿಜಿಸ್ಟ್ರಾರ್, ಮುಂಬೈ ಪ್ರೆಸಿಡೆನ್ಸಿ ರಿಜಿಸ್ಟ್ರಾರ್, ಕಲ್ಕತ್ತಾ ಪ್ರೆಸಿಡೆನ್ಸಿ ರಿಜಿಸ್ಟ್ರಾರ್ ಮತ್ತು ದೆಹಲಿ ಪ್ರೆಸಿಡೆನ್ಸಿ ರಿಜಿಸ್ಟ್ರಾರ್.

ಪ್ರೆಸಿಡೆನ್ಸಿ ರಿಜಿಸ್ಟ್ರಾರ್ ವ್ಯಾಪ್ತಿ ಮತ್ತು ಕರ್ತವ್ಯ ಎಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತೆ ಮದ್ರಾಸ್ ಪ್ರಾಂತ್ಯಕ್ಕೆ ಸಂಬಂಧಪಟ್ಟ ಆಸ್ತಿಗಳೆಲ್ಲವನ್ನೂ ಮದ್ರಾಸ್ ಪ್ರೆಸಿಡೆನ್ಸಿ ರಿಜಿಸ್ಟ್ರಾರ್ ಮಾಡುತ್ತಿದ್ದರು. ಅದೇ ರೀತಿ ಮುಂಬೈ ಪ್ರಾಂತ್ಯ, ಕಲ್ಕತ್ತಾ ಹಾಗೂ ದೆಹಲಿ ಪ್ರಾಂತ್ಯಗಳು ಆಯಾ ಪ್ರಾಂತ್ಯದ ಸ್ವತ್ತುಗಳನ್ನು ನೋಂದಣಿ ಮಾಡುತ್ತಿದ್ದವು.

ನೋಂದಣಿ ಮಾಡಿದ ನಂತರ ಯಾವ ಉಪಜಿಲ್ಲೆಗೆ ಬರುತ್ತದೆ ಅಲ್ಲಿನ ಉಪನೋಂದಣಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಮುಖಾಂತರ ಮೆಮೋ ಎಂಬ ದಾಖಲೆಗಳನ್ನು ಸಲ್ಲಿಸುತ್ತಿದ್ದರು. ಈ ಮೆಮೋ ದಾಖಲೆಗಳ ಅನ್ವಯ ಉಪನೋಂದಣಾಧಿಕಾರಿಗಳು ಅವರ ಋಣಭಾರ (ಇಸಿ) ವಹಿಯಲ್ಲಿ ನೋಂದಾಯಿಸಿಕೊಂಡು ಮೆಮೋವನ್ನು ಫೈಲ್ ಮಾಡಿಕೊಳ್ಳುತ್ತಿದ್ದರು. ಯಾರೇ ಇಸಿಗೆ ಅರ್ಜಿ ಹಾಕಿದರೆ ಆ ಇಸಿಯಲ್ಲಿ ಆ ಸ್ವತ್ತಿನ ನಮೂದಾಗಿ ಆ ಸ್ವತ್ತು ಎಲ್ಲಿ ನಮೂದಾಗಿದೆ ಎಂದು ಸಂಬಂಧಪಟ್ಟ ಪಾರ್ಟಿಯವರ ತಿಳಿವಳಿಕೆಗೆ ಬರುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಸಿಡೆನ್ಸಿ ರಿಜಿಸ್ಟ್ರಾರ್ ಎಂಬ ಕಾಯ್ದೆಯನ್ನು ಸರ್ಕಾರವು ರದ್ದುಗೊಳಿಸಿದೆ.

ಪ್ರೆಸಿಡೆನ್ಸಿ ರಿಜಿಸ್ಟ್ರಾರ್‌ಗಳು ನೋಂದಣಿಯಾದ ಆಸ್ತಿಯನ್ನು ಮೆಮೋ ಮೂಲಕ ಕಳುಹಿಸುವಾಗ ಕೆಲವು ಮೆಮೋ ಉಪನೋಂದಣಾಧಿಕಾರಿಗೆ ತಲುಪದೆ ಅಥವಾ ಕೈತಪ್ಪಿನಿಂದ ಬಿಟ್ಟಿರುವುದೂ ಸಹ ಇತ್ತೀಚೆಗೆ ತಿಳಿದುಬಂದಿದೆ. ಅದರನ್ವಯ ಸಂಬಂಧಪಟ್ಟ ಪಾರ್ಟಿಗಳು ಪ್ರೆಸಿಡೆನ್ಸಿ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾದ ಇಟ್ಟುಕೊಂಡಿದ್ದು ಅಥವಾ ಅದರ ಬಗ್ಗೆ ವಿಚಾರ ತಿಳಿದಿದ್ದು ಈ ಪದ್ಧತಿಯು ನಡೆಯದಿದ್ದರೆ ಸಂಬಂಧಪಟ್ಟ ಪ್ರೆಸಿಡೆನ್ಸಿ ರಿಜಿಸ್ಟ್ರಾರ್ ಕಚೇರಿ ಹಾಲಿ ಇವು ಜಿಲ್ಲಾ ನೋಂದಣಾಧಿಕಾರಿ ಕಚೇರಿ ಇರಬಹುದು ಅಥವಾ ಉಪನೋಂದಣಾಧಿಕಾರಿ ಕಚೇರಿ ಇರಬಹುದು. ಇಲ್ಲಿಂದ ಈಗಲೂ ಸಹ ಸಂಬಂಧಪಟ್ಟ ಉಪನೋಂದಣಾಧಿಕಾರಿಗೆ ಜಿಲ್ಲಾಧಿಕಾರಿಗಳ ಮುಖೇನ ಮೆಮೊ ಕಳುಹಿಸಿ ದಾಖಲೆಗಳನ್ನು ಅಪ್‌ಡೇಟ್ ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ.

Related News

spot_img

Revenue Alerts

spot_img

News

spot_img